ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ
ಧನರಾಜ್ ಅವರದ್ದು ಕೂಡು ಕುಟುಂಬ. ಈಗ ಇಡೀ ಮನೆ ಬಿಗ್ ಬಾಸ್ಗೆ ಬಂದಿದೆ. ಈ ವೇಳೆ ಸಾಕಷ್ಟು ಫನ್ ಇತ್ತು. ಆ ಬಳಿಕ ಅವರ ಪತ್ನಿ ಕೂಡ ದೊಡ್ಮನೆ ಒಳಗೆ ಬಂದಿದ್ದಾರೆ. ಈ ವೇಳೆ ಒಂದು ಫನ್ ಘಟನೆ ನಡೆದಿದೆ. ಧನರಾಜ್ ಅವರ ಬಗ್ಗೆ ಪತ್ನಿ ಅನುಮಾನ ಹೊರ ಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್. ಯಾವುದೇ ಟಾಸ್ಕ್ಗಳು ನಡೆಯುತ್ತಿಲ್ಲ. ಕುಟುಂಬದವರು ಬಂದು ಹೋಗುತ್ತಿದ್ದಾರೆ. ಈಗಾಗಲೇ ಮೋಕ್ಷಿತಾ, ಗೌತಮಿ, ತ್ರಿವಿಕ್ರಂ, ಮಂಜು ಕುಟುಂಬದವರು ಬಂದು ಹೋಗಿದ್ದಾರೆ. ಈಗ ಧನರಾಜ್ ಅವರ ಕೂಡು ಕುಟುಂಬ ಕೂಡ ಬಂದಿದೆ. ಅಷ್ಟೇ ಅಲ್ಲ, ಅವರ ಪತ್ನಿ ಆಗಮಿಸಿ ಧನರಾಜ್ ಬಗ್ಗೆ ಅನುಮಾನ ಹೊರಹಾಕಿದ್ದಾರೆ. ಐಶ್ವರ್ಯಾಗೆ ಲೈನ್ ಹೋಡಿತಾ ಇದ್ರಾ ಎಂದು ಕೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos