AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake passport: ಕೊಲೆ ಪ್ರಕರಣದ ತನಿಖೆ ವೇಳೆ ಪಾಸ್​​ಪೋರ್ಟ್ ಜಾಲ ಬೆಳಕಿಗೆ, ಗ್ಯಾಂಗ್ ಸೆರೆ

fake passport: ನಕಲಿ ದಾಖಲೆ ಪಡೆದು ಪಾಸ್​ಪೋರ್ಟ್ ಮಾಡಿಸುತ್ತಿದ್ದ ಗ್ಯಾಂಗ್ ಸೆರೆ ಸಿಕ್ಕಿದ್ದು, ಬೆಂಗಳೂರಿನ ಬಸವನಗುಡಿ ಪೊಲೀಸರಿಂದ 9 ಆರೋಪಿಗಳ ಬಂಧನವಾಗಿದೆ. ನಕಲಿ ಅಂಕಪಟ್ಟಿ, ಟಿಸಿ, ಛಾಪಾ ಕಾಗದ, ಆಧಾರ್ ಕಾರ್ಡ್ ಬಳಸಿ ಆರೋಪಿಗಳು ಗ್ರಾಹಕರಿಂದ 1 ಪಾಸ್​​ಪೋರ್ಟ್​ಗೆ 45 ಸಾವಿರ ರೂ. ಪಡೆಯುತ್ತಿದ್ದರು.

Fake passport: ಕೊಲೆ ಪ್ರಕರಣದ ತನಿಖೆ ವೇಳೆ ಪಾಸ್​​ಪೋರ್ಟ್ ಜಾಲ ಬೆಳಕಿಗೆ, ಗ್ಯಾಂಗ್ ಸೆರೆ
ಕೊಲೆ ಪ್ರಕರಣದ ತನಿಖೆ ವೇಳೆ ಪಾಸ್​​ಪೋರ್ಟ್ ಜಾಲ ಬೆಳಕಿಗೆ, ಗ್ಯಾಂಗ್ ಸೆರೆ
TV9 Web
| Edited By: |

Updated on: Nov 09, 2022 | 12:56 PM

Share

ಬೆಂಗಳೂರು: ನಕಲಿ ದಾಖಲೆ ಪಡೆದು ಪಾಸ್​ಪೋರ್ಟ್ ಮಾಡಿಸುತ್ತಿದ್ದ ಗ್ಯಾಂಗ್ ಸೆರೆ ಸಿಕ್ಕಿದ್ದು, ಬೆಂಗಳೂರಿನ ಬಸವನಗುಡಿ ಪೊಲೀಸರಿಂದ 9 ಆರೋಪಿಗಳ ಬಂಧನವಾಗಿದೆ. ನಕಲಿ ಅಂಕಪಟ್ಟಿ, ಟಿಸಿ, ಛಾಪಾ ಕಾಗದ, ಆಧಾರ್ ಕಾರ್ಡ್ ಬಳಸಿ ಆರೋಪಿಗಳು ಗ್ರಾಹಕರಿಂದ 1 ಪಾಸ್​​ಪೋರ್ಟ್​ಗೆ 45 ಸಾವಿರ ರೂ. ಪಡೆಯುತ್ತಿದ್ದರು. ಇತ್ತೀಚೆಗೆ ಒಬ್ಬ ಕಳ್ಳ ಪಾಸ್​ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ಹಾರಿದ್ದ ನಿದರ್ಶನವೂ ಇದೆ. ಶಿವಮೊಗ್ಗದ ಓರ್ವ ಕೊಲೆ ಆರೋಪಿ ದುಬೈಗೆ ಹೋಗಿರುವ ಮಾಹಿತಿ ಇದೆ. ಕೊಲೆ ಪ್ರಕರಣದ ತನಿಖೆ ವೇಳೆ ಈ ನಕಲಿ ಪಾಸ್​​ಪೋರ್ಟ್ (fake passport) ಜಾಲ ಬೆಳಕಿಗೆ ಬಂದಿದೆ.

ತಾವೇ ಮಾರ್ಕ್ಸ್ ಕಾರ್ಡ್, ಟಿಸಿ ಸಿದ್ಧಪಡಿಸುತ್ತಿದ್ದ ಆರೋಪಿಗಳು ಆಧಾರ್ ಕಾರ್ಡ್​ನಲ್ಲಿ ಫೋಟೋ ಎಡಿಟ್ ಮಾಡಿ ಕಾರ್ಡ್ ನಕಲು ಮಾಡುತ್ತಿದ್ದರು. ಇದರಿಂದ ಆರೋಪಿಗಳು ಭಾರತ, ಶ್ರೀಲಂಕಾದ ಪಾಸ್​ಪೋರ್ಟ್ ಪಡೆದಿದ್ದಾರೆ. ಬಂಧಿತ ಆರೋಪಿಗಳಿಂದ ನಕಲಿ ಟಿಸಿ, ನಕಲಿ ಆಧಾರ್ ಕಾರ್ಡ್, ನಕಲಿ ಮಾರ್ಕ್ಸ್ ಕಾರ್ಡ್, ಅಸಲಿ ಪಾಸ್​​ಪೋರ್ಟ್​​ಗಳನ್ನು ಬಸವನಗುಡಿ ಪೊಲೀಸರು (Basavanagudi police) ವಶಕ್ಕೆ ಪಡೆದಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀಸಾ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿ ಬಂಧನ

ವೀಸಾ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಕೇರಳ ಮೂಲದ ಶ್ರೀನಾಥ್ ಎಂಬ ಆರೋಪಿಯನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಕೊಡಗು, ದ.ಕನ್ನಡ, ಕೇರಳ ಸೇರಿದಂತೆ ಅನೇಕ ಕಡೆ 60ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪ ಆರೋಪಿ ವಿರುದ್ಧ ಕೇಳಿ ಬಂದಿದೆ. ಆರೋಪಿ, ವೀಸಾ ಕೊಡಿಸಲು ಪ್ರತಿಯೊಬ್ಬರಿಂದ ಲಕ್ಷಾಂತರ ರೂ. ಸಂಗ್ರಹ ಮಾಡಿದ್ದ. ಕೊನೆಗೆ ವೀಸಾ ಸಿಗದೆ, ಹಣ ಕಳೆದುಕೊಂಡು ಜನರು ಕಂಗಾಲಾಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೈಂಗಿಕ ದೌರ್ಜನ್ಯ ಆರೋಪ: ಬೆಂಗಳೂರಿನ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಅರೆಸ್ಟ್

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ನಾಲ್ಕು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿ ದೈಹಿಕ ಶಿಕ್ಷಕ ಆಂಜಿನಪ್ಪ (50)ನನ್ನು ಪೋಕ್ಸೋ ಕಾಯ್ದೆಯಡಿ ಬೆಂಗಳೂರಿನ ಹೆಬ್ಬಾಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮೊಬೈಲ್ ಕದ್ದ ಆರೋಪ: ಬಾಲಕನ ಮೇಲೆ ಪೊಲೀಸ್ ಕಾನ್ಸ್‌ಟೇಬಲ್‌ ಹಲ್ಲೆ

ಮೊಬೈಲ್ ಕದ್ದ ಆರೋಪದ ಮೇಲೆ ಪೊಲೀಸ್ ಕಾನ್ಸ್‌ಟೇಬಲ್‌ ಬಾಲಕನ‌ ಮೇಲೆ ಹಲ್ಲೆ ನಡೆಸಿದ್ದು ಬಾಲಕ ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎಂಟನೇ ತರಗತಿ ವಿದ್ಯಾರ್ಥಿ ಪ್ರೀತಂ (14) ಹಲ್ಲೆಗೊಳಗಾದ ಬಾಲಕ. ಹಾಸನದ ಬೇಲೂರು ತಾಲೂಕಿನ ಮುಂಡುಗಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹಾಸ್ಟೆಲ್‌ನಲ್ಲಿ ಓದಿಕೊಂಡಿದ್ದ ಪ್ರೀತಂ ರಜೆ ಇದ್ದಿದ್ದರಿಂದ ತನ್ನ ಅಜ್ಜಿಯ ಮನೆಗೆ ಬಂದಿದ್ದ. ಈ ವೇಳೆ ಸಂಬಂಧಿಕರ ಮದುವೆ ಹಿನ್ನೆಲೆ ಪ್ರೀತಂ ಕೂಡ ಮದುವೆಗೆ ಬಂದಿದ್ದ. ಮದುವೆ ಮನೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಶಾಲಿನಿ ಮೊಬೈಲ್ ಕಳ್ಳತನವಾಗಿದೆ. ಪತ್ನಿ ಮೊಬೈಲ್ ಕಾಣೆಯಾದ ಬಗ್ಗೆ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ಶಾಲಿನಿ ಪತಿ ಜಗದೀಶ್ ಬಾಲಕನನ್ನು ಕರೆದು ಮೊಬೈಲ್ ಕದ್ದ ಬಗ್ಗೆ ವಿಚಾರಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Also read:

ಹಿಂದೂ ಪದದ ಯಥಾರ್ಥ ವಿಶ್ಲೇಷಣೆಗೆ ಸಮಿತಿ ರಚಿಸಲು ಕೋರಿ ಸಿಎಂಗೆ ಸತೀಶ್ ಜಾರಕಿಹೊಳಿ ಪತ್ರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಜಗದೀಶ್ ಮದುವೆ ದಿನ ಮೊಬೈಲ್ ಕಾಣೆಯಾಗಿದ್ದರಿಂದ ಬಾಲಕ ಪ್ರೀತಂ ಮೊಬೈಲ್ ಕದ್ದಿರೋ ಅನುಮಾನದಿಂದ ವಿಚಾರಣೆ ಮಾಡಿದ್ದಾರೆ. ಪ್ರೀತಂ ನನಗೆ ಗೊತ್ತಿಲ್ಲ ಎಂದು ಹೇಳಿದರೂ ಕೇಳದೆ ಹಲ್ಲೆ ಮಾಡಿದ್ದಾರೆ. ಪ್ರೀತಂನನ್ನ ಕರೆದೊಯ್ದು ಜೋಳದ ಹೊಲದಲ್ಲಿ ಹಗ್ಗದಿಂದ ಕಟ್ಟಿ ಪೊಲೀಸ್ ಪೇದೆ ಜಗದೀಶ್ ಹಾಗೂ ಆತನ ಸ್ನೇಹಿತ ಶೈಲೇಶ್ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಲ್ಲೆ ನಂತರ ಕೈಕಾಲು ಕಟ್ಟಿ ಜೋಳದ ಹೊಲದಲ್ಲೇ ಬಿಟ್ಟು ಹೋಗಿದ್ದಾಗಿ ಪೋಷಕರು ಆರೋಪ ಮಾಡಿದ್ದಾರೆ. ಬಾಲಕನ ನರಳಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಪ್ರೀತಂನನ್ನು ರಕ್ಷಿಸಿದ್ದಾರೆ. ಸದ್ಯ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರೀತಂ ಚಿಕಿತ್ಸೆ ಪಡೆಯುತ್ತಿದ್ದು ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ