ಮದ್ಯದ ಅಮಲಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಪುತ್ರನಿಂದ ಕಿರಿಕ್ ಆರೋಪ: ತಹಶೀಲ್ದಾರ್ ಕಾರಿಗೆ ಅಡ್ಡಬಂದು ಪುಂಡಾಟ
ನೆಲಮಂಗಲ ತಾಲ್ಲೂಕಿನಲ್ಲಿ ಮದ್ಯಪಾನ ಮಾಡಿದ ರಿಯಲ್ ಎಸ್ಟೇಟ್ ಉದ್ಯಮಿಯ ಪುತ್ರ ತಹಶೀಲ್ದಾರ್ ಕಾರಿಗೆ ಅಡ್ಡಗಟ್ಟಿ ಪುಂಡಾಟ ಮೆರೆದಿರುವಂತಹ ಘಟನೆ ನಡೆದಿದೆ. ಘಟನೆಯ ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಮದ್ಯಪಾನ ಮತ್ತು ಅತಿವೇಗ ಚಾಲನೆ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿವೆ.
ನೆಲಮಂಗಲ, ಜನವರಿ 01: ಮದ್ಯದ ಅಮಲಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಪುತ್ರನಿಂದ ಕಿರಿಕ್ ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಲ್ಯಾಂಕೋ ಟೋಲ್ ಬಳಿ ನಡೆದಿದೆ. ಕುಣಿಗಲ್ ತಹಶೀಲ್ದಾರ್ (Tahsildar) ರಶ್ಮಿ ಕಾರಿಗೆ ಅಡ್ಡಬಂದ ನೆಲಮಂಗಲದ ಉದ್ಯಮಿ ಡಾಬಾ ರಾಜಣ್ಣ ಪುತ್ರ ರವಿಗೌಡನಿಂದ ಪುಂಡಾಟ ಮೆರೆಯಲಾಗಿದೆ.
ತಹಶೀಲ್ದಾರ್ ರಶ್ಮಿ ಅವರು ಕುಣಿಗಲ್‌ನಿಂದ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ತಮ್ಮ ಕಾರಿಗೆ ಟಿಂಟೆಡ್ ಗ್ಲಾಸ್ ಬಳಸಿ ಅಡ್ಡಾಡುತ್ತಿದ್ದ ಆರೋಪಿ ರವಿಗೌಡ, ಸರ್ಕಾರಿ ಕಾರಿಗೆ ಅಡ್ಡ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಕೇಳಿಬಂದಿದೆ. 112ಗೆ ಕರೆ ಮಾಡಿದ ತಹಶೀಲ್ದಾರ್ ರಶ್ಮಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ರವಿಗೌಡನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ನೆಲಮಂಗಲ: ಸಾಕು ನಾಯಿ ಸತ್ತ ನೋವಿನಿಂದ ಅದರದ್ದೇ ಚೈನ್ ಬಳಸಿ ವ್ಯಕ್ತಿ ಆತ್ಮಹತ್ಯೆ
ಆರೋಪಿ ರವಿಗೌಡಗೆ ಸೇರಿದ KA 02 MW 1 ಡಿಫೆಕ್ಟಿವ್ ನಂಬರ್ ಪ್ಲೇಟಿನ ಕಾರು ಕೂಡ ಸೀಜ್ ಮಾಡಿರುವ ಪೊಲೀಸರು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮದ್ಯ ಸೇವಿಸಿ ಕಾರು ಚಲಾವಣೆ ಸೇರಿ ಹಲವು ಪ್ರಕರಣ ದಾಖಲು ಮಾಡಿದ್ದಾರೆ.
ಮನೆಯಲ್ಲಿ ನೇಣುಬಿಗಿದುಕೊಂಡು ಯುವತಿ ಆತ್ಮಹತ್ಯೆ: ತಿಳಿಯದ ಸಾವಿನ ರಹಸ್ಯ
ಬಯೋಕಾನ್ ಕಂಪನಿಯ ಜೂನಿಯರ್ ಎಕ್ಸಿಕ್ಯೂಟಿವ್ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರಿನ ಮಲ್ಲಸಂದ್ರದಲ್ಲಿ ನಡೆದಿದೆ. ಮನೆಯಲ್ಲಿ ನೇಣುಬಿಗಿದುಕೊಂಡು ರುಚಿತಾ(25) ನೇಣಿಗೆ ಶರಣಾದ ಜೂನಿಯರ್ ಎಕ್ಸಿಕ್ಯೂಟಿವ್. ಆತ್ಮಹತ್ಯೆಗೆ ನಿಖರ ಕಾರಣ ಮನೆಯವರಿಗೂ ತಿಳಿದಿಲ್ಲ.
ಇದನ್ನೂ ಓದಿ: ದೇವನಹಳ್ಳಿ: ಗೆಳೆಯನ ಹತ್ಯೆ ಮಾಡಿ ದೃಶ್ಯಂ ಸಿನಿಮಾ ರೀತಿ ಕಥೆ ಕಟ್ಟಿದ ವ್ಯಕ್ತಿ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ
ಆಂಧ್ರದ ಅನಂತಪುರ ಜಿಲ್ಲೆಯ ಬೇಸ್ತರಹಳ್ಳಿಯ ನಿವಾಸಿ. ತಂದೆ, ತಾಯಿ ಹೆಗ್ಗನಹಳ್ಳಿಯಲ್ಲಿರುವ ಬಟ್ಟೆ ಅಂಗಡಿಯಲ್ಲಿರುವಾಗ ಇತ್ತ ರುಚಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರೆ ಮಾಡಿದರು ಸ್ವೀಕರಿಸದ ಹಿನ್ನೆಲೆ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.