AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ಸಾಕು ನಾಯಿ ಸತ್ತ ನೋವಿನಿಂದ ಅದರದ್ದೇ ಚೈನ್ ಬಳಸಿ ವ್ಯಕ್ತಿ ಆತ್ಮಹತ್ಯೆ

ಅನೇಕರಿಗೆ ಪ್ರಾಣಿಗಳೆಂದರೆ ಪ್ರೀತಿ. ಅದರಲ್ಲೂ ಸಾಕು ಪ್ರಾಣಿಗಳನ್ನು ಮನೆ ಸದಸ್ಯನಂತೆಯೇ ಮುದ್ದಿನಿಂದ ಸಾಕುತ್ತಾರೆ. ಆದರೆ, ಇಂಥ ಪ್ರಾಣಿ ಪ್ರೀತಿಯೇ ವ್ಯಕ್ತಿಯೊಬ್ಬರ ಪಾಲಿಗೆ ಮುಳುವಾಗಿದೆ. ಮನೆಯಲ್ಲಿದ್ದ ಪ್ರೀತಿಯ ಸಾಕು ನಾಯಿ ಅನಾರೋಗ್ಯದಿಂದ ಸತ್ತ ಬೇಸರದಲ್ಲಿ ಅದೇ ನಾಯಿಯ ಚೈನ್​ ಬಳಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹೆಗ್ಗಡದೇವನಪುರದಲ್ಲಿ ನಡೆದಿದೆ.

ನೆಲಮಂಗಲ: ಸಾಕು ನಾಯಿ ಸತ್ತ ನೋವಿನಿಂದ ಅದರದ್ದೇ ಚೈನ್ ಬಳಸಿ ವ್ಯಕ್ತಿ ಆತ್ಮಹತ್ಯೆ
ಸಾಕುನಾಯಿ ‘ಬೌನ್ಸಿ’ ಮತ್ತು ರಾಜಶೇಖರ್
ಬಿ ಮೂರ್ತಿ, ನೆಲಮಂಗಲ
| Updated By: Ganapathi Sharma|

Updated on: Jan 01, 2025 | 11:14 AM

Share

ನೆಲಮಂಗಲ, ಜನವರಿ 1: ಬೆಂಗಳೂರು ಉತ್ತರ ತಾಲೂಕು ಹೆಗ್ಗಡದೇವನಪುರ ಗ್ರಾಮದ ರಾಜಶೇಖರ್ (33) ಎಂಬವರು ಸಾಕುನಾಯಿ ಸಾವನ್ನಪ್ಪಿದ ಬೇಸರದಲ್ಲಿ ಅದೇ ನಾಯಿಯ ಚೈನ್ (ಸಂಕೋಲೆ) ಬಳಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ರಾಜಶೇಖರ್ ಅವರ ಬಳಿ ಇದ್ದ ಜರ್ಮನ್ ಶಫರ್ಡ್ ತಳಿಯ ಸಾಕುನಾಯಿ ‘ಬೌನ್ಸಿ’ ಮಂಗಳವಾರ ಮೃತಪಟ್ಟಿತ್ತು.

ರಾಜಶೇಖರ್ 9 ವರ್ಷಗಳ ಹಿಂದೆ ‘ಬೌನ್ಸಿ’ ಎಂಬ ಹೆಸರು ನೀಡಿ ನಾಯಿಯನ್ನು ಖರೀದಿಸಿ ತಂದಿದ್ದರು. ಮಂಗಳವಾರ ‘ಬೌನ್ಸಿ’ ಅನಾರೋಗ್ಯದಿಂದ ಮೃತಪಟ್ಟಿತ್ತು. ತಮ್ಮ ಜಮೀನಿನಲ್ಲಿ ‘ಬೌನ್ಸಿ’ಯ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದಿದ್ದ ರಾಜಶೇಖರ್ ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಳಗಿನ ಜಾವದಲ್ಲಿ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಮತ್ತು ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಾರಮ್ಮನಿಗೆ ಪತ್ರ ಬರೆದ ಪತ್ನಿ

Letter To Maramma

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿಯೊಬ್ಬರು ಪ್ರಸಿದ್ಧ ಬಾಗಲಗುಂಟೆ ಮಾರಮ್ಮನಿಗೆ ಪತ್ರ ಬರೆದು ಹರಕೆ ಹೊತ್ತಿರುವ ವಿಚಾರ ಬೆಳಕಿಗೆ ಬಂದಿದೆ. ದಂಪತಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರೂ ಪತಿ ರಮೇಶನಿಗೆ ಬೇರೆ ಯುವತಿ ಜೊತೆ ಅನೈತಿಕ ಸಂಬಂಧ ಇದೆ ಎನ್ನಲಾಗಿದೆ. ಅದೇ ಯುವತಿಯನ್ನ ಮದುವೆಯಾಗಲೂ ಸಿದ್ಧನಾಗಿದ್ದಾನೆ. ಹೀಗಾಗಿ ಆತನ ವಿರುದ್ಧ ಪತ್ರ ಬರೆದಿರುವ ಪತ್ನಿ, ಪತಿ ರಮೇಶ ಮನೆ ಬಿಟ್ಟು ಹೋಗಿದ್ದಾರೆ. ಮತ್ತೆ ನನಗೆ ಪೋನ್ ಮಾಡಿ ಮನೆಗೆ ವಾಪಸ್ ಬರುವಂತೆ ಮಾಡು ತಾಯಿ ಎಂದು ಬೇಡಿಕೊಂಡಿದ್ದಾಳೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು

ಮಕ್ಕಳು ಅರೋಗ್ಯವಾಗಿರಲಿ. ಪತಿಯ ಮದುವೆಯನ್ನು ತಡೆಗಟ್ಟಿದರೆ ಹಣ್ಣು-ಕಾಯಿ, ಸೀರೆ ಕೊಟ್ಟು ನಿನ್ನ ಮಡಿಲು ತುಂಬುವುದಾಗಿ ಪತ್ರ ಬರೆದು ಹರಕೆ ಹೊತ್ತಿದ್ದಾಳೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ