ಆಟವಾಡುತ್ತಿದ್ದಾಗ ಬಂದೂಕಿನ ಟ್ರಿಗರ್ ಪ್ರೆಸ್ ಆಗಿ ಹಾರಿದ ಗುಂಡು; 7 ವರ್ಷದ ಬಾಲಕ ಸಾವು, ಒಬ್ಬರು ಅರೆಸ್ಟ್

ತಂದೆ-ತಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಾಜಿದ್ ಹಾಗೂ ಶಮಾ ನಾಡಬಂದೂಕಿನೊಂದಿಗೆ ಆಟವಾಡಿದ್ದಾರೆ. ಈ ವೇಳೆ ತನ್ನ ಅರಿವಿಗೆ ಬರೆದೇ ಸಾಜಿದ್ ಬಂದೂಕಿನ ಟ್ರಿಗರ್ ಒತ್ತಿದ್ದಾನೆ. ಇದರಿಂದ ಗುಂಡು ಶಮಾನಿಗೆ ತಗುಲಿದೆ.

ಆಟವಾಡುತ್ತಿದ್ದಾಗ ಬಂದೂಕಿನ ಟ್ರಿಗರ್ ಪ್ರೆಸ್ ಆಗಿ ಹಾರಿದ ಗುಂಡು; 7 ವರ್ಷದ ಬಾಲಕ ಸಾವು, ಒಬ್ಬರು ಅರೆಸ್ಟ್
ನಾಡಬಂದೂಕು
Follow us
TV9 Web
| Updated By: ಆಯೇಷಾ ಬಾನು

Updated on:Dec 18, 2022 | 10:50 AM

ರಾಮನಗರ: ನಾಡಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾಡಶಿವನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಡಬಂದೂಕಿನಿಂದ ಗುಂಡು ತಗುಲಿ ಶಮಾ(7) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ನಾಡಬಂದೂಕು ತೆಗೆದುಕೊಂಡು ಮಕ್ಕಳು ಆಟವಾಡುವಾಗ ಮೃತ ಶಮಾ ಸಹೋದರ ಸಾಜೀದ್(16) ಬಂದೂಕಿನ ಟ್ರಿಗರ್​ ಒತ್ತಿದ್ದಾನೆ. ಈ ವೇಳೆ ನಾಡಬಂದೂಕಿನ ಗುಂಡು ತಗುಲಿ ಶಮಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯುಪಿ ಮೂಲದ ಅಮಿನುಲ್ಲಾ, ಸಮ್​ಸೂನ್​ ಕುಟುಂಬ ಮೂರು ದಿನದ ಹಿಂದಷ್ಟೆ ಕೂಲಿ ಕೆಲಸಕ್ಕೆ ಬಂದಿದ್ದು ಮಲ್ಲೇಶ ಎಂಬಾತನ ಜಮೀನಿನಲ್ಲಿ ಕೆಲಸಕ್ಕಿದ್ದರು. ತಂದೆ-ತಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಾಜಿದ್ ಹಾಗೂ ಶಮಾ ನಾಡಬಂದೂಕಿನೊಂದಿಗೆ ಆಟವಾಡಿದ್ದಾರೆ. ಈ ವೇಳೆ ತನ್ನ ಅರಿವಿಗೆ ಬರೆದೇ ಸಾಜಿದ್ ಬಂದೂಕಿನ ಟ್ರಿಗರ್ ಒತ್ತಿದ್ದಾನೆ. ಇದರಿಂದ ಗುಂಡು ಶಮಾನಿಗೆ ತಗುಲಿದೆ. ಗುಂಡು ಹಾರಿಸಿದ ಸಾಜೀದ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಬಂದೂಕು‌ ಇಟ್ಟಿದ್ದ ತೋಟದ ಮಾಲೀಕ ಮಲ್ಲೇಶ್​ನನ್ನೂ ಬಂಧಿಸಲಾಗಿದೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಫ್ತಾ ನೀಡದಿದ್ದಕ್ಕೆ ವ್ಯಾಪಾರಿ ಮೇಲೆ ಲಾಂಗ್ ಬೀಸಿದ ಪುಂಡರು

ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ಹಫ್ತಾ ನೀಡದಿದ್ದಕ್ಕೆ ಮೀನಿನ ವ್ಯಾಪಾರಿ ಮೇಲೆ ಪುಂಡರು ಲಾಂಗ್ ಬೀಸಿದ್ದಾರೆ. ಬಾಣಸವಾಡಿಯ ಜೈಭಾರತ್ ನಗರದಲ್ಲಿ ಹಫ್ತಾ ಕೊಡಲಿಲ್ಲ ಎಂದು ಮೀನಿನ ವ್ಯಾಪಾರಿ ಮೇಲೆ ಪುಡಿ ರೌಡಿಗಳು ಲಾಂಗ್ ಬೀಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಸುದೇಶ್ ಎಂಬಾತನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ವಸತಿ ಶಾಲೆಯ ಮಕ್ಕಳ ಜೊತೆ ಭೋಜನ ಸವಿದ ಸಿಎಂ ಬೊಮ್ಮಾಯಿ, ಆರ್.ಅಶೋಕ್‌

ಬೆಂಗಳೂರು: ಅನ್ನ ಹಾಕಿದ ಕಂಪನಿಗೆ ಕನ್ನ ಹಾಕಿದ ಭೂಪ

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಒಳ್ಳೆಯವನಂತೆ ನಟಿಸಿ ಕಳ್ಳತನ ಮಾಡಿದ ನೌಕರ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿನಯ್ ಎಂಬಾತ ಓಗೋ (VOGO Bike) ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಬೈಕ್​ನ ಜಿಪಿಎಸ್ ಸಿಸ್ಟಂ ಸೇರಿ ಕಂಪನಿ ವ್ಯವಸ್ಥೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಈತ 8 ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ನೆಲೆಸಿದ್ದನು. ಇದೇ ವೇಳೆ ಐಷಾರಾಮಿ ಜೀವನಕ್ಕಾಗಿ ತನಗೆ ಅನ್ನ ಕೊಟ್ಟ ಕಂಪನಿಯ ಮೇಲೆ ಕಣ್ಣು ಹಾಕಿದ್ದಾನೆ.

ಓಗೋ ಕಂಪನಿಯ ಆಕ್ಟಿವಾಗಳನ್ನು ಕಳ್ಳತನ ಮಾಡಲು ತುಮಕೂರಿನ ಗೆಳೆಯ ನಂದನ್ ಸಂಪರ್ಕಿಸಿದ್ದಾನೆ. ಅದರಂತೆ ಇಬ್ಬರು ಜೊತೆಗೂಡಿ ಪ್ಲಾನ್ ರೂಪಿಸಿ ಓಗೋ ಕಂಪನಿ ಪಾರ್ಕಿಂಗ್ ಸ್ಥಳಗಳನ್ನ ಗುರುತಿಸಿ ಬೈಕ್​ನಲ್ಲಿದ್ದ ಜಿಪಿಎಸ್ ಸಿಸ್ಟಮ್ ಡಿಸ್ ಕನೆಕ್ಟ್ ಮಾಡುತ್ತಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:39 am, Sun, 18 December 22