ಬೆಂಗಳೂರು, (ಜುಲೈ 27): ಬೆಂಗಳೂರಿನ (Bengaluru) ಮಾಡೆಲ್ ವಿದ್ಯಾಶ್ರೀ (25) ಆತ್ಮಹತ್ಯೆ (Model Suicide Suicide) ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಕ್ಕ ಡೈರಿಯಲ್ಲಿ ಮಾಡೆಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಅಂಶಗಳು ಪತ್ತೆಯಾಗಿವೆ. ಮಾಡೆಲ್ ಆತ್ಮಹತ್ಯೆ ಹಿಂದೆ ಫೇಸ್ಬುಕ್ ಪ್ರಿಯಕರನಿಂದ ಲವ್ ಸೆಕ್ಸ್ ದೋಖಾ ಬೆಳಕಿಗೆ ಬಂದಿದೆ. ಹೌದು…21/07/23ರಂದು ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರದಲ್ಲಿ ವಿದ್ಯಾಶ್ರೀ ಆತ್ಮಹತ್ಯೆಗೆ ಪ್ರಿಯಕರನೇ ವಿಲನ್ ಎನ್ನುವ ಅಂಶ ಡೈರಿ ಹೇಳುತ್ತಿದೆ. ಡೈರಿಯಲ್ಲಿ ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿಶ್ರೀ ಡೈರಿಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಪ್ರಿಯಕರ ಅಕ್ಷಯ್ ಕಾರಣ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Bengaluru News: ಅಕ್ರಮ ಸಂಬಂಧ ಶಂಕೆ, ಪತ್ನಿಯನ್ನ ಕೊಂದು ಅತ್ತೆಗೆ ಕರೆ ಮಾಡಿದ
ಸಾವಿಗೆ ಅಕ್ಷಯ್ ಕಾರಣ. ನನ್ನನ್ನ ಒಂದು ನಾಯಿ ತರ ನೋಡುತ್ತಿದ್ದ. ನನಗೆ ಕೊಡಬೇಕಾದ ಹಣ ಕೇಳಿದ್ರೆ ನಮ್ಮ ಮನೆಯವರಿಗೆ ಕೆಟ್ಟ ಮಾತಿನಿಂದ ನಿಂದನೆ ಮಾಡಿದ್ದಾನೆ. ನನಗೆ ಮಾನಸಿಕ ಹಿಂಸೆ ಆಗಿದೆ. ನನಗೆ ಬದುಕಲು ಆಗಿತ್ತಿಲ್ಲ. ಅಮ್ಮ,ತಮ್ಮನಿಗೆ ಕ್ಷಮೆ ಇರಲಿ. ಎಲ್ಲಾ ಹುಡುಗಿಯರಿಗೆ ವಿನಂತಿ. ಯಾರನ್ನು ನಂಬಿ ಪ್ರೀತಿ ಮಾಡಬೇಡಿ ಗುಡ್ ಬೈ ಎಂದು ಡೈರಿಯಲ್ಲಿ ಡೆತ್ ನೋಟ್ ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.
ಇನ್ನು ವಿದ್ಯಾಶ್ರೀ ಸಾವಿಗೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆಯೆಂದು ಕುಟುಂಬಸ್ಥರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ್ವಯ ಜಿಮ್ ಕೋಚ್ ಅಕ್ಷಯ್(27) ಎನ್ನುವಾತನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.
ನನ್ನಸಾವಿಗೆ ಅಕ್ಷಯ್ ಕಾರಣ ಅವನು ನನ್ನ ನಾಯಿತರ ಟ್ರೀಟ್ ಮಾಡುತ್ತಾ ಇದ್ದಾನೆ. ನನಗೆ ಕೊಡಬೇಕಾದ 1 ಲಕ್ಷದ 76 ಸಾವಿರ ದುಡ್ಡು ಕೇಳಿದಾರೆ ನನಗೆ ನನ್ನ ಪ್ಯಾಮಿಲಿಗೆ ಕೆಟ್ಟ ಕೆಟ್ಟ ಮಾತಲ್ಲಿ ಬೈದು ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ನನ್ನ ಡಿಪ್ರೆಷನ್ಗೆ ಅಡಿಕ್ಟ್ ಮಾಡಿದ್ದಾನೆ. ಹೀಗಾಗಿ ನನಗೆ ಬದುಕಲು ಆಗುತ್ತಿಲ್ಲ. ಡೇ ಬೈ ಡೇ ನನಗೆ ತುಂಬಾ ಸ್ಟೇನ್ ಆಗುತ್ತಿದೆ. ಅಮ್ಮ ಗುರು ಮನು I am Sorry ದಯವಿಟ್ಟು ನನ್ನ ಕ್ಷಮಿಸಿ. ಎಲ್ಲಾ ಹುಡುಗಿಯಲ್ಲಿ ವಿನಂತಿ ದಯಬಿಟ್ಟು ಯಾರು ಲವ್ ಮಾಡಬೇಡಿ. Good bye this World ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಎಂಸಿಎ ಬಳಿಕ ಮಾಡೆಲ್ ಜೊತೆಗೆ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ವಿದ್ಯಾಶ್ರೀಗೆ ಫೇಸ್ಬುಕ್ನಲ್ಲಿ ಅಭಿಮಾನಿಯ ತರ ಜಿಮ್ ಕೋಚ್ ಅಕ್ಷಯ್ ಪರಿಚಯನಾಗಿದ್ದ. ಬಳಿಕ ಪರಿಚಯ ಪ್ರೀತಿಯಾಗಿ ಮಾರ್ಪಟ್ಟಿತ್ತು. ನಂತರ ಇಬ್ಬರು ಪರಸ್ಪರ ಪ್ರೀತಿಸಿದ್ದು, ಹಲವೆಡೆ ಜೊತೆ ಜೊತೆಯಾಗಿ ಸುತ್ತಾಡಿದ್ದರು. ಅಲ್ಲದೇ ಅಕ್ಷಯ್ ಮಾಡೆಲ್ ಬಳಿ ಸಾಕಷ್ಟು ಹಣ ಪೀಕಿದ್ದ. ಬಳಿಕ ಅದೇನು ಆಯ್ತು ಏನೋ ಮೂರು ತಿಂಗಳ ಹಿಂದೆ ಪ್ರೀತಿಯಲ್ಲಿ ಬಿರುಕು ಉಂಟಾಗಿದ್ದು, ಅಕ್ಷಯ್ ಫೋನ್ ಕಾಲ್ ಗೂ ಸಿಗದೆ ನಾಟ್ ರೀಚಬಲ್ ಆಗಿದ್ದ. ಇದರಿಂದ ಮಾನಸಿಕನೊಂದು ಮಾಡೆಲ್ ವಿದ್ಯಾಶ್ರೀ ಜುಲೈ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:48 am, Thu, 27 July 23