Bengaluru News: ಅಕ್ರಮ ಸಂಬಂಧ ಶಂಕೆ, ಪತ್ನಿಯನ್ನ ಕೊಂದು ಅತ್ತೆಗೆ ಕರೆ ಮಾಡಿದ

ಅಕ್ರಮ ಸಂಬಂಧ ಶಂಕೆ ಹಿನ್ನಲೆ ಪತಿಯೇ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದು ಅತ್ತೆಗೆ ಕರೆ ಮಾಡಿದ ಘಟನೆ ಮೂಡಲಪಾಳ್ಯದ ಶಿವಾನಂದನಗರದಲ್ಲಿ ನಡೆದಿದೆ. ಗೀತಾ (33) ಕೊಲೆಯಾದ ಮಹಿಳೆ.

Bengaluru News: ಅಕ್ರಮ ಸಂಬಂಧ ಶಂಕೆ, ಪತ್ನಿಯನ್ನ ಕೊಂದು ಅತ್ತೆಗೆ ಕರೆ ಮಾಡಿದ
ಮೃತ ಪತ್ನಿ, ಆರೋಪಿ ಗಂಡ
Follow us
Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 27, 2023 | 11:16 AM

ಬೆಂಗಳೂರು, ಜು.27: ಅಕ್ರಮ ಸಂಬಂಧ ಶಂಕೆ ಹಿನ್ನಲೆ ಪತಿಯೇ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದು ಅತ್ತೆಗೆ ಕರೆ ಮಾಡಿದ ಘಟನೆ ಮೂಡಲಪಾಳ್ಯ(Mudalapalya)ದ ಶಿವಾನಂದನಗರದಲ್ಲಿ ನಡೆದಿದೆ. ಗೀತಾ (33) ಕೊಲೆಯಾದ ಮಹಿಳೆ. ಆರೋಪಿ ಪತಿ ಶಂಕರ್​ ಹಾಗೂ ಮೃತ ಪತ್ನಿ ಗೀತಾ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳ ಕೂಡ ಇದ್ದಾರೆ. ಇನ್ನು ನಿನ್ನೆ(ಜು.26) ರಾತ್ರಿ ಮನೆಯಲ್ಲಿ ಪತ್ನಿಯನ್ನು ಕೊಲೆ ಮಾಡಿರುವ ಶಂಕರ್. ಬಳಿಕ ಗೀತಾ ತಾಯಿಗೆ ಕರೆ ಮಾಡಿ, ನಿಮ್ಮ ಮಗಳನ್ನ ಕೊಲೆ ಮಾಡಿರುವುದಾಗಿ ಹೇಳಿದ್ದ.

ವಿಚಾರ ತಿಳಿದು ಓಡೋಡಿ ಬಂದ ಗೀತಾ ತಾಯಿ

ಇನ್ನು ಹೊಸೂರಿನ ಮನೆಯಲ್ಲಿದ್ದ ಗೀತಾ ತಾಯಿ ವಿಚಾರ ತಿಳಿಯುತ್ತಿದ್ದಂತೆ ಮನೆಗೆ ಓಡೋಡಿ ಬಂದಿದ್ದಾರೆ. ಮನೆ ಬಾಗಿಲು ತಗೆದು ನೋಡಿದಾಗ ಮಗಳ ಶವ ಪತ್ತೆಯಾಗಿದೆ. ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಪತ್ನಿಯನ್ನ ಹತ್ಯೆಗೈದು, ಸೋಫಾ ಸೆಟ್ ಮೇಲೆ ಶವವನ್ನ ತಂದಿಟ್ಟಿದ್ದಾನೆ. ಇದೀಗ ಕೊಲೆ ಆರೋಪಿ ಶಂಕರ್​ನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಬೇರೆಯವನ ಜತೆ ಸಂಬಂಧ ಇದ್ರೆ ಡೈವರ್ಸ್ ಕೊಟ್ಟು ಹೋಗಿ, ಆದ್ರೆ ಗಂಡಂದಿರನ್ನು ಕೊಲೆ ಮಾಡ್ಬೇಡಿ: ಮಹಿಳೆಯರಲ್ಲಿ ವಿಶಿಷ್ಟ ಮನವಿ

ಚರಂಡಿಗೆ ಬಿದ್ದು ವೃದ್ಧೆ ಸಾವು

ಶಿವಮೊಗ್ಗ: ರಾಜ್ಯದ್ಯಂತ ಅಬ್ಬರದ ಮಳೆ ಆಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಲುವೆ ಗ್ರಾಮದಲ್ಲಿ ಚರಂಡಿಗೆ ಬಿದ್ದು ವೃದ್ಧೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆಲುವೆ ಗ್ರಾಮದ ಲಕ್ಷ್ಮಮ್ಮ(65) ಮೃತ ವೃದ್ಧೆ. ಈ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:11 am, Thu, 27 July 23

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ