ಪತಿಯ ಪಾಲಿನ ಆಸ್ತಿ ಕೇಳಿದ್ದಕ್ಕೆ ಶತ್ರುಗಳಾದ ಸಂಬಂಧಿಕರು; ಮಹಿಳೆಯ ಬರ್ಬರ ಕೊಲೆ
ಕಲಬುರಗಿ ನಗರದ ಕುಟುಂಬ ಕಲ್ಯಾಣ ನಗರದಲ್ಲಿ ಇಂದು ಮುಂಜಾನೆ ಹತ್ತು ಮೂವತ್ತರ ಸಮಯದಲ್ಲಿ ಮಹಿಳೆಯ ಬರ್ಬರ ಕೊಲೆಯಾಗಿದೆ. ಮಣ್ಣು, ಹೊಣ್ಣಿನ ವಿಚಾರಕ್ಕೆ ವೈಷಮ್ಯ ಬೆಳೆದರೆ ಸಂಬಂಧಿಗಳು ಶತ್ರುಗಳಾಗುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ.
ಕಲಬುರಗಿ: ಮಣ್ಣು, ಹೊಣ್ಣಿನ ವಿಚಾರಕ್ಕೆ ವೈಷಮ್ಯ ಬೆಳೆದರೆ ಸಂಬಂಧಿಕರು ಕೂಡ ಶತ್ರುಗಳಾಗುತ್ತಾರೆ. ಸಹೋದರರು ದಾಯಾದಿಗಳಾಗುತ್ತಾರೆ. ತನ್ನ ಪತಿ ಪಾಲಿನ ಆಸ್ತಿಯನ್ನು ಕೇಳಿದ್ದಕ್ಕೆ ಚಿಕ್ಕಮ್ಮನನ್ನೇ ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ಕಲಬುರಗಿ (Kalaburagi) ನಗರದಲ್ಲಿ ನಡೆದಿದೆ. ಇಂದು ಹಾಡುಹಗಲೇ ಈ ಘಟನೆ ನಡೆದಿದೆ. ವಿಜಯಲಕ್ಷ್ಮಿ ಮಠಪತಿ ಕೊಲೆಯಾದ ಮಹಿಳೆ.
ಮೂಲತ ಕಲಬುರಗಿ ತಾಲೂಕಿನ ಸಿಂದಗಿ ಬಿ ಗ್ರಾಮದ ನಿವಾಸಿಯಾಗಿರುವ ವಿಜಯಲಕ್ಷ್ಮಿ, ಕಳೆದ ಕೆಲವು ವರ್ಷಗಳಿಂದ ಪತಿಯೊಂದಿಗೆ ಕಲಬುರಗಿ ನಗರದಲ್ಲಿಯೇ ನೆಲೆಸಿದ್ದರು. ಪತಿ ಮಲ್ಕಯ್ಯಸ್ವಾಮಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದರೆ, ಪತ್ನಿ ವಿಜಯಲಕ್ಷ್ಮಿ ಮನೆಗೆಲಸ ಮಾಡಿಕೊಂಡಿದ್ದಳು. ದಂಪತಿಗೆ ನಾಲ್ಕು ಮಕ್ಕಳು ಕೂಡಾ ಇದ್ದಾರೆ.
ಇಂದು ಮುಂಜಾನೆ ಎಂದಿನಂತೆ ಮಲ್ಕಯ್ಯಸ್ವಾಮಿ ಕೆಲಸಕ್ಕೆ ಹೋಗಿದ್ದಾರೆ. ವಿಜಯಲಕ್ಷ್ಮಿ ಮಕ್ಕಳ ಜೊತೆ ಮನೆಯಲ್ಲಿದ್ದಳು. ಈ ಸಮಯದಲ್ಲಿ ವಿಜಯಲಕ್ಷ್ಮಿ ಮನೆಗೆ ಮಲ್ಕಯ್ಯಸ್ವಾಮಿಯ ಸಹೋದರನಾಗಿದ್ದ ದಿವಗಂತ ಕುಪಯ್ಯಸ್ವಾಮಿಯ ಮಕ್ಕಳಾಗಿರುವ ರೇವಣಸಿದ್ದಯ್ಯ, ಮಡೆಪ್ಪಾ, ಸಿದ್ರಾಮಯ್ಯ ಬಂದಿದ್ದಾರೆ. ಬಂದವರೇ ಆಸ್ತಿ ಕೇಳುತ್ತೀರಾ, ನಮಗೆ ಪದೇ ಪದೇ ತೊಂದರೆ ಕೊಡುತ್ತೀರಾ ಎಂದು ಕೇಳಿ, ವಿಜಯಲಕ್ಷ್ಮಿಗೆ ಚಾಕು ಮತ್ತು ತಲವಾರ್ನಿಂದ ಇರದಿದ್ದಾರೆ.
ಇದನ್ನೂ ಓದಿ: Telangana: ತನ್ನ ಖಾಸಗಿ ಅಂಗವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿ
ತಾಯಿ ಮೇಲೆ ಸಹೋದರ ಸಂಬಂಧಿಗಳೇ ದಾಳಿ ಮಾಡಿದಾಗ, ತಡೆಯಲು ಮುಂದಾದ ಮಕ್ಕಳ ಮೇಲೆ ಕೂಡಾ ದುಷ್ಕರ್ಮಿಗಳು ಚಾಕುವಿನಿಂದ ಇರದಿದ್ದಾರೆ. ಮುಂದೆ ಬಂದರೆ ನಿಮ್ಮನ್ನು ಕೊಲೆ ಮಾಡುತ್ತೇವೆ ಅಂತ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಅಷ್ಟರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಜಯಲಕ್ಷ್ಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಸ್ತಿ ವಿಚಾರಕ್ಕೆ ಚಿಕ್ಕಮ್ಮನ ಕೊಲೆ
ವಿಜಯಲಕ್ಷ್ಮಿ ಪತಿ ಮಲ್ಕಯ್ಯಸ್ವಾಮಿಗೆ ಕಲಬುರಗಿ ತಾಲೂಕಿನ ಸಿಂದಗಿ ಬಿ ಗ್ರಾಮದಲ್ಲಿ ಒಂಬತ್ತು ಎಕರೆ ಪಿತ್ರಾರ್ಜಿತ ಆಸ್ತಿಯಿದೆ. ಈ ಆಸ್ತಿಯನ್ನು ಮಲ್ಕಯ್ಯಸ್ವಾಮಿ ಸಹೋದರ ಮಕ್ಕಳೇ ಅನುಭವಿಸುತ್ತಿದ್ದಾರೆ. ಆದರೆ ತನ್ನ ಪತಿಗೆ ಸೇರಬೇಕಿದ್ದ ಜಮೀನನ್ನು ವಿಜಯಲಕ್ಷ್ಮಿ ಅನೇಕ ಬಾರಿ ಕೇಳಿದ್ದಾರೆ. ಜಗಳವೂ ನಡೆದಿದೆ. ಅಷ್ಟಕ್ಕೂ ಸುಮ್ಮನಾಗದ ವಿಜಯಲಕ್ಷ್ಮಿ ನ್ಯಾಯಾಲಯದ ಮೊರೆ ಕೂಡ ಹೋಗಿದ್ದಾರೆ. ಅದರಂತೆ ನ್ಯಾಯಾಲಯ ಕೂಡಾ ಜಮೀನಿನಲ್ಲಿ ವಿಜಯಲಕ್ಷ್ಮಿ ಪತಿಗೆ ಹಕ್ಕಿದೆ ಎಂಬದು ಆದೇಶಿಸಿದೆ. ಆದರೂ ವಿಜಯಲಕ್ಷ್ಮಿ ಪತಿ ಮಲ್ಕಯ್ಯಸ್ವಾಮಿಯ ಸಹೋದರನ ಮಕ್ಕಳು ಆಸ್ತಿ ಬಿಟ್ಟು ಕೊಟ್ಟಿರಲಿಲ್ಲ.
ಇನ್ನು ತಾವು ಅನುಭವಿಸುತ್ತಿರುವ ಆಸ್ತಿಗೆ ವಿಜಯಲಕ್ಷ್ಮಿಯೇ ಬಹಳ ಹೋರಾಟ ನಡೆಸುತ್ತಿದ್ದಾಳೆ. ಆಕೆಯನ್ನೇ ಮುಗಿಸಿದರೆ ತಮ್ಮ ತಂಟೆಗೆ ಯಾರು ಬರುವುದಿಲ್ಲಾ ಅಂತ ತಿಳಿದು ದುಷ್ಕರ್ಮಿಗಳು ವಿಜಯಲಕ್ಷ್ಮಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ