AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇರೆಯವನ ಜತೆ ಸಂಬಂಧ ಇದ್ರೆ ಡೈವರ್ಸ್ ಕೊಟ್ಟು ಹೋಗಿ, ಆದ್ರೆ ಗಂಡಂದಿರನ್ನು ಕೊಲೆ ಮಾಡ್ಬೇಡಿ: ಮಹಿಳೆಯರಲ್ಲಿ ವಿಶಿಷ್ಟ ಮನವಿ

ಬೇರೆಯವನ ಜತೆ ಅನೈತಿಕ ಸಂಬಂಧ ಇದ್ರೆ ಪತಿಗೆ ಡೈವರ್ಸ್ ಕೊಟ್ಟು ಹೋಗಿ, ಆದ್ರೆ ಗಂಡಂದಿರನ್ನು ಕೊಲೆ ಮಾಡಬೇಡಿ ಎಂದು ಮುಖಂಡರೊಬ್ಬರು ಮಹಿಳೆಯರಿಗೆ ವಿಶಿಷ್ಟ ಮನವಿ ಮಾಡಿಕೊಂಡಿದ್ದಾರೆ.

ಬೇರೆಯವನ ಜತೆ ಸಂಬಂಧ ಇದ್ರೆ ಡೈವರ್ಸ್ ಕೊಟ್ಟು ಹೋಗಿ, ಆದ್ರೆ ಗಂಡಂದಿರನ್ನು ಕೊಲೆ ಮಾಡ್ಬೇಡಿ: ಮಹಿಳೆಯರಲ್ಲಿ ವಿಶಿಷ್ಟ ಮನವಿ
ಮಹಾದೇವ ತಳವಾರ
ರಮೇಶ್ ಬಿ. ಜವಳಗೇರಾ
|

Updated on:Jun 27, 2023 | 1:49 PM

Share

ಬೆಳಗಾವಿ: ಪ್ರಸ್ತುತ ಕಾಲಮಾನದಲ್ಲಿ ಸಂಸಾರದಲ್ಲಿ  ಕಲಹ ಪ್ರಕರಣ (Family Dispute Cases) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮತ್ತೊಂದೆಡೆ ಅನೈತಿಕ ಸಂಬಂಧ (Illicit Relationship) ವಿಚಾರಕ್ಕೆ ಕೊಲೆಗಳು ನಡೆಯುತ್ತಿವೆ.  ಅದರಲ್ಲೂ ಮುಖ್ಯವಾಗಿ ಮಹಿಳೆಯರು  (Women) ಪ್ರಿಯಕರನ(Lover) ಜೊತೆ ಸೇರಿಕೊಂಡು ಕಟ್ಟಿಕೊಂಡ ಪತಿಯನ್ನೇ ಕೊಲ್ಲುವ (Murder) ಪ್ರಕರಣಗಳು ಸಹ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಮಹಾದೇವ ತಳವಾರ ಅವರು ಮಹಿಳೆಯರಿಗೆ ವಿಶಿಷ್ಟ ಮನವಿ ಮಾಡಿಕೊಂಡಿದ್ದಾರೆ. ಹೆಂಡತಿಯರಿಗೆ ಬೇರೆ ಸಂಬಂಧ ಇದ್ರೆ ಡೈವೋರ್ಸ್ ನೀಡಿ ಹೋಗಿ. ಆದರೆ ಕಟ್ಟಿಕೊಂಡ ಗಂಡನನ್ನು ಕೊಲೆ ಮಾಡಬೇಡಿ ಎಂದು ವಿನಂತಿ ಮಾಡಿದ್ದಾರೆ.

ಇದನ್ನೂ ಓದಿ: Belagavi News: ಅನೈತಿಕ ಸಂಬಂಧಕ್ಕಾಗಿ ಗಂಡನನ್ನೇ ಕೊಂದ ಪತ್ನಿ; ನಾಲ್ವರು ಅರೆಸ್ಟ್

ಬೆಳಗಾವಿಯಲ್ಲಿ ಪತ್ನಿ, ಪ್ರಿಯಕರನಿಂದ ಪೇಂಟರ್ ರಮೇಶ್ ಕಾಂಬಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಇಂದು(ಜೂನ್ 27) ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾತನಾಡಿದ ಮಹಾದೇವ ತಳವಾರ, ಹೆಂಡತಿಗೆ ಮನಸ್ಸಿಲ್ಲದಿದ್ದರೆ ಗಂಡ ಮೈ ಮುಟ್ಟಬಾರದು ಎಂದಯ ಕಾನೂನಲ್ಲೇ ಅವಕಾಶ ಇದೆ. ‘ನಿಮಗೆ ಗಂಡ ಬೇಡವಾದರೆ ಗಂಡನಿಗೆ ವಿಚ್ಛೇದನ ನೀಡಿ ಹೋಗಿ. ಆದ್ರೆ ಕೊಲೆ ಮಾಡಿ ಮಕ್ಕಳನ್ನು ಹಾಗೂ ತಂದೆ-ತಾಯಿಯನ್ನು ಅನಾಥ ಮಾಡುವುದು. ನೀವು ಜೈಲಿಗೆ ಹೋಗುವುದು ಯಾರಿಗೆ ಬೇಕು ಈ ಜೀವನ? ಕಾನೂನಿನಲ್ಲಿ ನಿಮಗೆ ಅವಕಾಶ ಇದೆ. ಗಂಡನಿಗೆ ಡೈವರ್ಸ್ ಕೊಟ್ಟು ಹೋಗಿ. ಆದ್ರೆ ಕೊಲೆ ಮಾಡಬೇಡಿ ಮನವಿ ಮಾಡಿದರು.

ಕೊಲೆ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಹಾಗೂ ಕೊಲೆ ಮಾಡಿದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ವಿವಿಧ ಸಂಘಟನೆಗಳು ಆಗ್ರಹಿಸಿದರು. ಕೊಲೆಯಾದ ರಮೇಶ್ ಕಾಂಬಳೆ ತಂದೆ ತಾಯಿಗೆ ವಯಸ್ಸಾಗಿದೆ. ಇನ್ನು ಮನೆಯಲ್ಲಿ ಇಬ್ಬರು ಪುತ್ರಿಯರಿದ್ದಾರೆ. ಹೀಗಾಗಿ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿ ರಮೇಶ್‌ನ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ತನ್ನ ಪ್ರಿಯಕರ ಬಾಳು ಬಿರಂಜೆ ಜತೆ ಸೇರಿ ಸಂಧ್ಯಾ ಎನ್ನುವಾಕೆ ತನ್ನ ಪತಿಯನ್ನು ಕೊಲೆ ಮಾಡಿದ್ದಳು. ಬೆಳಗಾವಿಯ ಅಂಬೇಡ್ಕರ ನಗರ ನಿವಾಸಿಯಾಗಿದ್ದ ರಮೇಶ್ ಕಾಂಬಳೆ ಎನ್ನುವಾತನನ್ನು ಪತ್ನಿ ಸಂಧ್ಯಾ ತನ್ನ ಸ್ನೇಹಿತ ಬಾಳು ಬಿರಂಜೆ ಸೇರಿ ಕೊಲೆ ಮಾಡಿದ್ದಳು. ಮಾರ್ಚ್ 23ರಂದು ಕೊಲೆ ಮಾಡಿ ಚೋರ್ಲಾ ಘಾಟ್‌ಗೆ ಶವ ಎಸೆದಿದ್ದರು. ಘಟನೆ ನಡೆದು ಮೂರು ತಿಂಗಳ ಬಳಿಕ ಕೊಲೆ ರಹಸ್ಯ ಬಯಲಾಗಿತ್ತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 1:47 pm, Tue, 27 June 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ