ತಾನಾಗಿದ್ದು ಮೂರು ಮದುವೆ, ಪತ್ನಿಯ ಮೇಲೆ ಅಕ್ರಮ ಸಂಬಂಧದ ಶಂಕೆ, ಖಾಸಗಿ ಅಂಗಗಳನ್ನು ಸುಟ್ಟ ಪತಿ

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿಯೊಬ್ಬ ಆಕೆಯ ಖಾಸಗಿ ಭಾಗಗಳನ್ನು ಸುಟ್ಟು ಹಾಕಿರುವ ಘಟನೆ ಬಿಹಾರದ ಕತಿಹಾರ್​ನಲ್ಲಿ ನಡೆದಿದೆ. ಪತಿಯು ಪತ್ನಿಯ ಖಾಸಗಿ ಅಂಗಗಳಿಗೆ ಬೆಂಕಿ ಹೆಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ, ಮನೆಯ ಬಳಿ ಜನಸಮೂಹವೇ ನೆರೆದಿತ್ತು. ಬರ್ಸೋಯಿ ನಗರ ಪಂಚಾಯತ್ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಈಗಾಗಲೇ ಮೂರು ಮದುವೆಯಾಗಿದ್ದಾನೆ. ಆತನಿಗೆ ಪತ್ನಿಯ ಮೇಲೆ ಅನುಮಾನವಿತ್ತು, ಪತ್ನಿಗೆ ಬೇರೆಯವರ ಜೊತೆ ಅಕ್ರಮ ಸಂಬಂಧವಿದೆ ಎಂದು ಪತಿ ಶಂಕಿಸಿದ್ದ.

ತಾನಾಗಿದ್ದು ಮೂರು ಮದುವೆ, ಪತ್ನಿಯ ಮೇಲೆ ಅಕ್ರಮ ಸಂಬಂಧದ ಶಂಕೆ, ಖಾಸಗಿ ಅಂಗಗಳನ್ನು ಸುಟ್ಟ ಪತಿ
ಮಹಿಳೆ
Image Credit source: AkhandIndia

Updated on: Sep 12, 2023 | 2:25 PM

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿಯೊಬ್ಬ ಆಕೆಯ ಖಾಸಗಿ ಭಾಗಗಳನ್ನು ಸುಟ್ಟು ಹಾಕಿರುವ ಘಟನೆ ಬಿಹಾರದ ಕತಿಹಾರ್​ನಲ್ಲಿ ನಡೆದಿದೆ. ಪತಿಯು ಪತ್ನಿಯ ಖಾಸಗಿ ಅಂಗಗಳಿಗೆ ಬೆಂಕಿ ಹೆಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ, ಮನೆಯ ಬಳಿ ಜನಸಮೂಹವೇ ನೆರೆದಿತ್ತು. ಬರ್ಸೋಯಿ ನಗರ ಪಂಚಾಯತ್ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಈಗಾಗಲೇ ಮೂರು ಮದುವೆಯಾಗಿದ್ದಾನೆ. ಆತನಿಗೆ ಪತ್ನಿಯ ಮೇಲೆ ಅನುಮಾನವಿತ್ತು, ಪತ್ನಿಗೆ ಬೇರೆಯವರ ಜೊತೆ ಅಕ್ರಮ ಸಂಬಂಧವಿದೆ ಎಂದು ಪತಿ ಶಂಕಿಸಿದ್ದ.

ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೆ ಆರೋಪಿಗೆ ಮದ್ಯಪಾನ ಮಾಡುವ ಕೆಟ್ಟ ಚಟವೂ ಇದೆ. ರಘುನಾಥಪುರ ನಿವಾಸಿ ಡೋಲೋದೇವಿ ಎಂಬುವವರ ಪತಿ ರಾಮಬಾಬು ಪಾಸ್ವಾನ್ ಸೋಮವಾರ ಪತ್ನಿಯೊಂದಿಗೆ ಜಗಳವಾಡಿದ್ದು, ಬಳಿಕ ಮರದ ತುಂಡಿಗೆ ಬಟ್ಟೆ ಕಟ್ಟಿ ಬೆಂಕಿ ಹಚ್ಚಿ ಪತ್ನಿಯ ಖಾಸಗಿ ಅಂಗಗಳನ್ನು ಸುಟ್ಟು ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಓದಿ: ಅಪಹರಣ, ಸಾಮೂಹಿಕ ಅತ್ಯಾಚಾರ, ವಿವಸ್ತ್ರಗೊಳಿಸಿ ರಸ್ತೆಯಲ್ಲೇ ಮಹಿಳೆಯನ್ನು ಎಸೆದು ಹೋದ ಆರೋಪಿಗಳು

ಸಂತ್ರಸ್ತೆ ಕಿರುಚಲು ಪ್ರಾರಂಭಿಸಿದಾಗ, ಹತ್ತಿರದ ಜನರು ಓಡಿ ಬಂದು ಬೆಂಕಿಯನ್ನು ನಂದಿಸಿದರು ಮತ್ತು ತಕ್ಷಣವೇ ಉಪವಿಭಾಗೀಯ ಆಸ್ಪತ್ರೆಗೆ ಬರ್ಸೋಯ್‌ಗೆ ಕರೆದೊಯ್ದರು, ಅಲ್ಲಿ ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಮಬಾಬು ಪಾಸ್ವಾನ್ ಸಹೋದರ ಮಾತನಾಡಿ, ಆತ ಯಾವಾಗಲೂ ಮದ್ಯದ ಅಮಲಿನಲ್ಲಿಯೇ ಇರುತ್ತಾನೆ.

ಸೋಮವಾರ ಬೆಳಗ್ಗೆಯಿಂದ ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಇದ್ದಕ್ಕಿದ್ದಂತೆ ಪತಿ ಪತ್ನಿಯ ಖಾಸಗಿ ಅಂಗಗಳನ್ನು ಸುಟ್ಟು ಹಾಕಿದ್ದಾನೆ. ಮನೆಯೊಳಗಿಂದ ಕಿರುಚಾಟದ ಶಬ್ದ ಬಂದಾಗ, ನಾವು ಎಲ್ಲಾ ಕುಟುಂಬ ಸದಸ್ಯರು ತಕ್ಷಣ ಅಲ್ಲಿಗೆ ತಲುಪಿ ಉಪವಿಭಾಗೀಯ ಆಸ್ಪತ್ರೆಗೆ ಬರ್ಸೋಯಿ ಚಿಕಿತ್ಸೆಗಾಗಿ ಕರೆತಂದರು ಎಂದು ಮಾಹಿತಿ ನೀಡಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ