ಕಣ್ಣುಗಳನ್ನು ಕಿತ್ತು, ಕತ್ತು ಹಿಸುಕಿ ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ

|

Updated on: Jan 12, 2024 | 8:45 AM

500 ರೂಪಾಯಿಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಸ್ನೇಹಿತರೇ ಯುವಕನ ಕಣ್ಣುಗಳನ್ನು ಕಿತ್ತು, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬಿಹಾರದ ಅರಾದಲ್ಲಿ ನಡೆದಿದೆ. ಹಣಕ್ಕಾಗಿ ಜಗಳ ಆರಂಭವಾಗಿತ್ತು, ಮೃತ ವ್ಯಕ್ತಿ ಕೂಲಿಕಾರ್ಮಿಕನಾಗಿದ್ದ. ಬಾರಾ ಬಸಂತ್‌ಪುರ ಗ್ರಾಮದ ನಿವಾಸಿಯಾಗಿರುವ ಸಿಂಗ್, ಸ್ನೇಹಿತರು ಆತನನ್ನು ಪಾರ್ಟಿಗೆಂದು ಕರೆದೊಯ್ದು ಚಾಕುವಿನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಸನ್ವಾರಿ ಸೇತುವೆ ಬಳಿಯ ಹೊಲದಲ್ಲಿ ಆತನ ಶವ ಪತ್ತೆಯಾಗಿದೆ.

ಕಣ್ಣುಗಳನ್ನು ಕಿತ್ತು, ಕತ್ತು ಹಿಸುಕಿ ಸ್ನೇಹಿತರಿಂದಲೇ ಯುವಕನ ಬರ್ಬರ ಹತ್ಯೆ
Image Credit source: Namaste Talangana
Follow us on

ಹಣಕ್ಕಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಸ್ನೇಹಿತರೇ ಯುವಕನ ಕಣ್ಣುಗಳನ್ನು ಕಿತ್ತು, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬಿಹಾರದ ಅರಾದಲ್ಲಿ ನಡೆದಿದೆ. ಹಣಕ್ಕಾಗಿ ಜಗಳ ಆರಂಭವಾಗಿತ್ತು, ಮೃತ ವ್ಯಕ್ತಿ ಕೂಲಿಕಾರ್ಮಿಕನಾಗಿದ್ದ. ಬಾರಾ ಬಸಂತ್‌ಪುರ ಗ್ರಾಮದ ನಿವಾಸಿಯಾಗಿರುವ ಸಿಂಗ್, ಸ್ನೇಹಿತರು ಆತನನ್ನು ಪಾರ್ಟಿಗೆಂದು ಕರೆದೊಯ್ದು ಚಾಕುವಿನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಸನ್ವಾರಿ ಸೇತುವೆ ಬಳಿಯ ಹೊಲದಲ್ಲಿ ಆತನ ಶವ ಪತ್ತೆಯಾಗಿದೆ.

ಕಣ್ಣುಗಳನ್ನು ಹರಿತವಾದ ಆಯುಧದಿಂದ ಕಿತ್ತು ತೆಗೆಯಲಾಗಿದೆ, ದೇಹದ ಮೇಲ್ಭಾಗದಲ್ಲಿ ಗಾಯದ ಗುರುತುಗಳಿವೆ. ಮೃತದೇಹವನ್ನು ಅರಾ ಸದರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ದೇಹ ಹೊಲದಲ್ಲಿ ಪತ್ತೆಯಾಗಿತ್ತು, ಮೃತರ ಹಿರಿಯ ಸಹೋದರ ರಾಧಾ ಸಿಂಗ್ ಅವರು ಸ್ಥಳೀಯ ಪರಿಚಯಸ್ಥ ಅಜಯ್ ಮಹತೋ ಅವರ ಬಳಿಕ ಕೆಲಸದ 500 ರೂಪಾಯಿ ವೇತನ ಕೇಳಿದ್ದ.

ಮತ್ತಷ್ಟು ಓದಿ: ನೆಲಮಂಗಲ: 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಬಸ್ ಕ್ಲೀನರ್: ಆರೋಪಿ ಅರೆಸ್ಟ್

ಮಹತೋ ಅವರ ನಿರ್ದೇಶನದ ಮೇರೆಗೆ ಸಿಂಗ್ ಅವರ ಸ್ನೇಹಿತರು ಆತನನ್ನು ಪಾರ್ಟಿಗೆ ಆಹ್ವಾನಿಸಿದ್ದರು, ನಂತರ ಅವರನ್ನು ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತಡರಾತ್ರಿಯಾದರೂ ಸಹೋದರ ಮನೆಗೆ ಬಾರದ ಹಿನ್ನೆಲೆಯಲ್ಲಿ ಅನುಮಾನ ಬಂದಿತ್ತು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ