ನಳಂದಾ: ಬಿಹಾರದ ನಳಂದಾ ಜಿಲ್ಲೆಯಲ್ಲಿ ಕೊಲೆಯಾಗಿರುವ ವೈದ್ಯರ ಶವ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಆಸ್ತಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಚುಲ್ಹರಿ ಗ್ರಾಮದ ನಿವಾಸಿ ಡಾ. ಸುಮನ್ ಗಿರಿ ಎಂದು ಗುರುತಿಸಲಾಗಿದೆ. ತಡರಾತ್ರಿಯಾದರೂ ಡಾಕ್ಟರ್ ಸುಮನ್ ವಾಪಸ್ ಬಾರದೆ ಇದ್ದಾಗ ಮನೆಯವರು ಆಸ್ತಾವನ್ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆಯಾಗಿರುವ ದೂರು ದಾಖಲಿಸಿದ್ದಾರೆ.
ನಾಪತ್ತೆಯಾಗಿರುವ ದೂರನ್ನು ದಾಖಲಿಸಿ, ನನ್ನ ಸಹೋದರನ ಪತ್ತೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ನಾನು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದೆ. ಆದರೆ ಅವರು ನಿರಾಕರಿಸಿದರು. ನಂತರ ದೂರು ದಾಖಲಿಸಿಕೊಂಡರು. ನಾನು ಮನೆಗೆ ಹಿಂದಿರುಗುವಾಗ ನಾನು ಅವನ ಬೈಕನ್ನು ನೋಡಿದೆ. ಸ್ವಲ್ಪ ದೂರದಲ್ಲಿ ಅವನ ಮೃತ ದೇಹವೂ ಪತ್ತೆಯಾಗಿದೆ’ ಎಂದು ಮೃತ ವೈದ್ಯರ ಸಹೋದರ ಹೇಳಿದ್ದಾರೆ.
ಇದನ್ನೂ ಓದಿ: Crime News: ಮದುವೆಯಾಗಲು ಒಪ್ಪದ ಯುವತಿಯ ಕತ್ತು ಸೀಳಿ, ಕೊಚ್ಚಿ ಕೊಂದ ಯುವಕ; ಮಹಾರಾಷ್ಟ್ರದಲ್ಲಿ ಭೀಕರ ಕೊಲೆ
ಕೂಡಲೇ ಕೊಲೆಯ ಬಗ್ಗೆ ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯ ಸಮಯದಲ್ಲಿ, ಆ ವೈದ್ಯರನ್ನು ಹೊಡೆದು ಸಾಯಿಸಲಾಗಿದೆ ಎಂದು ತೋರುತ್ತದೆ. ಈ ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಆಸ್ತವಾನ್ ಗ್ರಾಮದ ಎಸ್‌ಎಚ್‌ಒ ಶಶಿ ಕುಮಾರ್ ಹೇಳಿದ್ದಾರೆ.
ಈ ಘಟನೆಯ ನಂತರ ಸ್ಥಳೀಯ ಗ್ರಾಮಸ್ಥರು ಶವವನ್ನು ರಸ್ತೆಯ ಮೇಲೆ ಇಟ್ಟು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ