ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳು ಗಾಯಬ್: ಅಂತರ ರಾಜ್ಯ ದ್ವಿಚಕ್ರವಾಹನ ಕಳ್ಳನ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: May 24, 2022 | 8:19 AM

ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಮಹಮ್ಮದ್ ಯುಸೂಫ್ ಮತ್ತು ಫರ್ದೀನ್ ಖಾನ್ ಬಂಧಿತ ಆರೋಪಿಗಳು.

ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳು ಗಾಯಬ್: ಅಂತರ ರಾಜ್ಯ ದ್ವಿಚಕ್ರವಾಹನ ಕಳ್ಳನ ಬಂಧನ
ಆರೋಪಿಗಳಿಂದ ವಶ ಪಡಿಸಿಕೊಂಡ ಬೈಕ್​ಗಳು
Follow us on

ಬೆಂಗಳೂರು: ನಗರದ ಭಾರತೀನಗರ ಪೊಲೀಸರ ಕಾರ್ಯಾಚರಣೆಯಿಂದ ಅಂತರ ರಾಜ್ಯ ದ್ವಿಚಕ್ರವಾಹನ ಕಳ್ಳನ ಬಂಧನ ಮಾಡಲಾಗಿದೆ. ಆಂಧ್ರಪ್ರದೇಶ ಮೂಲದ ಲಕ್ಷ್ಮೀಪತಿ ಬಂಧಿತ ಆರೋಪಿ. ಆಡುಗೋಡಿ, ಭಾರತೀನಗರ ಸುತ್ತಮುತ್ತ ಬೈಕ್ ಕದಿದ್ದ ಆರೋಪಿ, ಈ ಬಗ್ಗೆ ಭಾರತೀನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಂಧನದಿಂದ 4 ಲಕ್ಷ ಮೌಲ್ಯದ 10 ಬೈಕ್ ಗಳು ವಶ ಪಡಿಸಿಕೊಳ್ಳಲಾಗಿದೆ. ಅದೇ ರೀತಿಯಾಗಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಮಹಮ್ಮದ್ ಯುಸೂಫ್ ಮತ್ತು ಫರ್ದೀನ್ ಖಾನ್ ಬಂಧಿತ ಆರೋಪಿಗಳು. ಸುಬ್ರಹ್ಮಣ್ಯಪುರ, ಚಂದ್ರಾಲೇಔಟ್, ಬಂಡೆಪಾಳ್ಯ, ಬ್ಯಾಟರಾಯನಪುರ ಸೇರಿ ನಗರದ ಹಲವೆಡೆ ಕಳ್ಳತನ ಮಾಡಿದ್ದರು. ಆರುವರೆ ಲಕ್ಷ ಮೌಲ್ಯದ ಎಂಟು ಬೈಕ್​ಗಳನ್ನು ಪೊಲೀಸರು  ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: IPL 2022: ಇಡೀ ಸೀಸನ್​ನಲ್ಲಿ ಒಂದೇ ಒಂದು ಅವಕಾಶ ಪಡೆಯದ ಅರ್ಜುನ್ ತೆಂಡೂಲ್ಕರ್​ಗೆ ಅಕ್ಕನ ಭಾವನಾತ್ಮಕ ಸಾಂತ್ವನ

ಕಳಪೆ ಕಾಮಗಾರಿ ಹಿನ್ನೆಲೆ ಎಂಜಿನಿಯರ್ ವಿರುದ್ಧ ದೂರು

ಕೊಡಗು: ಮಳೆಗೆ ಕಿರು ನಾಲೆಯ ತಡೆಗೋಡೆ ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಆರೋಪಿಸಿ, ಎಂಜಿನಿಯರ್ ವಿರುದ್ಧ ಪೊನ್ನಂಪೇಟೆ ತಾಲ್ಲೂಕಿನ ನಲ್ಲೂರು ಗ್ರಾಮಸ್ಥರು ದೂರು ನೀಡಿದ್ದಾರೆ. ನಲ್ಲೂರು ಗ್ರಾಮದ ಮೂಲಕ ಹರಿಯುವ ಕೀರೆ ನದಿಯಿಂದ ನೀರು ಹರಿಸಲು ಕಿರು ನಾಲೆ ಕಟ್ಟಲಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಂಜಿನಿಯರ್ ರಫೀಕ್​ನನ್ನು ಗ್ರಾಮಸ್ಥರು ಠಾಣೆಗೆ ಕರೆಸಿ, ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ನಾಲೆ ದುರಸ್ಥಿಪಡಿಸುವ ಭರವಸೆ ಎಂಜಿನಿಯರ್ ರಫೀಕ್​ ನೀಡಿದ್ದಾನೆ.

2.58 ಲಕ್ಷ ಮೌಲ್ಯದ 25 ಕೆಜಿ 800 ಗ್ರಾಂ ಗಾಂಜಾ ಬೆಳೆ ವಶ

ಬೆಳಗಾವಿ: ಗದ್ದೆಯಲ್ಲಿ ಗಾಂಜಾ ಬೆಳೆದಿದ್ದ ಓರ್ವನನ್ನು ಪೊಲೀಸರು ಬಂಧಿಸಿರುವಂತಹ ಘಟನೆ ಜಿಲ್ಲೆ ಗೋಕಾಕ್ ತಾಲೂಕಿನ ಮಿಡಕನಟ್ಟಿ ಗ್ರಾಮದಲ್ಲಿ ನಡೆದಿದೆ. ಪರಪ್ಪ ಸವಸುದ್ದಿ ಬಂಧಿತ ಆರೋಪಿ. ಮಿಡಕನಟ್ಟಿಯಲ್ಲಿ 2.58 ಲಕ್ಷ ಮೌಲ್ಯದ 25 ಕೆಜಿ 800 ಗ್ರಾಂ ಗಾಂಜಾ ಬೆಳೆ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಡಿಸಿಆರ್‌ಬಿ, ಸಿಇಎನ್ ಹಾಗೂ‌ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ಮಾಡಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕಸಾಯಿಖಾನೆ ಮೇಲೆ ದಾಳಿ

ಚಿತ್ರದುರ್ಗ: ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿ ಒಂದು ಹಸುವನ್ನು ರಕ್ಷಣೆ ಮಾಡಿದ ಘಟನೆ ಚಳ್ಳಕೆರೆ ಪಟ್ಟಣದ ರಹೀಂ‌ನಗರದ ಕಸಾಯಿಖಾನೆಯಲ್ಲಿ ನಡೆದಿದೆ. ಗೋ ಮಾಂಸ ಮಾರಾಟ ಹಾಗೂ ಗೋ ಹತ್ಯೆ ಬಗ್ಗೆ ಗೌ ಗ್ಯಾನ್ ಸಂಸ್ಥೆಯಿಂದ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ಆಧರಿಸಿ ಪೊಲೀಸರು ಕಸಾಯಿಖಾನೆಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ನಾಲ್ವರು ಆರೋಪಿಗಳು ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದು, ಪ್ರಕರಣ ದಾಖಲಿಸಿದ್ದಾರೆ. ದಾಳಿ ವೇಳೆ ಒಂದು ಹಸುವನ್ನು ರಕ್ಷಿಸಲಾಗಿದ್ದು, ಗೋಮಾಂಸವನ್ನು ವಶಕ್ಕೆ ಪಡೆಯಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:47 am, Tue, 24 May 22