Bengaluru News: ನಿರ್ಮಾಣಹಂತದ ರಾಜಕಾಲುವೆ ಮೇಲ್ಭಾಗದ ಸ್ಲ್ಯಾಬ್ ಕುಸಿದು ಬಿದ್ದು ನಾಲ್ವರಿಗೆ ಗಾಯ, ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಆದೇಶ

ನಿರ್ಮಾಣಹಂತದ ರಾಜಕಾಲುವೆ ಮೇಲ್ಭಾಗದ ಸ್ಲ್ಯಾಬ್ (Slab) ಬಿದ್ದು ಅವಘಡ (Disaster) ಸಂಭವಿಸಿದ ಘಟನೆ ಬೆಂಗಳೂರಿನ ಶ್ರೀನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಬಿಬಿಎಂಪಿ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಅವರು ಆದೇಶಿಸಿದ್ದಾರೆ.

Bengaluru News: ನಿರ್ಮಾಣಹಂತದ ರಾಜಕಾಲುವೆ ಮೇಲ್ಭಾಗದ ಸ್ಲ್ಯಾಬ್ ಕುಸಿದು ಬಿದ್ದು ನಾಲ್ವರಿಗೆ ಗಾಯ, ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಆದೇಶ
ಕುಸಿತಗೊಂಡ ರಾಜಕಾಲುವೆ ಮೇಲ್ಭಾಗದ ಸ್ಲ್ಯಾಬ್
TV9kannada Web Team

| Edited By: Rakesh Nayak

May 24, 2022 | 3:13 PM

ಬೆಂಗಳೂರು: ನಿರ್ಮಾಣಹಂತದ ರಾಜಕಾಲುವೆ (RajaKaluve) ಮೇಲ್ಭಾಗದ ಸ್ಲ್ಯಾಬ್ (Slab) ಬಿದ್ದು ಅವಘಡ (Disaster) ಸಂಭವಿಸಿದ ಘಟನೆ ಬೆಂಗಳೂರಿನ ಶ್ರೀನಗರದ ಕಾಳಿದಾಸ ಬಸ್ ನಿಲ್ದಾಣದ ಬಳಿ ಇಂದು ನಡೆದಿದೆ. ನಿರ್ಮಾಣ ಹಂತದಲ್ಲಿದ್ದ ರಾಜಕಾಲುವೆ ಮೇಲೆ ನಿಂತು ಕಾರ್ಮಿಕರು ಕಾಂಕ್ರಿಟ್ ಹಾಕುತ್ತಿದ್ದರು. ಈ ವೇಳೆ, ಸ್ಲ್ಯಾಬ್ ಕುಸಿದುಬಿದ್ದಿದೆ. ಘಟನೆಯಲ್ಲಿ ನಾಲ್ವರು ಕಾರ್ಮಿಕರು ಸಿಮೆಂಟ್ ಹಾಗೂ ಕಬ್ಬಿಣದ ಸರಳುಗಳ ಮಧ್ಯೆ ಸಿಲುಕಿಕೊಂಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಕಾರ್ಮಿಕರನ್ನು ರಕ್ಷಿಸಿದ್ದಾರೆ. ಅವಘಡದಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಉಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಾಂಟ್ರಾಕ್ಟರ್ ಮಹೇಶ್ ರೆಡ್ಡಿ ಅವರು ನಡೆಸುತ್ತಿದ್ದ ಕಾಮಗಾರಿ ಇದಾಗಿದ್ದು, ಆರ್​ಎಂಐ ಇನ್ಫ್ರಾಸ್ಟಷ್ಚರ್ ಕಾಮಗಾರಿ ನಡೆಸುತ್ತಿತ್ತು.​ ಗಾಯಗೊಂಡವರು ಕೋಲ್ಕತ್ತಾ ಮೂಲದವರಾಗಿದ್ದು, ಮೀರ್ ಖಾಸಿಂ(24)ಗೆ ಗಂಭೀರ ಗಾಯಗಳಾಗಿವೆ. ಆಸಿಬುಲ್(22), ಶಿವಪ್ರಸಾದ್(33), ರೆಹಮಾನ್​ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: Karnataka Rain: ಕರ್ನಾಟಕದ ಕರಾವಳಿ, ಕೊಡಗು, ಚಿಕ್ಕಮಗಳೂರಿನಲ್ಲಿ ಇಂದು ಮಳೆ ಸಾಧ್ಯತೆ

ಸ್ಥಳಕ್ಕೆ ಶಾಸಕರ ದೌಡು, ಸ್ಥಳೀಯರಿಂದ ಕ್ಲಾಸ್

ನಿರ್ಮಾಣಹಂತದ ರಾಜಕಾಲುವೆ ಮೇಲ್ಭಾಗದ ಸ್ಲ್ಯಾಬ್ ಕುಸಿದು ಬಿದ್ದ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರವಿ ಸುಬ್ರಹ್ಮಣ್ಯ, ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶಾಸಕರು ಭೇಟಿ ನೀಡುತ್ತಿದ್ದಂತೆ ಸ್ಥಳೀಯರು ಕ್ಲಾಸ್ ತೆಗೆದುಕೊಂಡ ಘಟನೆಯೂ ನಡೆಯಿತು. ದುರಂತದ ಬಗ್ಗೆ ಮಾತನಾಡಿದ ಶಾಸಕರು, ಇದು ಕಳಪೆ ಕಾಮಗಾರಿಯಾ ಅಥವಾ ಏನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಗಾಯಗೊಂಡ ವ್ಯಕ್ತಿಗಳಿಗೆ ಬಿಬಿಎಂಪಿಯಿಂದ ಚಿಕಿತ್ಸೆ ನೀಡಲಾಗುತ್ತದೆ. ಮಳೆ ಬಂದಾಗ ಅಕ್ಕ ಪಕ್ಕದ ಮನೆಗಳಿಗೆ ತೊಂದರೆ ಆಗಬಾರದು ಅಂತ ಇಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿತ್ತು. ಆದರೆ ಅದೇ ಇಂದು ದುರ್ಘಟನೆಯಾಗಿದೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಬುಕ್ ವಾರ್: ನೀಚ ಮಟ್ಟದ ವಿರೋಧಕ್ಕೆ ಶಿಕ್ಷಣ ಸಚಿವ ಗರಂ, ಹೆಗ್ಡೆವಾರ್ ಪಠ್ಯ ಸೇರ್ಪಡೆಗೆ ಸಿಎಫ್​ಐ ವಿರೋಧ

ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಆದೇಶ

ಅವಘಡದ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ, ಇದು ಕಳಪೆ ಕಾಮಗಾರಿನಾ ಅಥವಾ ಬೇರೆ ಏನಾದರು ಕಾರಣ ಇದೆಯಾ ಎಂದು ಪರಿಶೀಲನೆ ನಡೆಸುತ್ತೇವೆ. ಸದ್ಯ ಇಲ್ಲಿ ನಡೆಸಲಾಗುತ್ತಿರುವ ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲು  TVCC ಗೆ ಆದೇಶಿಸಲಾಗಿದೆ. ಒಂದು ವೇಳೆ ಕಳಪೆ ಕಾಮಗಾರಿ ಎಂದು ಸಾಬೀತಾದರೆ, ಗುತ್ತಿಗೆದಾರರ ವಿರುದ್ಧ ಕ್ರಮ ಕೈ ಗೊಳ್ಳುತ್ತೇವೆ. ಗಾಯಾಳುಗಳಿಗೆ ಗುತ್ತಿಗೆದಾರರೇ ಜವಾಬ್ದಾರಿಯಾಗಿದ್ದು, ಅವರ ಚಿಕಿತ್ಸೆಯನ್ನೂ ಅವರೆ ನೋಡಿಕೊಳ್ಳಬೇಕು ಎಂದರು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada