
ಬೆಂಗಳೂರು: ಲಾಕ್ಡೌನ್ ಮತ್ತು ಕೊರೊನಾ ಜೊತೆಗೆ ರಾಜಧಾನಿಯಲ್ಲಿ ಕಳ್ಳರ ಹಾವಳಿ ಸಹ ಜಾಸ್ತಿಯಾಗ್ತಿದೆ. ಇದೀಗ ಲಾಕ್ಡೌನ್ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ನ ಖದೀಮನೊಬ್ಬ ಎಗರಿಸಿರುವ ಘಟನೆ ನಗರದ ತಿಗಳರಪಾಳ್ಯದಲ್ಲಿ ಬೆಳಕಿಗೆ ಬಂದಿದೆ.
BMTCಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆ ಮುಂದೆ ಬೈಕ್ ನಿಲ್ಲಿಸಿದ್ರು. ಇದೇ ವೇಳೆ ಶನಿವಾರದಂದು ಸಮಯ ನೋಡಿಕೊಂಡು ಬಂದ ಖದೀಮ ಬೈಕ್ ಕದ್ದಿದ್ದಾನೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Published On - 4:41 pm, Wed, 22 July 20