ಟೆಕ್ಕಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳಿಬ್ಬರು ಮಾಜಿ ಸಚಿವ ಅಶ್ವತ್ಥ ನಾರಾಯಣ ಆಪ್ತರು

| Updated By: Rakesh Nayak Manchi

Updated on: Aug 10, 2023 | 8:37 PM

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ರಸ್ತೆಯಲ್ಲಿ ಟೆಕ್ಕಿ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣದ ಆರೋಪಿಗಳು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆಪ್ತರು ಎಂದು ಗುರುತಿಸಲಾಗಿದೆ.

ಟೆಕ್ಕಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳಿಬ್ಬರು ಮಾಜಿ ಸಚಿವ ಅಶ್ವತ್ಥ ನಾರಾಯಣ ಆಪ್ತರು
ಮಾಜಿ ಸಚಿವ ಅಶ್ವತ್ಥ ನಾರಾಯಣ ಆಪ್ತರಿಂದ ಟೆಕ್ಕಿ ಮೇಲೆ ಹಲ್ಲೆ (ಸಾಂದರ್ಭಿಕ ಚಿತ್ರ)
Follow us on

ನೆಲಮಂಗಲ, ಆಗಸ್ಟ್ 10: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ (Bandipur) ಅಭಯಾರಣ್ಯದ ರಸ್ತೆಯಲ್ಲಿ ನಡೆದಿದ್ದ ಟಿಕ್ಕಿ ಮೇಲಿನ ಹಲ್ಲೆ ಪ್ರಕರಣದ ಸಂಬಂಧ ಆರೋಪಿಗಳ ಗುರುತು ಪತ್ತೆಹಚ್ಚಲಾಗಿದೆ. ಆರೋಪಿಗಳು ಮಲ್ಲೇಶ್ವರಂ ಮೂಲದವರಾಗಿದ್ದು, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr. C. N. Ashwath Narayan) ಅವರ ಆಪ್ತರಾಗಿದ್ದಾರೆ.

ಮಲ್ಲೇಶ್ವರಂ ಮೂಲದ ದಿನೇಶ್ ಅಲಿಯಾಸ್ ಕಾಡುಪಾಪ ಹಾಗೂ ಅಭಿ ಅಲಿಯಾಸ್ ಮಾರ್ಕೆಟ್‌ ಅಭಿ ಹಲ್ಲೆ ನಡೆಸಿದವರೆಂದು ಟೆಕ್ಕಿ ಅರ್ಜುನ್‌ ಆರ್‌ ನಾಥ್‌ ಹೇಳಿದ್ದಾರೆ. ಇಬ್ಬರು ಆರೋಪಿಗಳು ಶಾಸಕ ಅಶ್ವತ್ಥ್‌ ನಾರಾಯಣ ಆಪ್ತರೆಂದು ಅವರು ಹೇಳಿದ್ದು, ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲವೆಂದು ಟೆಕ್ಕಿ ಅರ್ಜುನ್‌ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಭಾಗ್ಯಗಳ ಹೆಸರಿನಲ್ಲಿ ರಾಜಕಾರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಡಾ ಅಶ್ವತ್ಥ್ ನಾರಾಯಣ ಕೆಂಡಾಮಂಡಲ

ಕೇರಳ ಮೂಲದ ಅರ್ಜುನ್ ಕುಟುಂಬ ಸಮೇತರಾಗಿ ಜೂನ್ 17 ರಂದು ಬಂಡೀಪುರ ಅಭಯಾರಣ್ಯದ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರನ್ನು ಓವರ್ ಟೇಕ್ ಮಾಡುವ ವಿಚಾರವಾಗಿ ಕಾರು ಅಡ್ಡಗಟ್ಟಿದ್ದ ನಾಲ್ವರನ್ನೊಳಗೊಂಡ ತಂಡ, ಅರ್ಜುನ್ ಮೇಲೆ ಹಲ್ಲೆ ನಡೆಸಿತ್ತು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅರ್ಜುನ್, ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಟ್ಯಾಗ್ ಮಾಡಿದ್ದರು.

ಟ್ವೀಟ್ ಆಧರಿಸಿ ಅಗಸ್ಟ್ 6 ರಂದು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿತ್ತು. ಅಲ್ಲದೆ, ಟ್ವೀಟ್ ಗಮನಿಸಿದ ಅಲೋಕ್ ಕುಮಾರ್ ಅವರು ಚಾಮರಾಜನಗರ ಎಸ್​ಪಿಯಿಂದ ಮಾಹಿತಿ ಪಡೆದಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ತನಿಖೆ ಆರಂಭಿಸಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ