ಅಂಗಡಿ ಶೆಟರ್​ ಮುರಿದು, ಬಟ್ಟೆಗಳ ಬ್ರಾಂಡ್ ನೋಡಿ, ತಮಗಿಷ್ಟವಾದ ಬಟ್ಟೆಗಳನ್ನ ಸೆಲೆಕ್ಟ್ ಮಾಡಿ ಕದ್ದೊಯ್ದ ಐನಾತಿ ಕಳ್ಳರು..!

ಆರೋಪಿಗಳು ತಮಗಿಷ್ಟವಾದ ಬಟ್ಟೆಗಳನ್ನ ಸೆಲೆಕ್ಟ್ ಮಾಡಿ, ಬ್ರಾಂಡ್​ಗಳನ್ನ ನೋಡಿ ಬಟ್ಟೆ ಕದ್ದಿದ್ದಾರೆ. ಕಳವು ಮಾಡಿದ ಬ್ರಾಂಡೆಡ್ ಬಟ್ಟೆಗಳನ್ನ ಮೂಟೆಯಲ್ಲಿ ತುಂಬಿಕೊಂಡು ಆಟೋದಲ್ಲಿ ಎಸ್ಕೇಪ್ ಆಗಿದ್ದಾರೆ.

ಅಂಗಡಿ ಶೆಟರ್​ ಮುರಿದು, ಬಟ್ಟೆಗಳ ಬ್ರಾಂಡ್ ನೋಡಿ, ತಮಗಿಷ್ಟವಾದ ಬಟ್ಟೆಗಳನ್ನ ಸೆಲೆಕ್ಟ್ ಮಾಡಿ ಕದ್ದೊಯ್ದ ಐನಾತಿ ಕಳ್ಳರು..!
ಶೆಟರ್ ಮುರಿಯಲು ಯತ್ನಿಸುತ್ತಿರುವ ಕಳ್ಳರು

Updated on: Jan 23, 2021 | 11:35 AM

ಬೆಂಗಳೂರು: ನಗರದಲ್ಲಿ ಬ್ರಾಂಡೆಡ್ ಬಟ್ಟೆ ಕಳ್ಳರ ಹಾವಳಿ ಮತ್ತೆ ಶುರುವಾಗಿದ್ದು, ಆಟೋದಲ್ಲಿ ಬಂದ ಕಳ್ಳರು ಬಟ್ಟೆ ಶೋ ರೂಂ ಶೆಟರ್ ಮುರಿದು ಬ್ರಾಂಡೆಡ್ ಬಟ್ಟೆಗಳ ಕಳವು ಮಾಡಿರುವ ಘಟನೆ ಕತ್ರಿಗುಪ್ಪೆಯ ಫೇವರೆಟ್ ಸಾಚ್ ಬಟ್ಟೆ ಶೋ ರೂಂ ನಲ್ಲಿ ನಡೆದಿದೆ.

ಕಳೆದ ಜನವರಿ 21 ರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಂಗಡಿಗೆ ಎಂಟ್ರಿಕೊಟ್ಟಿರೋ ಕಳ್ಳರು ಕಬ್ಬಿಣದ ರಾಡ್ ಬಳಸಿ ಅಂಗಡಿಯ ಶೆಟರ್ ಮುರಿದು ಒಳಗೆ ನುಸುಳಿದ್ದಾರೆ. ನಂತರ ಬಟ್ಟೆ ಶೋ ರೋಂ ಒಳಗೆ ಮೊಬೈಲ್ ಟಾರ್ಚ್ ಬಳಸಿ ಕ್ಯಾಶ್ ಬಾಕ್ಸ್​ನಲ್ಲಿದ್ದ 20 ಸಾವಿರ ನಗದು ಹಾಗೂ ಲಕ್ಷ ರೂ ಬೆಲೆಬಾಳುವ ಬ್ರಾಂಡೆಡ್ ಬಟ್ಟೆ ಕಳವು ಮಾಡಿದ್ದಾರೆ.

ಬ್ರಾಂಡ್​ಗಳನ್ನ ನೋಡಿ ಬಟ್ಟೆ ಕದ್ದಿದ್ದಾರೆ..
ಆರೋಪಿಗಳು ತಮಗಿಷ್ಟವಾದ ಬಟ್ಟೆಗಳನ್ನ ಸೆಲೆಕ್ಟ್ ಮಾಡಿ, ಬ್ರಾಂಡ್​ಗಳನ್ನ ನೋಡಿ ಬಟ್ಟೆ ಕದ್ದಿದ್ದಾರೆ. ಕಳವು ಮಾಡಿದ ಬ್ರಾಂಡೆಡ್ ಬಟ್ಟೆಗಳನ್ನ ಮೂಟೆಯಲ್ಲಿ ತುಂಬಿಕೊಂಡು ಆಟೋದಲ್ಲಿ ಎಸ್ಕೇಪ್ ಆಗಿದ್ದಾರೆ. ಆರೋಪಿಗಳ ಈ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಟ್ಟೆ ಅಂಗಡಿ ಮಾಲೀಕ ಬಾಬು ಎಂಬುವವರು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಯಲ್ಲಿ ದೂರು ನೀಡಿದ್ದಾರೆ.

ಲಾರಿ ಕಳವು ಮಾಡಿದ್ದ ಆರೋಪಿ ಬಂಧನ