AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುತ್ತೂಟ್ ಫೈನಾನ್ಸ್ ದರೋಡೆ: 18 ಗಂಟೆಯಲ್ಲಿ ಉತ್ತರ ಭಾರತದ ಕಳ್ಳರು ಅಂದರ್​, 25 ಕೆ. ಜಿ. ಚಿನ್ನ ವಶಕ್ಕೆ..!

ಆರೋಪಿಗಳು ಬಳಸುತ್ತಿದ್ದ ಕಂಟೇನರ್ ಲಾರಿ, ಏಳು ನಾಡ ಪಿಸ್ತೂಲ್,ಎರಡು ಮಚ್ಚು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸುಮಾರು ಏಳೂವರೆ ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಮುತ್ತೂಟ್ ಫೈನಾನ್ಸ್ ದರೋಡೆ: 18 ಗಂಟೆಯಲ್ಲಿ ಉತ್ತರ ಭಾರತದ ಕಳ್ಳರು ಅಂದರ್​, 25 ಕೆ. ಜಿ. ಚಿನ್ನ ವಶಕ್ಕೆ..!
ಬಂಧಿತರಿಂದ ಚಿನ್ನ ವಶಕ್ಕೆ ಪಡೆದ ಪೊಲೀಸರು
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​|

Updated on:Jan 23, 2021 | 12:31 PM

Share

ಆನೇಕಲ್: ಹೊಸೂರು ಮುತ್ತೂಟ್ ಫೈನಾನ್ಸ್ ಶಾಖೆ ದರೋಡೆ ಪ್ರಕರಣವನ್ನು ದರೋಡೆ ನಡೆದ 18 ಗಂಟೆಗಳಲ್ಲೇ ಬೇಧಿಸಿದ್ದಾರೆ. ತಮಿಳುನಾಡು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ನಿನ್ನೆ ತಮಿಳುನಾಡಿನ ಹೊಸೂರು ಬಳಿಯ ಬಾಗಲೂರಿನಲ್ಲಿ ದರೋಡೆಕೋರರು ಹಾಡಹಗಲೇ ಮುತ್ತೂಟ್ ಫೈನಾನ್ಸ್ ಕಚೇರಿಗೆ ನುಗ್ಗಿ 25 ಕೆಜಿ ಚಿನ್ನ ಮತ್ತು ನಗದು ದರೋಡೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಇಂದು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ಏಳೂವರೆ ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ.. ಹೈದರಾಬಾದ್ ಸಮೀಪದ ಸಂಸತ್ ಪುರ ಹೆದ್ದಾರಿ ಬಳಿ ಕಳ್ಳರನ್ನು ಅರೆಸ್ಟ್ ಮಾಡಿದ ಪೊಲೀಸರು, ಆರೋಪಿಗಳು ಬಳಸುತ್ತಿದ್ದ ಕಂಟೇನರ್ ಲಾರಿ, ಏಳು ನಾಡ ಪಿಸ್ತೂಲ್, ಎರಡು ಮಚ್ಚುಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸುಮಾರು ಏಳೂವರೆ ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಉತ್ತರ ಭಾರತ ಮೂಲದವರಾಗಿದ್ದು, ಆರೋಪಿಗಳನ್ನು ಬಂಧಿಸಿ ತಮಿಳುನಾಡಿಗೆ ಕರೆ ತರುತ್ತಿದ್ದಾರೆ.

ಘಟನೆ ಬಳಿಕ ತಮಿಳುನಾಡು ಪೊಲೀಸರು ಮೂರು ವಿಶೇಷ ತನಿಖಾ ತಂಡ ರಚಿಸಿ ತನಿಖೆಗಿಳಿದಿದ್ದರು. ಇಂದು ಬೆಳಗಿನ ಜಾವ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ನಡೆದ 18 ಗಂಟೆಗಳಲ್ಲಿ ದರೋಡೆಕೋರರನ್ನು ಬಂಧಿಸಿದ್ದಕ್ಕಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ತಮಿಳುನಾಡು ಪೊಲೀಸರನ್ನು ಅಭಿನಂದಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ.. ಇಂದು ಬೆಳಗ್ಗೆ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ದರೋಡೆ, ಎಷ್ಟು ಚಿನ್ನ ದೋಚಿದ್ದಾರೆ ಗೊತ್ತಾ?

Published On - 12:31 pm, Sat, 23 January 21