Breaking News: ಕಿರುತೆರೆ ಸಹನಟ ಸೇರಿ ಮೂವರು ಮಾದಕ ದಂಧೆಕೋರರ ಬಂಧನ

| Updated By: Rakesh Nayak Manchi

Updated on: Sep 23, 2022 | 2:24 PM

Bangalore News: ನಗರದಲ್ಲಿ ಮಾದಕ ದಂಧೆ ನಡೆಸುತ್ತಿದ್ದ ಕಿರುತೆರೆ ಸಹನಟ ಸೇರಿದಂತೆ ಒಟ್ಟು ಮೂವರು ಅಂತಾರಾಜ್ಯ ಮೂಲದ ಮಾದಕ ದಂಧೆಕೋರರನ್ನು ಎಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Breaking News: ಕಿರುತೆರೆ ಸಹನಟ ಸೇರಿ ಮೂವರು ಮಾದಕ ದಂಧೆಕೋರರ ಬಂಧನ
ಕಿರುತೆರೆ ಸಹನಟ ಸೇರಿ ಮೂವರು ಮಾದಕ ದಂಧೆಕೋರರ ಬಂಧನ
Follow us on

ಬೆಂಗಳೂರು: ನಗರದಲ್ಲಿ ಮಾದಕ ದಂಧೆ ನಡೆಸುತ್ತಿದ್ದ ಕಿರುತೆರೆ ಸಹನಟ ಸೇರಿದಂತೆ ಒಟ್ಟು ಮೂವರು ಅಂತಾರಾಜ್ಯ ಮೂಲದ ಮಾದಕ ದಂಧೆಕೋರರನ್ನು ಎಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಯಾಜ್, ಮಹಮ್ಮದ್ ಶಾಹಿದ್, ಮಂಗಲ್ ತೋಡಿ ಜಿತೀನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇವೆರೆಲ್ಲರೂ ಕೇರಳ ಮೂಲದವರಾಗಿದ್ದಾರೆ. ಸದ್ಯ ಆರೋಪಿಗಳಿಂದ ಪೊಲೀಸರು ಬರೋಬ್ಬರಿ 13 ಲಕ್ಷ ಮೌಲ್ಯದ 191 ಗ್ರಾಂ ಎಂಡಿಎಂಎ ಹಾಗೂ 2.80ಕೆಜಿ‌ ಗಾಂಜಾ ವಶಕ್ಕೆ ಪಡೆದಿದ್ದಾರೆ. ಬಂಧಿತರ ಪೈಕಿ ಶಿಯಾಜ್ ಮಲಯಾಳಂ ಕಿರುತೆರೆಯಲ್ಲಿ ಸಹನಟನಾಗಿ ಕೆಲಸ ಮಾಡಿಕೊಂಡಿದ್ದನು. ಮಹಮ್ಮದ್ ಶಾಹಿದ್ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಸದ್ಯ ಬಂಧಿತರ ವಿರುದ್ಧ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ತಹಶೀಲ್ದಾರ್​ ಕಚೇರಿ ಮೇಲೆ ನಕಲಿ ಅಧಿಕಾರಿ ದಾಳಿ

ಚಿಕ್ಕಬಳ್ಳಾಪುರ: ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ನಕಲಿ ಅಧಿಕಾರಿಯೊಬ್ಬ ಚಿಕ್ಕಬಳ್ಳಾಪುರ ತಹಶೀಲ್ದಾರ್​ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಂತೆ ಕೈಯಲ್ಲಿ ಒಂದು ಫೈಲ್ ಹಿಡಿದುಕೊಂಡು ಟಿಪ್ ಟಾಪ್ ಆಗಿ ಕಚೇರಿಗೆ ಬಂದ ನಕಲಿ ಅಧಿಕಾರಿ ಕಾಲಮೇಲೆ ಕಾಲು ಹಾಕಿಕೊಂಡು ಧಿಮಾಕಿನ ಶೈಲಿಯಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರನ್ನು ವಿಚಾರಣೆ ನಡೆಸಿದ್ದಾನೆ. ಆದರೆ ಈತನ ನಡೆ ತಹಶೀಲ್ದಾರರಿಗೆ ಅನುಮಾನ ಉಂಟು ಮಾಡಿದೆ. ಹೀಗಾಗಿ ಲೋಕಾಯುಕ್ತ ಅಧಿಕಾರಿ ಎನ್ನುವುದಕ್ಕೆ ದಾಖಲೆ ನೀಡುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಈ ವೇಳೆ ನಕಲಿ ಅಧಿಕಾರಿಯ ಮುಖವಾಡ ಕಳಚಿದ್ದಲ್ಲದೆ ಕಚೇರಿಯಿಂದ ಓಡಿ ಹೋಗಿದ್ದಾನೆ. ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್​ ಠಾಣೆಗೆ ತಹಶೀಲ್ದಾರ್ ದೂರು ನೀಡಿದ್ದಾರೆ.

ವಿದ್ಯುತ್​​​​ ಕಡಿತಗೊಳಿಸಿದ್ದಕ್ಕೆ ಹಲ್ಲೆ

ಮಂಗಳೂರು: ಬಿಲ್ ಪಾವತಿಸದ ಹಿನ್ನೆಲೆ ವಿದ್ಯುತ್​​​​ ಕಡಿತಗೊಳಿಸಿದ್ದಕ್ಕೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ನಡೆದಿದೆ. ಮೆಸ್ಕಾಂ ಸಿಬ್ಬಂದಿಗಳಾದ ದುಂಡಪ್ಪ, ಉಮೇಶ್ ಎಂಬವರ​ ಮೇಲೆ 3,530 ರೂ. ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿದ್ದ ಹತ್ಯಡ್ಕ ಗ್ರಾಮದ ರಿಜೀಶ್(38) ಎಂಬಾತ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಸೋಡಾ ಬಾಟಲಿಯಿಂದ ರಿಜೀಶ್ ದುಂಡಪ್ಪ ಅವರ ತಲೆಗೆ ಬಲವಾಗಿ ಹೊಡೆದಿರುವ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೋರ್ವ ಪವರ್ ಮ್ಯಾನ್ ಉಮೇಶ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Fri, 23 September 22