ದುಷ್ಕರ್ಮಿಗಳು ಉದ್ಯಮಿಯ ಮನೆಗೆ ನುಗ್ಗಿ ದರೋಡೆ(Robbery) ಮಾಡಿದ್ದಷ್ಟೇ ಅಲ್ಲದೆ ಅವರ ಪತ್ನಿಯನ್ನು ಕಟ್ಟಿಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ. ಉದ್ಯಮಿಯ ಮನೆಯಲ್ಲಿ ದರೋಡೆ ನಡೆದಿದ್ದು, ಅವರು ತಮ್ಮ ತಾಯಿ ಮತ್ತು ಇಬ್ಬರು ಮಕ್ಕಳೊಂದಿಗೆ ವೈದ್ಯರನ್ನು ಭೇಟಿ ಮಾಡಲು ಹೊರಟಿದ್ದರು.
ಐವರು ಮನೆಗೆ ನುಗ್ಗಿ ಉದ್ಯಮಿಯ ಮಹಿಳೆಯನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ದರೋಡೆಕೋರರು ಮದ್ಯ ಸೇವಿಸಿ, ಪತ್ನಿಗೆ ಸಿಗರೇಟ್ನಿಂದ ಸುಟ್ಟಿದ್ದಾರೆ.
ಜತೆಗೆ ಮನೆಯಲ್ಲಿ ಇದ್ದ ಚಿನ್ನಾಭರಣಗಳು, 2 ಕೆಜಿ ಬೆಳ್ಳಿ , 1.5 ಲಕ್ಷ ನಗದು, ಸ್ಕೂಟರ್, ಎಲ್‌ಇಡಿ ಟಿವಿ ಕಳವು ಮಾಡಿದ್ದಾರೆ ಎಂದು ಉದ್ಯಮಿ ಪೊಲೀಸರಿಗೆ ತಿಳಿಸಿದ್ದಾರೆ.
ದರೋಡೆಕೋರರು ಬೆಲೆಬಾಳುವ ವಸ್ತುಗಳನ್ನು ಇಟ್ಟಿದ್ದ ಅಲ್ಮೆರಾಗಳು ಮತ್ತು ಕೊಠಡಿಗಳ ಬೀಗಗಳನ್ನು ಕತ್ತರಿಸಿದ್ದಾರೆ. ನಂತರ ಅವರು ಉದ್ಯಮಿಯ ಪತ್ನಿಗೆ ಮದ್ಯ ಕುಡಿಸಿದ್ದಾರೆ ಎಂದು ಬಿಜ್ನೋರ್ ನಿವಾಸಿ ಪೊಲೀಸರಿಗೆ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಹರ್ಯಾಣ: ಪಕ್ಕದ ಮನೆಯ ಬಾತ್ರೂಂನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ 3 ವರ್ಷದ ಹೆಣ್ಣು ಮಗುವಿನ ಶವ ಪತ್ತೆ
ಪೊಲೀಸರು ಮೊದಲು ಇಡೀ ವಿಷಯವನ್ನು ಹತ್ತಿಕ್ಕಲು ಪ್ರಯತ್ನಿಸಿದರು, ಆದರೆ ಪ್ರಕರಣವು ಮಾಧ್ಯಮಗಳಲ್ಲಿ ಕಾಣಿಸಿಕೊಂಡ ನಂತರ ದೂರು ದಾಖಲಿಸಿದರು.
ಅಕ್ಟೋಬರ್ 19ರಂದು ಕೂಡ ದರೋಡೆ ನಡೆದಿತ್ತು, ಉದ್ಯಮಿಯನ್ನು ದರೋಡೆಕೋರರು ಒತ್ತೆಯಾಳಾಗಿ ಇಟ್ಟುಕೊಂಡು 80,000 ರೂ. ಪಡೆದಿದ್ದಾರೆ, ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ದರೋಡೆಕೋರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು ಎಂದರು.
ಇದೀಗ ಪೊಲೀಸರು ಸಾಮೂಹಿಕ ಅತ್ಯಾಚಾರ ಮತ್ತು ದರೋಡೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ