ಅಂತರ್ ರಾಜ್ಯ ದರೋಡೆಕೋರರ ಹೆಡೆ ಮುರಿ ಕಟ್ಟಿದ ಬೀದರ್ ಪೊಲೀಸ್: 94 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ
ಬೀದರ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಾಂಜಾ, ದರೋಡೆ, ಮನೆಗಳ್ಳತನ ಸೇರಿ ಒಟ್ಟು ಐದು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು 9 ದರೋಡೆಕೋರರನ್ನು ಬಂಧಿಸಿದ್ದಾರೆ.
ಬೀದರ್, ಅ.24: ಬೀದರ್ ಪೊಲೀಸರು (Bidar Police) ಅಂತರ್ ರಾಜ್ಯ ದರೋಡೆಕೋರರ (Robbery) ಹೆಡೆ ಮುರಿ ಕಟ್ಟಿದ್ದಾರೆ. ಬೀದರ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಾಂಜಾ, ದರೋಡೆ, ಮನೆಗಳ್ಳತನ ಸೇರಿ ಒಟ್ಟು ಐದು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು 9 ದರೋಡೆಕೋರರನ್ನು ಬಂಧಿಸಿದ್ದಾರೆ. ಹಾಗೂ 94 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಕಂಟೆನರ್ ಡ್ರೈವರ್ಗೆ ಮತ್ತುಬರುವ ಇಂಜೆಕ್ಷನ್ ಚುಚ್ಚಿ ಲಾರಿ ಕದ್ದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲಾರಿಯಲ್ಲಿ ಸಾಗಿಸುತ್ತಿದ್ದ 50 ಲಕ್ಷ 76 ಸಾವಿರ ಮೌಲ್ಯದ 694 ಫ್ಯಾನ್ ಬಾಕ್ಸ್ ಲಾರಿ ವಶಕ್ಕೆ ಪಡೆಯಲಾಗಿದೆ. ಹಾಗೂ 12 ಲಕ್ಷ 82 ಸಾವಿರ ಮೌಲ್ಯದ 180 ಗ್ರಾಮ್ ಬಂಗಾರದ ಆಭರಣ, ಎರಡು ಕೆಜಿಯಷ್ಟು ಬೆಳ್ಳಿಯ ಆಭರಣ ಒಂದು ಬೈಕ್ 20 ಸಾವಿರ ನಗದು ಹಣ ವಶಕ್ಕೆ ಪಡೆಯಲಾಗಿದೆ. ಸಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಗಾಂಜಾ ಪ್ರಕರಣ ಭೇದಿಸಿದ್ದಾರೆ. ಔರಾದ್ ತಾಲೂಕಿನ ವಿಜಯನಗರ ತಾಂಡಾದಲ್ಲಿ ರೈತ ತೊಗರಿ ಹೊಲದಲ್ಲಿ ಅಕ್ರಮವಾಗಿ 63.86 ಕೆಜಿಯಷ್ಟು 79 ಗಾಂಜಾ ಗಿಡಗಳನ್ನು ಬೆಳೆಸಿದ್ದ. ದಾಳಿ ಮಾಡಿದ ಪೊಲೀಸರು 25 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಒಟ್ಟು ಐದು ಪ್ರಕರಣದಲ್ಲಿ 94 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ.
ಹುಲಿ ಉಗುರಿನ ಡಾಲರ್ ಧರಿಸಿದ್ದ ಇಬ್ಬರ ಬಂಧನ
ಹುಲಿ ಉಗುರಿನ ಡಾಲರ್ ಧರಿಸಿದ್ದ ಇಬ್ಬರನ್ನ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಭಾರತಿ ಬೈಲು ಬಳಿಯ ಕುಂಡ್ರ ಗ್ರಾಮದ ಸತೀಶ್ ಹಾಗೂ ಕುಂದೂರು ನಿವಾಸಿ ಕೆ.ಎಸ್.ರಂಜಿತ್ ಬಂಧಿತ ಆರೋಪಿಗಳು. ಹುಲಿ ಉಗುರು ಮಾರಾಟ ಮಾಡುತ್ತಿದ್ದ ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಹುಲಿ ಉಗುರಿನ ಒಂದು ಡಾಲರ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪುನರ್ವಸತಿ ಕೇಂದ್ರ ಕಟ್ಟಡದ ಮೇಲಿಂದ ಬಿದ್ದು ವ್ಯಕ್ತಿ ಸಾವು
ಮಟ್ಕಾ ಸೋಡಾ ಸ್ಟಾಲ್ಗಳ ಮೇಲೆ ದಾಳಿ
ಮಂಗಳೂರಿನ ಮಟ್ಕಾ ಸೋಡಾ ಸ್ಟಾಲ್ಗಳ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋಕರ್ಣನಾಥೇಶ್ವರ ದೇವಸ್ಥಾನ ಬಳಿಯ ಮಟ್ಕಾ ಸೋಡಾ ಮಾರುತ್ತಿದ್ರು. ಆದರೆ ಯಾವುದೇ ಸ್ವಚ್ಛತೆ ಕಾಪಾಡದೇ ಮಟ್ಕಾ ಸೋಡಾ ವ್ಯಾಪಾರ ಮಾಡುತ್ತಿದ್ರು. ಕೊಳಚೆ ನೀರಿನಲ್ಲಿ ಮಟ್ಕಾ ಪಾಟ್ಗಳನ್ನು ತೊಳೆಯುವ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ವೈರಲ್ ಬೆನ್ನಲ್ಲೇ ಪಾಲಿಕೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:27 pm, Tue, 24 October 23