ಪಬ್ಲಿಕ್​ನಲ್ಲಿ ಡ್ರ್ಯಾಗರ್ ತೋರಿಸಿ ಬೈಕ್ ಸವಾರನಿಗೆ ಬೆದರಿಕೆ ಹಾಕಿದ್ದ ಕಾರು ಚಾಲಕ ಅರೆಸ್ಟ್

|

Updated on: Apr 08, 2023 | 9:39 PM

ಟಾಟಾ ಏಸ್ ಚಾಲಕನಿಂದ ಡ್ರ್ಯಾಗರ್ ಹಿಡಿದು ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿರುವಂತಹ ಘಟನೆ ರಾಮಮೂರ್ತಿನಗರದ ರಿಂಗ್ ರಸ್ತೆಯಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪಬ್ಲಿಕ್​ನಲ್ಲಿ ಡ್ರ್ಯಾಗರ್ ತೋರಿಸಿ ಬೈಕ್ ಸವಾರನಿಗೆ ಬೆದರಿಕೆ ಹಾಕಿದ್ದ ಕಾರು ಚಾಲಕ ಅರೆಸ್ಟ್
ಬೈಕ್ ಸವಾರನಿಗೆ ಡ್ರ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿದ್ದ ಕಾರು ಚಾಲಕನನ್ನು ಬಂಧಿಸಿದ ಬೆಂಗಳೂರು ಪೊಲೀಸರು (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಡ್ರ್ಯಾಗರ್ ಹಿಡಿದು ಬೈಕ್ ಸವಾರನಿಗೆ ಸಾರ್ವಜನಿಕವಾಗಿ ಜೀವ ಬೆದರಿಕೆ (Threat to life) ಹಾಕಿದ ಪ್ರಕರಣ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ರಾಮಮೂರ್ತಿ ನಗರ ಠಾಣಾ ಪೊಲೀಸರು, ಆರೋಪಿ ಕಾರು ಚಾಲಕನನ್ನು ಬಂಧಿಸಿದ್ದಾರೆ. ಕೆಆರ್ ಪುರಂ ಬಳಿಯ ಸಿಗೇಹಳ್ಳಿ ನಿವಾಸಿ ಅರುಣ್ ಕುಮಾರ್ ಬಂಧಿತ (Arrest) ಆರೋಪಿಯಾಗಿದ್ದಾನೆ. ಮೊಬೈಲ್​ನಲ್ಲಿ ಮಾತಾಡುತ್ತಾ ಟಾಟಾ ಏಸ್​ನಲ್ಲಿ ಬರುತ್ತಿದ್ದ ಅರುಣ್ ಕುಮಾರ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ (Car Bike Accident) ಹೊಡೆದಿದ್ದನು. ಇದನ್ನು ಪ್ರಶ್ನೆ ಮಾಡಿದ್ದ ಸವಾರ ಪ್ರಕಾಶ್ ಎಂಬುವರಿಗೆ ಅರುಣ್ ಕುಮಾರ್ ಡ್ರ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದನು.

ಅರುಣ್ ಕುಮಾರ್ ಡ್ರ್ಯಾಗರ್ ತೋರಿಸಿ ಬೆದರಿಕೆ ಹಾಕುತ್ತಿದ್ದಾಗ ತನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡ ಪ್ರಕಾಶ್, ತನ್ನ ಟ್ವಿಟರ್​ ಖಾತೆ ಮೂಲಕ ವಿಡಿಯೋ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಬೆಂಗಳೂರು ಪೊಲೀಸ್ ಖಾತೆಯನ್ನು ಟ್ಯಾಗ್ ಮಾಡಿದ್ದರು. ಇತ್ತ ವಿಡಿಯೋ ನೋಡಿದ ರಾಮಮೂರ್ತಿ ನಗರ ಪೊಲೀಸರು, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ವೇಳೆ ಬೆದರಿಕೆ ಹಾಕಿದ ವ್ಯಕ್ತಿ ಕೆಆರ್​ ಪುರಂ ಬಳಿಯ ಸಿಗೇಹಳ್ಳಿ ನಿವಾಸಿ ಅರುಣ್ ಕುಮಾರ್​ ಎಂದು ತಿಳಿದುಬಂದಿದೆ. ಅದರಂತೆ ಅರುಣ್​ನನ್ನು ಪತ್ತೆಹಚ್ಚಿದ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಆ ನ್ಯಾಯಾಧೀಶರ ನಾಲಿಗೆ ಕಟ್​ ಮಾಡಿಬಿಡುತ್ತೇನೆ’ ಎಂದು ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ!

ಚಿಕ್ಕಬಳ್ಳಾಪುರ: ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರುಪಾಲು

ಚಿಕ್ಕಬಳ್ಳಾಪುರ: ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರುಪಾಲದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಾಪಗ್ನಿ ನದಿಯಲ್ಲಿ ನಡೆದಿದೆ. ಪಲಿಚೇರ್ಲು ಗ್ರಾಮದ ಮಂಜುನಾಥ (32), ಮಂಜುನಾಥ (42) ಸಾವನ್ನಪ್ಪಿದವರು. ನದಿಗಿಳಿದು ಮೀನು ಹಿಡಿಯಲು ಬೀಸಿದ ಬಲೆ ಇಬ್ಬರ ಕಾಲಿಗೆ ಸಿಲುಕಿದೆ. ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:39 pm, Sat, 8 April 23