ನಕಲಿ ಪಾಸ್ಪೋರ್ಟ್​ ಮೂಲಕ ಬೆಂಗಳೂರಿಗೆ ಬಂದಿದ್ದ 2 ಬಾಂಗ್ಲಾ ಪ್ರಜೆಗಳ ಬಂಧನ

ನಕಲಿ ಭಾರತೀಯ ಪಾಸ್​ಪೋರ್ಟ್​​ ಮಾಡಿಸಿಕೊಂಡು ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿರುವುದಾಗಿ ಶನಿವಾರ ತಿಳಿಸಿದ್ದಾರೆ.

ನಕಲಿ ಪಾಸ್ಪೋರ್ಟ್​ ಮೂಲಕ ಬೆಂಗಳೂರಿಗೆ ಬಂದಿದ್ದ 2 ಬಾಂಗ್ಲಾ ಪ್ರಜೆಗಳ ಬಂಧನ
ಪ್ರಾತಿನಿಧಿಕ ಚಿತ್ರ
Follow us
|

Updated on:Apr 08, 2023 | 7:41 PM

ಬೆಂಗಳೂರು: ನಕಲಿ ಭಾರತೀಯ ಪಾಸ್​ಪೋರ್ಟ್ (passport)​​ ಮಾಡಿಸಿಕೊಂಡು ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿರುವುದಾಗಿ ಶನಿವಾರ ತಿಳಿಸಿದ್ದಾರೆ. ಲಿಯಾಕತ್ ಅಲಿ ಮತ್ತು ರಿಜಾವುಲ್ ಶೇಖ್​ ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಏಪ್ರಿಲ್ 7 ರ ಶುಕ್ರವಾರ ಸಿಂಗಾಪುರದಿಂದ ಇಂಡಿಗೊ ವಿಮಾನ 6 ಇ 1006 ನಲ್ಲಿ ಬೆಂಗಳೂರಿಗೆ ಬಂದಿಳಿದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ನ್ಯೂಸ್9ಗೆ ತಿಳಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಇಬ್ಬರ ಪಾಸ್​ಪೋರ್ಟ್​ಗಳನ್ನು ಪರಿಶೀಲಿಸಿದಾಗ ಬೇರೆಯವರ ಹೆಸರಿನಲ್ಲಿ ಮೋಸದಿಂದ ಭಾರತೀಯ ಪಾಸ್​ಪೋರ್ಟ್ ಹೊಂದಿರುವುದು ಕಂಡುಬಂದಿದೆ. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ) ಅಧಿಕಾರಿಯ ದೂರಿನ ಆಧಾರದ ಮೇಲೆ, ಪಾಸ್​ಪೋರ್ಟ್ ಕಾಯ್ದೆಯ ಸೆಕ್ಷನ್ 12 (1 ಎ) (ಎ) (ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸುವುದು ಅಥವಾ ಅವರ ರಾಷ್ಟ್ರೀಯತೆಯ ಬಗ್ಗೆ ಮಾಹಿತಿಯನ್ನು ಮರೆಮಾಚುವ ಮೂಲಕ ಪಾಸ್​ಪೋರ್ಟ್ ಪಡೆಯುವುದು ಅಥವಾ ನಕಲಿ ಪಾಸ್​ಪೋರ್ಟ್ ಅಥವಾ ಯಾವುದೇ ಪ್ರಯಾಣ ದಾಖಲೆಯನ್ನು ಹೊಂದಿರುವುದು) ಮತ್ತು 14 (ಎ) (ಎ) (ಭಾರತದ ಯಾವುದೇ ಪ್ರದೇಶವನ್ನು ಪ್ರವೇಶಿಸುವುದು) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಬೆನ್ನತ್ತಿದ ಜನರಿಂದ ಕಾರಿಗೆ ಬೆಂಕಿ

ವಿದೇಶಿಯರ ಕಾಯ್ದೆಯ ಪ್ರಕಾರ ಮಾನ್ಯ ದಾಖಲೆಗಳಿಲ್ಲದೆ ಭಾರತದ ಯಾವುದೇ ಪ್ರದೇಶಕ್ಕೆ ಪ್ರವೇಶಿಸುವುದು ಅಥವಾ ಉಳಿಯುವುದನ್ನು ನಿರ್ಬಂಧಿಸಲಾಗಿದೆ. ಈ ಕುರಿತಾಗಿ ಮುಂದಿನ ದಿನಗಳಲ್ಲಿ ತನಿಖೆ ನಡೆಯಲಿದೆ. ನಾವು ಈಗಷ್ಟೇ ಪ್ರಕರಣ ದಾಖಲಿಸಿದ್ದೇವೆ ಮತ್ತು ಅವರು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನ್ಯೂಸ್ 9ಗೆ ತಿಳಿಸಿದ್ದಾರೆ.

ಡ್ರ್ಯಾಗರ್​ ಹಿಡಿದು ರಸ್ತೆಯಲ್ಲೇ ಸಾರ್ವಜನಿಕವಾಗಿ ಬೆದರಿಕೆ: ವಿಡಿಯೋ ಸಮೇತ​ ದೂರು ನೀಡಿದ ಬೈಕ್​ ಸವಾರ

ಟಾಟಾ ಏಸ್ ಚಾಲಕನಿಂದ ಡ್ರ್ಯಾಗರ್​ ಹಿಡಿದು ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿರುವಂತಹ ಘಟನೆ ರಾಮಮೂರ್ತಿನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ. ಮೊಬೈಲ್​ನಲ್ಲಿ ಮಾತಾಡುತ್ತಾ ಸ್ಕೂಟರ್​ಗೆ ಟಾಟಾ ಏಸ್ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದ ಪ್ರಕಾಶ್ ಎಂಬುವರಿಗೆ ಚಾಲಕನಿಂದ ಬೆದರಿಕೆ ಹಾಕಲಾಗಿದೆ. ಘಟನೆ ಕುರಿತು ಪೊಲೀಸ್ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿರುವ ಸವಾರ ಪ್ರಕಾಶ್, ವಿಡಿಯೋ ಸಮೇತ​ ದೂರು ನೀಡಿದ್ದಾರೆ.

ಇದನ್ನೂ ಓದಿ: ಅವರು ತಮಿಳುನಾಡಿನವರು, ರೈಲಿನಲ್ಲಿ ಕರ್ನಾಟಕಕ್ಕೆ ಬರ್ತಿದ್ದರು, ಮಳ್ಳರಂತೆ ಎಲ್ಲಿ ಏನನ್ನು ಟಾರ್ಗೆಟ್ ಮಾಡ್ತಿದ್ದರು, ಏನನ್ನು ಎಗರಿಸುತ್ತಿದ್ದರು ಗೊತ್ತಾ!?

ಮತ್ತೊಂದು ಪ್ರಕರಣದಲ್ಲಿ ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ ಕದೀಮನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವೇಲೂರು ನಿವಾಸಿ ದೀನ್ ದಯಾಳನ್ (48) ಬಂಧಿತ ಆರೋಪಿ. ತಮಿಳುನಾಡಿನಲ್ಲಿ ಕಳ್ಳತನ ಕೇಸ್​ನಲ್ಲಿ ಅಲೆದು ಸಾಕಾಯ್ತು ಅಂತ ಬೆಂಗಳೂರಿನಲ್ಲಿ ಕೇಸ್ ಮಾಡಲಾಗಿದೆ. ಆರೋಪಿ ಲಾರಿ ಕದ್ದು ಪೊಲೀಸರ ಬಲೆಗೆ ಬಿದಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:34 pm, Sat, 8 April 23