ಬಾಗಲಕೋಟೆಯಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಬೆನ್ನತ್ತಿದ ಜನರಿಂದ ಕಾರಿಗೆ ಬೆಂಕಿ

ಮಕ್ಕಳ ಕಳ್ಳರೆದಂದು ಭಾವಿಸಿದ ಜನರು ಕಾರಿನಲ್ಲಿದ್ದವರನ್ನು ಬೆನ್ನತ್ತಿ ಕಾರಿಗೇ ಬೆಂಕಿ ಹಚ್ಚಿದ ಘಟನೆ ಬಾಗಲಕೋಟೆ ಬೆಳಗಾವಿ ಹೆದ್ದಾರಿ ಬಳಿ ನಡೆದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಬಾಗಲಕೋಟೆಯಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಬೆನ್ನತ್ತಿದ ಜನರಿಂದ ಕಾರಿಗೆ ಬೆಂಕಿ
ಬಾಗಲಕೋಟೆಯಲ್ಲಿ ಕಾರಿಗೆ ಬೆಂಕಿ ಹಚ್ಚಿದ ಜನರು
Follow us
|

Updated on:Apr 07, 2023 | 7:54 PM

ಬಾಗಲಕೋಟೆ: ಮಕ್ಕಳ‌ ಕಳ್ಳರೆಂದು ಭಾವಿಸಿ ಕಾರಿನಲ್ಲಿದ್ದವರನ್ನು ಬೆನ್ನತ್ತಿದ ಜನರು ಬಳಿಕ ಕಾರಿಗೆ ಬೆಂಕಿ ಹಚ್ಚಿದ ಘಟನೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿರುವ ಬಾಗಲಕೋಟೆ ಬೆಳಗಾವಿ ಹೆದ್ದಾರಿ ಬಳಿ ನಡೆದಿದೆ. ಕಾರಿನಲ್ಲಿರುವ ಪ್ರಯಾಣಿಕರು ಮಕ್ಕಳ ಕಳ್ಳರೆಂದು (Child thieves) ಭಾವಿಸಿದ ಹನರು ಚಿಕ್ಕೂರು ಗ್ರಾಮದಿಂದ ಚೇಸ್ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಕಾರು ವೇಗವಾಗಿ ಖಜ್ಜಿಡೋಣಿ ಗ್ರಾಮದ ಕಡೆ ಬಂದಿದೆ. ಆದರೂ ಬೆನ್ನುಬಿಡಿದ ಜನರು ಕಾರನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಕೆಲವು ಕಿಡಿಗೇಡಿಗಳು ಕಾರಿಗೆ ಬೆಂಕಿ ಹಚ್ಚಿದ್ದು, ಸುಟ್ಟು ಕರಕಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಲೋಕಾಪುರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

ಬಾಲಕೋಟೆಯಲ್ಲಿ ಇಂತಹ ಘಟನೆ ನಡೆದಿರುವುದು ಮೊದಲೇನಲ್ಲ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಇಂತಹದ್ದೇ ಒಂದು ಪ್ರಕರಣ ನಡೆದಿತ್ತು. ಮಕ್ಕಳ ಕಳ್ಳರ ವದಂತಿ ಹಿನ್ನೆಲೆ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿದ್ದರು. ಮಕ್ಕಳ ಕಳ್ಳರೆಂದು ಭಾವಿಸಿ ಬೀಳಗಿಯಿಂದ ಗ್ರಾಮದ ಜನರು ಬೈಕ್​​ನಲ್ಲಿ ಕಾರನ್ನು ಬೆನ್ನತ್ತಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವ ಬರದಲ್ಲಿ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿತ್ತು. ಘಟನೆಯಲ್ಲಿ ದೇವರಾಜ ಭಾರತಿ, ಜಯದೀಪ ಜಗದಾಳೆ, ಮೊಹಮ್ಮದ್​ ಇಲಿಯಾಸ್​ಗೆ ಗಾಯಗಳಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ: Karnataka Assembly Polls: ಬಾಗಲಕೋಟೆಯ ಹಿರೇಬಾಗೇವಾಡಿ ಟೋಲ್ ಬಳಿ ದಾಖಲೆರಹಿತ ರೂ. 2 ಕೋಟಿ ಪೊಲೀಸ್ ವಶಕ್ಕೆ, ಖಾಸಗಿ ಬಸ್ಸಲ್ಲಿ ಹಣ ಪತ್ತೆ

ಅದೇ ತಿಂಗಳಲ್ಲಿ ಕಲಬುರಗಿಯಲ್ಲೂ ಮಹಿಳೆಯರ ಮೇಲೆ ಹಲ್ಲೆ ನಡೆದಿತ್ತು. ಪೋಲಕಪಳ್ಳಿ ಗ್ರಾಮಕ್ಕೆ ಆಗಮಿಸಿದ್ದ ತೆಲಂಗಾಣದ ಕೊತ್ಲಾಪುರ ಗ್ರಾಮದಿಂದ ಇಬ್ಬರು ಮಹಿಳೆಯರು ಮಕ್ಕಳ ಕಳ್ಳರೆಂದು ಭಾವಿಸಿ ಥಳಿಸಿದ್ದರು. ಬಳಿಕ ಮಹಿಳೆಯರನ್ನು ಚಿಂಚೋಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಅದರಂತೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಥಳಿತಕ್ಕೊಳಗಾದ ಇಬ್ಬರು ಮಹಿಳೆಯರು ಗ್ರಾಮದಲ್ಲಿರುವ ತಮ್ಮ ಸಂಬಂಧಿರ ಮನೆಗೆ ಬಂದಿರುವುದು ಎಂದು ತಿಳಿದುಬಂದಿತ್ತು.

ಕೊಪ್ಪಳ ಹಾಗೂ ಬೆಳಗಾವಿಯಲ್ಲಿ ಮಕ್ಕಳ ಕಳ್ಳರು ಇದ್ದಾರೆ ಎಂಬ ವದಂತಿ ಹರಿದಾಡಿತ್ತು. ಮಕ್ಕಳನ್ನ ಕದ್ದು ಅವರ ದೇಹದ ಭಾಗಗಳನ್ನ ತೆಗೆದು ಮಾರಾಟ ಮಾಡ್ತಿದ್ದಾರೆ ಅನ್ನೋ ವದಂತಿ ಹಬ್ಬಿತ್ತು. ಇಂತಹ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದಂತೆ ಪೊಲೀಸ್ ಇಲಾಖೆ ಮಕ್ಕಳ ಕಳ್ಳರು ಇದ್ದಾರೆ ಎಂಬ ವದಂತಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿತ್ತು. ಅಲ್ಲದೆ, ಯಾವುದೇ ವ್ಯಕ್ತಿಯ ಮೇಲೆ ಅನುಮಾನ ಬಂದಲ್ಲಿ ಕಾನೂನು ಕೈಗೆ ತೆಗೆದುಕೊಳ್ಳದೆ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ತಿಳಿಸುವಂತೆ ಸೂಚಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Fri, 7 April 23