ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಬಳಿಕ ಜಮ್ಮು ಕಾಶ್ಮೀರದಲ್ಲಿ ಇಂಥದ್ದೇ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ.
ಯುವತಿ ಪ್ರೀತಿಗೆ ಒಪ್ಪದ ಕಾರಣ ರುಂಡ ಕಡಿದು, ಕೈಕಾಲುಗಳನ್ನು ತುಂಡರಿಸಿ ಊರ ತುಂಬೆಲ್ಲಾ ಎಸೆದು ಬಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಿಳೆಯ ಕರೆ ವಿವರದ ಮೇಲೆ ಈ ಬಂಧನ ಸಾಧ್ಯವಾಗಿದೆ. ಆರೋಪಿಯೂ ಕೂಡ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ವಿವಾಹಿತನಾಗಿದ್ದು, ಕಾರ್ಪೆಂಟರ್ ಕೆಲಸಕ್ಕಾಗಿ ಹುಡುಗಿ ಮನೆಗೆ ಬಂದಿದ್ದ.
ಬಂದ ಮೊದಲ ದಿನವೇ ಆಕೆಯನ್ನು ಇಷ್ಟಪಟ್ಟಿದ್ದ, ಹುಡುಗಿ ಪ್ರೀತಿಯ ಪ್ರಸ್ತಾಪವನ್ನು ನಿರಾಕರಿಸಿದ್ದಾಳೆ ಆಗ ಕೋಪಗೊಂಡ ಆತ ಯುವತಿಯನ್ನು ಹತ್ಯೆ ಮಾಡಿದ್ದಾನೆ. ಮಧ್ಯ ಕಾಶ್ಮೀರದ ಪೊಲೀಸರು ಯುವತಿಯನ್ನು ಕೊಂದು ಆಕೆಯ ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಬದ್ಗಾಮ್ ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಎಸೆದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.
ಮತ್ತಷ್ಟು ಓದಿ: Shraddha Walker Murder Case: ಶಿಕ್ಷಿತ ಹೆಣ್ಣು ಮಕ್ಕಳು ಈ ಘಟನೆಯಿಂದ ಪಾಠ ಕಲಿಯಬೇಕಿದೆ: ಕೇಂದ್ರ ಸಚಿವ ಕೌಶಲ್
ಯುವತಿ ಮಾರ್ಚ್ 7 ರಿಂದ ನಾಪತ್ತೆಯಾಗಿದ್ದಳು, ಮಹಿಳೆಯ ಕರೆ ವಿವಿರಗಳ ಆಧಾರದ ಮೇಲೆ ಪೊಲೀಸರು ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಶಬ್ಬೀರ್ ಅಹ್ಮದ್ನನ್ನು ಮಾರ್ಚ್ 8 ರಂದು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಶಬ್ಬೀರ್ ಬದ್ಗಾಮ್ ಜಿಲ್ಲೆಯ ಓಂಪೋರಾ ಪ್ರದೇಶದ ನಿವಾಸಿ. ಕೊಲೆಯ ಉದ್ದೇಶವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ