Shraddha Walker Murder Case: ಶಿಕ್ಷಿತ ಹೆಣ್ಣು ಮಕ್ಕಳು ಈ ಘಟನೆಯಿಂದ ಪಾಠ ಕಲಿಯಬೇಕಿದೆ: ಕೇಂದ್ರ ಸಚಿವ ಕೌಶಲ್
ಲಿವ್-ಇನ್ ಸಂಬಂಧಗಳು ಅಪರಾಧವನ್ನು ಉತ್ತೇಜಿಸುತ್ತಿವೆ ಎಂದು ಕೇಂದ್ರ ಸಚಿವ ಕೌಶಲ್ ಕಿಶೋರ್ ಹೇಳಿದ್ದಾರೆ
ಲಿವ್-ಇನ್ ಸಂಬಂಧಗಳು ಅಪರಾಧವನ್ನು ಉತ್ತೇಜಿಸುತ್ತಿವೆ ಎಂದು ಕೇಂದ್ರ ಸಚಿವ ಕೌಶಲ್ ಕಿಶೋರ್ ಹೇಳಿದ್ದಾರೆ. ದೆಹಲಿಯ ಮೆಹ್ರೌಲಿಯಲ್ಲಿ ನಡೆದ ಶ್ರದ್ಧಾ ವಾಕರ್ (Shraddha Walker) ಹತ್ಯೆ ಕುರಿತಂತೆ ಮಾತನಾಡಿರುವ ಅವರು, ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ಕಿಶೋರ್, ವಿದ್ಯಾವಂತ ಹುಡುಗಿಯರು ಲಿವ್-ಇನ್ ಸಂಬಂಧಗಳಿಗಾಗಿ ತಮ್ಮ ಹೆತ್ತವರನ್ನು ಬಿಟ್ಟು ಹೋಗುತ್ತಾರೆ ಮತ್ತು ಇದು ಅಪರಾಧಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಬದಲಿಗೆ ನ್ಯಾಯಾಲಯದಲ್ಲಿ ಮದುವೆಯಾಗಬೇಕು ಎಂದು ಸಲಹೆ ನೀಡಿದರು. ತಮ್ಮನ್ನು ವರ್ಷಗಟ್ಟಲೆ ಬೆಳೆಸಿದ ಹೆತ್ತವರನ್ನು ಬಿಟ್ಟು ಹೋಗದೆ ತಮ್ಮ ಜವಾಬ್ದಾರಿಯನ್ನು ಅರಿತು ನಡೆಯಬೇಕು ಎಂದು ಹೇಳಿದರು.
ಪೋಷಕರು ಸಾರ್ವಜನಿಕವಾಗಿ ಅಂತಹ ಸಂಬಂಧಗಳಿಗೆ ಸಿದ್ಧವಾಗಿಲ್ಲದಿದ್ದರೆ, ನೀವು ನ್ಯಾಯಾಲಯದಲ್ಲಿ ಮದುವೆಯಾಗಬೇಕು ಮತ್ತು ನಂತರ ಒಟ್ಟಿಗೆ ವಾಸಿಸಬೇಕು.
ಲಿವ್-ಇನ್ ಸಂಬಂಧಗಳು ಅಪರಾಧಕ್ಕೆ ಕಾರಣವಾಗುತ್ತವೆ ಎಂದು ಹೇಳಿರುವ ಅವರು ಶಿಕ್ಷಣ ಪಡೆದಿರುವ ಮತ್ತು ತುಂಬಾ ಪ್ರಾಮಾಣಿಕರಾಗಿರುವ ಮತ್ತು ತಮ್ಮ ಭವಿಷ್ಯದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಹುಡುಗಿಯರೊಂದಿಗೆ ಈ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.
ಏನಿದು ಶ್ರದ್ಧಾವಾಕರ್ ಪ್ರಕರಣ? ಮೇ 18 ರಂದು ದೆಹಲಿಯ ಮೆಹ್ರೋಲಿಯಲ್ಲಿ ಶ್ರದ್ಧಾ ವಾಕರ್ (26) ಅನ್ನು ಆಕೆಯ ಗೆಳೆಯ ಅಫ್ತಾಬ್ ಹತ್ಯೆ ಮಾಡಿದ್ದ, ಹತ್ಯೆಯ ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಕಾಡಿನಲ್ಲಿ ಎಸೆದಿದ್ದ, ಶ್ರದ್ಧಾ ತಂದೆ ನಾಪತ್ತೆ ದೂರು ದಾಖಲಿಸಿದ ಬಳಿಕ ಕಳೆದ ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ