AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರದ್ಧಾ ವಾಕರ್​ ಆತ್ಮವಾಗಿ ಬಂದು ಅಫ್ತಾಬ್​ನನ್ನು 70 ತುಂಡುಗಳಾಗಿ ಕತ್ತರಿಸಲಿ: ಆರ್​ಜಿವಿ ಖಡಕ್​​ ಮಾತು

ಇಡೀ ದೇಶವೇ ಬೆಚ್ಚಿ ಬೀಳಿಸಿರುವ ದೆಹಲಿಯ ಶ್ರದ್ಧಾ ವಾಕರ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಜಿವಿ ಟ್ವೀಟ್​ ಮಾಡಿದ್ದಾರೆ.

ಶ್ರದ್ಧಾ ವಾಕರ್​ ಆತ್ಮವಾಗಿ ಬಂದು ಅಫ್ತಾಬ್​ನನ್ನು 70 ತುಂಡುಗಳಾಗಿ ಕತ್ತರಿಸಲಿ: ಆರ್​ಜಿವಿ ಖಡಕ್​​ ಮಾತು
ರಾಮ್​ ಗೋಪಾಲ್​ ವರ್ಮಾ
TV9 Web
| Edited By: |

Updated on: Nov 17, 2022 | 8:28 PM

Share

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ತಮ್ಮ ಚಿತ್ರಗಳ ಮೂಲಕ ಸುದ್ದಿ ಮಾಡದೇ ಇದ್ದರೂ, ಇತರೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕವಾಗಿರಬಹುದು ಅಥವಾ ಟೀಕೆ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಾಕಷ್ಟು ಬಾರಿ ಅವರು ತಮ್ಮಗೆ ಸಂಬಂಧವಿಲ್ಲದ ವಿಚಾರಗಳ ಕುರಿತಾಗಿ ವಿವಾದವನ್ನೂ ತಮ್ಮ ಮೈಮೇಲೆ ಎಳೆದುಕೊಂಡಿದ್ದಿದೆ. ತೆಲುಗು, ಕನ್ನಡ ಭಾಷೆಗಳಲ್ಲಿ ಚಿತ್ರಗಳನ್ನು ಮಾಡಿ ಜನಪ್ರಿಯತೆ ಪಡೆದಿದ್ದಾರೆ. ಡಾ. ಶಿವರಾಜ್​ ಕುಮಾರ್​​  ಅಭಿನಯನದ ‘ಕಿಲ್ಲಿಂಗ್ ವೀರಪ್ಪನ್’ ನಿರ್ದೇಶಕನಾಗಿ ಅವರ ಮೊದಲ ಕನ್ನಡ ಚಿತ್ರ. ನಂತರ ಡಾಲಿ ಧನಂಜಯ್ ಅಭಿನಯನದ ‘ಭೈರವ ಗೀತ’ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದರು. ಈಗ ರಾಮ್​ ಗೋಪಾಲ್​ ವರ್ಮಾ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ, ಅದು ಸಿನಿಮಾ ವಿಚಾರಕ್ಕೆ ಅಲ್ಲ . ಇಡೀ ದೇಶವೇ ಬೆಚ್ಚಿ ಬೀಳಿಸಿರುವ ದೆಹಲಿಯ ಶ್ರದ್ಧಾ ವಾಕರ್ (Shraddha Walkar) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಜಿವಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ದೆಹಲಿಯ ಅಪಾರ್ಟ್​ಮೆಂಟ್​​ನಲ್ಲಿ ತನ್ನೊಂದಿಗೆ ವಾಸವಾಗಿದ್ದ ಪಾರ್ಟನರ್​ ಶ್ರದ್ಧಾ ವಾಕರ್ ಎಂಬ 26 ವರ್ಷದ ಯುವತಿಯನ್ನು ಅಫ್ತಾಬ್ ಎಂಬ ಯುವಕ ಕತ್ತು ಹಿಸುಕಿ ಕೊಂದಿದ್ದ. ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ದೆಹಲಿ ಹಾಗೂ ಸುತ್ತಮುತ್ತ ಬಿಸಾಡಿದ್ದ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 6 ತಿಂಗಳ ಹಿಂದೆ ಅಂದರೆ ಕಳೆದ ಮೇನಲ್ಲಿ ನಡೆದ ಕೊಲೆ ವಿಷಯ ಇದೀಗ ಬೆಳಕಿಗೆ ಬಂದಿತ್ತು. ಅಫ್ತಾಬ್​ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡ ಬಳಿಕ ಪೊಲೀಸರು ಶ್ರದ್ಧಾಳ ಶವದ 35 ಭಾಗಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಈಗಾಗಲೇ ಆಕೆಯ ದೇಹದ 13 ಭಾಗಗಳು ಪತ್ತೆಯಾಗಿವೆ.

ಈ ಭೀಭತ್ಸ ಕೃತ್ಯದ ಕುರಿತು ಆರ್​ಜಿವಿ ಟ್ವೀಟ್​ ಮಾಡಿದ್ದು, ‘ಸದ್ಯ ಶ್ರದ್ಧಾ ವಾಕರ್ ಚಿರ ನಿದ್ರೆಯಲ್ಲಿದ್ದಾರೆ. ಅವರು ಆತ್ಮವಾಗಿ ಬಂದು ಅಫ್ತಾಬ್​ನನ್ನು 70 ತುಂಡುಗಳನ್ನಾಗಿ ಮಾಡಲಿ’ ಎಂದಿದ್ದಾರೆ. ‘ಕೇವಲ ಕಾನೂನಿನಿಂದ ಇಂತಹ ಕೊಲೆಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ಸತ್ತವರು ಆತ್ಮವಾಗಿ ಬಂದು ಆರೋಪಿಗಳನ್ನು ಕೊಲೆ ಮಾಡುವ ಮೂಲಕ ಈ ರೀತಿಯ ಪ್ರಕರಣಗಳನ್ನು ತಡೆಯಬಹುದಾಗಿದೆ. ದೇವರೇ ನನ್ನ ಈ ಕೋರಿಕೆಯನ್ನು ನೆರವೇರಿಸು’ ಎಂದು ಆರ್​ಜಿವಿ ಟ್ವಿಟರ್​​​ನಲ್ಲಿ ಬರೆದುಕೊಂಡಿದ್ದಾರೆ.

ಶ್ರದ್ಧಾ ವಾಕರ್ ಕೊಲೆ ಬಗ್ಗೆ ಮಾತನಾಡಿದವರಲ್ಲಿ ರಾಮ್​ ಗೋಪಾಲ್​ ವರ್ಮಾ ಒಬ್ಬರೇ ಅಲ್ಲ. ಸೆಲೆಬ್ರಿಟಿಗಳಾದ ಸ್ವರಾ ಭಾಸ್ಕರ್​ ಕೂಡ ಈ ಹೇಯ ಕೃತ್ಯದ ಕುರಿತಾಗಿ ತಮ್ಮ ಧ್ವನಿ ಎತ್ತಿದ್ದರು. ‘ಈ ಪ್ರಕರಣ ಎಷ್ಟು ಭಯಾನಕ, ದುರಂತ ಮತ್ತು ಭೀಕರ. ಇದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅಫ್ತಾಬ್​ಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಟ್ಚೀಟ್​ ಮಾಡಿದ್ದರು.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.