AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೆ ಮತ್ತೆ ಬಂತು ʼಕಾಮಿಕ್‌ ಕಾನ್‌ ಇಂಡಿಯಾʼ; ನವೆಂಬರ್ 19,20ಕ್ಕೆ ಶೋ

ನವೆಂಬರ್‌ 19 ಹಾಗೂ 20ರಂದು ಬೆಂಗಳೂರಿನ KTPO ಟ್ರೇಡ್‌ ಸೆಂಟರ್‌, ಇಂಡಸ್ಟ್ರಿಯಲ್‌ ಏರಿಯಾ, ವೈಟ್‌ಫೀಲ್ಡ್‌ನಲ್ಲಿ ʼಕಾಮಿಕ್‌ ಕಾನ್‌ ಇಂಡಿಯಾʼ ಉತ್ಸವ ನಡೆಯಲಿದೆ.

ಬೆಂಗಳೂರಿಗೆ ಮತ್ತೆ ಬಂತು ʼಕಾಮಿಕ್‌ ಕಾನ್‌ ಇಂಡಿಯಾʼ; ನವೆಂಬರ್ 19,20ಕ್ಕೆ ಶೋ
ಕಾಮಿಕಾನ್‌ ಇಂಡಿಯಾ
TV9 Web
| Edited By: |

Updated on: Nov 17, 2022 | 6:37 PM

Share

ಪಾಪ್‌ ಸಂಸ್ಕೃತಿ ಪ್ರಿಯರಿಗೆ ಶುಭ ಸುದ್ದಿ ಇದೆ. ಭಾರತದಲ್ಲಿ ದಿನದಿಂದ ದಿನಕ್ಕೆ ಕಾಮಿಕ್‌, ಮಾಂಗಾ, ಅನೈಮ್‌, ಸೂಪರ್‌ ಹೀರೋ ಸಿನಿಮಾ, ಜಾಜ್‌ಗಳಿಗೆ ಅಭಿಮಾನಿಗಳು ಹೆಚ್ಚುತ್ತಲೇ ಇದ್ದಾರೆ. ಇದೀಗ ಭಾರತೀಯರು ಹೆಚ್ಚು ಇಷ್ಟಪಟ್ಟಿರುವ ಅತಿದೊಡ್ಡ ಪಾಪ್‌ ಸಂಸ್ಕೃತಿಯ ಆಚರಣೆಯಾದ ‘ಕಾಮಿಕ್‌ ಕಾನ್‌ ಇಂಡಿಯಾ’ (Comic Con India) ಎರಡು ವರ್ಷಗಳ ಬಳಿಕೆ ಮತ್ತೆ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ನವೆಂಬರ್‌ 19 ಹಾಗೂ 20ರಂದು ಈ ಉತ್ಸವವು KTPO ಟ್ರೇಡ್‌ ಸೆಂಟರ್‌, ಇಂಡಸ್ಟ್ರಿಯಲ್‌ ಏರಿಯಾ, ವೈಟ್‌ಫೀಲ್ಡ್‌ನಲ್ಲಿ ನಡೆಯಲಿದೆ. ಸುಮಾರು 80 ಸಾವಿರ ಚದರ ಅಡಿ ವಿಸ್ತೀರ್ಣವಿರುವ ಆಟದ ಮೈದಾನದಲ್ಲಿ ಈ ಉತ್ಸವ ನಡೆಯಲಿದ್ದು, ನಿತ್ಯವೂ ಟೂರ್ನಮೆಂಟ್‌, ಲಾನ್‌ ಇಸ್ಪೋರ್ಟ್‌ ಫೈನಲ್ಸ್‌ ಹಾಗೂ ಭಾರತದ ಉನ್ನತ ಗೇಮಿಂಗ್‌ ಕಂಟೆಂಟ್‌ ರಚನೆಕಾರರನ್ನು ಅಭಿಮಾನಿಗಳು ಭೇಟಿಯಾಗುವ ಅವಕಾಶ ಕೂಡ ಇದೆ. ಜೊತೆಗೆ ಈ ʼಕಾಮಿಕ್‌ ಕಾನ್‌ ಇಂಡಿಯಾʼ ದಲ್ಲಿ ಕಾರ್ಯಾಗಾರಗಳು, ಗೋಷ್ಠಿಗಳು, ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಈ ಕಾರ್ಯಕ್ರಮವನ್ನು ಮಾರುತಿ ಸುಜುಕಿ ಅರೆನಾ ಬೆಂಗಳೂರು ಕಾಮಿಕ್‌ ಕಾನ್‌ 2022, ಕ್ರಂಚಿ ರೋಲ್‌ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಪ್ರಕಾಶನ ಸಂಸ್ಥೆಗಳು, ವಾರ್‌ ಆ್ಯಂಡ್‌  ಪೀಸ್‌ನ ಸಹ ಸಂಸ್ಥಾಪಕರಾದ ಜೊನಾಥನ್‌ ಕನ್ಜ್‌, ಯಾನಿಕ್‌ ಫಗುಟ್‌, ಬ್ರೌನ್‌ ಪೇಪರ್‌ಬ್ಯಾಗ್‌ನ ರೇಮಂಡ್‌ ಬರ್ಮುಡೆಜ್‌, ಡೆರೆಕ್‌ ಡೋಮ್ನಿಕ್‌ ಡಿಸೋಜಾ, ಗಾರ್ಬೇಜ್‌ ಬಿನ್‌ ಸಂಸ್ಥೆಯ ಸಂಸ್ಥಾಪಕ ಫೈಸಲ್‌, ಹ್ಯಾಪಿ ಫ್ಲಫ್‌ ಕಾಮಿಕ್ಸ್‌, ಆಕ್‌ವರ್ಡ್‌ ಬಕರ್‌ಮ್ಯಾಕ್ಸ್‌, ಇಂಡಸ್‌ವರ್ಸ್‌ ಕಾಮಿಕ್ಸ್‌, ಮೆಟಾ ದೇಸಿ, ರಿವರ್‌ ಕಾಮಿಕ್ಸ್‌, ಹೋಲಿ ಕೌ ಎಂಟರ್‌ಟೇನ್‌ಮೆಂಟ್‌, ಅಮರ್‌ ಚಿತ್ರ ಕಥಾ ಹಾಗೂ ರಾಜ್‌ ಕಾಮಿಕ್ಸ್‌ನ ಕಲಾವಿದರು ಈ ಬಾರಿಯ ʼಕಾಮಿಕ್‌ ಕಾನ್‌ ಇಂಡಿಯಾʼದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಬೆಂಗಳೂರಿಗರು ಅನೇಕ ಮೋಜಿನ ಅನುಭವಕ್ಕೆ ಸಾಕ್ಷಿಯಾಗಲಿದ್ದಾರೆ. ಪಾಪ್‌ ಸಂಸ್ಕೃತಿಯನ್ನು ಪ್ರತಿನಿಧಿಸುವ ಎರಡು ದಿನದ ಈ ಕಾರ್ಯಕ್ರಮದಲ್ಲಿ ಬ್ರಾಂಡ್‌ಗಳಾದ ʼದ ಸೌಲ್ಡ್‌ ಸ್ಟೋರ್‌, ನೆರದ್‌ ಅರೆನಾ, ರೆಡ್‌ ವೂಲ್ಫ್‌, ಮಾಯಾ ಟಾಯ್ಸ್‌, ಮ್ಯಾಕ್‌ಮೆರೈಸ್‌, ದ ಕಾಮಿಕ್‌ ಬುಕ್ ಸ್ಟೋರ್‌, ಫ್ಯಾಟ್‌ ಕ್ಯಾಟ್‌ ಕಲೆಕ್ಟಿಬಲ್ಸ್‌ʼ ಮುಂತಾದ ಅಂಗಡಿಗಳಲ್ಲಿ ಶಾಪಿಂಗ್‌ ಮಾಡುವ ಅವಕಾಶವೂ ಸಿಗಲಿದೆ.

ʼಕಾಮಿಕ್‌ ಕಾನ್‌ ಇಂಡಿಯಾʼ ಸಂಸ್ಥಾಪಕ ಜತಿನ್‌ ವರ್ಮ್‌ ಮಾತನಾಡಿದ್ದು, ‘ಬೆಂಗಳೂರಿನಲ್ಲಿ ನಡೆಯುತ್ತಿರುವ ‘ಕಾಮಿಕ್‌ ಕಾನ್‌’ ಕಾರ್ಯಕ್ರಮಕ್ಕೆ ಅಭಿಮಾನಿಗಳನ್ನು ಸ್ವಾಗತಿಸಲು ಖುಷಿ ಎನಿಸುತ್ತಿದೆ. ಇದು 9ನೇ ಆವೃತ್ತಿಯಾಗಿದೆ. ‘ಕಾಮಿಕ್‌ ಕಾನ್‌’ನ ಈ ನಾವು ಎರಡು ವರ್ಷಗಳ ಕಾಲ ಕಾದೆವು. ಇದೀಗ ಈ ಸಂಭ್ರಮವನ್ನು ಆಚರಿಸಲು ನಾವು ಮತ್ತೆ ಮರಳಿದ್ದು, ಸಾಕಷ್ಟು ಹೊಸ ಸಂಗತಿಗಳು ಹಾಗೂ ಅಚ್ಚರಿಗಳನ್ನು ಅಭಿಮಾನಿಗಳಿಗಾಗಿ ತಂದಿದ್ದೇವೆ. ಹೀಗಾಗಿ ವರ್ಷದ ಅತ್ಯುತ್ತಮ ವಾರಾಂತ್ಯವನ್ನು ಕಳೆಯಲು ನವೆಂಬರ್‌ 19 ಹಾಗೂ 20 ರಂದು ನಮ್ಮೊಂದಿಗೆ ಕೈಜೋಡಿಸಿ’ ಎಂದರು.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್