AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ನೋಡಿ ಸೈಫ್ ಅಲಿ ಖಾನ್ ಅವರ ಪಟೌಡಿ ಪ್ಯಾಲೇಸ್​; ವಿಡಿಯೋ ಹಂಚಿಕೊಂಡ ಹೀರೋ

ಸೈಫ್ ಅಲಿ ಖಾನ್ ಅವರ ಪಟೌಡಿ ಅರಮನೆ ನೋಡಬೇಕು ಎಂಬುದು ಅವರ ಅಭಿಮಾನಿಗಳ ಕನಸಾಗಿತ್ತು. ಈ ಮೊದಲು ಕೆಲ ಫೋಟೋಗಳು ವೈರಲ್ ಆಗಿದ್ದವು. ಈಗ ಪಟೌಡಿ ಪ್ಯಾಲೇಸ್​ನಲ್ಲಿಯೇ ‘ಹೌಸ್ ಆಫ್ ಪಟೌಡಿ’ ಬ್ರ್ಯಾಂಡ್​​ನ ಪ್ರೋಮೋ ಶೂಟ್ ಮಾಡಲಾಗಿದೆ.

ಹೇಗಿದೆ ನೋಡಿ ಸೈಫ್ ಅಲಿ ಖಾನ್ ಅವರ ಪಟೌಡಿ ಪ್ಯಾಲೇಸ್​; ವಿಡಿಯೋ ಹಂಚಿಕೊಂಡ ಹೀರೋ
ಸೈಫ್ ಅಲಿ ಖಾನ್
TV9 Web
| Edited By: |

Updated on: Nov 17, 2022 | 5:05 PM

Share

ನಟ ಸೈಫ್ ಅಲಿ ಖಾನ್ (Saif Ali Khan) ಅವರು ಬಾಲಿವುಡ್​ನ ಬೇಡಿಕೆಯ ನಟ. ಹಲವು ಚಿತ್ರಗಳನ್ನು ಮಾಡಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಸೈಫ್​ ಅಲಿ ಖಾನ್ ಅವರ ತಂದೆ, ಮಾಜಿ ಕ್ರಿಕೆಟರ್​, ನವಾಬ್​ ಮನ್ಸೂರ್ ಅಲಿ (Mansoor Ali Khan) ಖಾನ್ ಅವರು ಹರಿಯಾಣದ ಪಟೌಡಿಯಲ್ಲಿ ಅರಮನೆ ಹೊಂದಿದ್ದರು. ಇದು ಈಗ ಸೈಫ್ ಅಲಿ ಖಾನ್ ಹೆಸರಲ್ಲಿದೆ. ಇದೇ ಹೆಸರಲ್ಲಿ ಈಗ ಫ್ಯಾಷನ್ ಬ್ರ್ಯಾಂಡ್ ಆರಂಭಿಸಿದ್ದಾರೆ ಸೈಫ್ ಅಲಿ ಖಾನ್​. ಈ ಬ್ರ್ಯಾಂಡ್​ನ ಪ್ರಚಾರಕ್ಕಾಗಿ ಹೊಸ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪಟೌಡಿ ಅರಮನೆಯ ಚಿತ್ರಣ ಅನಾವರಣಗೊಂಡಿದೆ.

ಸೈಫ್ ಅಲಿ ಖಾನ್ ಅವರ ಪಟೌಡಿ ಅರಮನೆ ನೋಡಬೇಕು ಎಂಬುದು ಅವರ ಅಭಿಮಾನಿಗಳ ಕನಸಾಗಿತ್ತು. ಈ ಮೊದಲು ಕೆಲ ಫೋಟೋಗಳು ವೈರಲ್ ಆಗಿದ್ದವು. ಈಗ ಪಟೌಡಿ ಪ್ಯಾಲೇಸ್​ನಲ್ಲಿಯೇ ‘ಹೌಸ್ ಆಫ್ ಪಟೌಡಿ’ ಬ್ರ್ಯಾಂಡ್​​ನ ಪ್ರೋಮೋ ಶೂಟ್ ಮಾಡಲಾಗಿದೆ. ಈ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಹಂಚಿಕೊಳ್ಳಲಾಗಿದೆ.

ಪಟೌಡಿ ಅರಮನೆ ಹೊರಗಿನಿಂದ ನೋಡಲು ಎಷ್ಟು ಸುಂದರವೋ ಒಳಗೂ ಅಷ್ಟೇ ಸುಂದರ. ಒಳ ಭಾಗದಲ್ಲಿ ಹಳೆಯ ಕಾಲದಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ನೇತು ಹಾಕಲಾಗಿದೆ. ಮನ್ಸೂರ್ ಅಲಿ ಖಾನ್ ಅವರು ಟೀಂ ಇಂಡಿಯಾದಲ್ಲಿದ್ದಾಗ ತೆಗೆದ ಫೋಟೋಗಳು ಗೋಡೆಯ ಮೇಲಿವೆ. ಹಳೆಯ ಕಾಲದ ವಸ್ತುಗಳು ಇವೆ. ನೆಲಕ್ಕೆ ಚೆಸ್​ಬೋರ್ಡ್​ ಮಾದರಿಯ ಮಾರ್ಬಲ್​ಗಳನ್ನು ಹಾಕಲಾಗಿದೆ. ಈ ವಿಡಿಯೋದಲ್ಲಿ ತಮ್ಮ ಬ್ರ್ಯಾಂಡ್​ನ ವಿವಿಧ ಡ್ರೆಸ್​ಗಳನ್ನು ಹಾಕಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ.

ಸೈಫ್ ಅಲಿ ಖಾನ್ ಅವರು ಮಾಜಿ ಕ್ರಿಕೆಟರ್ ಹಾಗೂ ಪಟೌಡಿಯ ನವಾಬ್ ಆಗಿದ್ದ ಮನ್ಸೂರ್ ಅಲಿ ಖಾನ್ ಅವರ ಮಗ. ಮನ್ಸೂರ್ ಅಲಿ ಖಾನ್​ ಪತ್ನಿ ಶರ್ಮಿಳಾ ಟಾಗೋರ್ ಅವರು ಬಣ್ಣದ ಲೋಕದಲ್ಲಿ ಮಿಂಚಿದ್ದರು.

ಇದನ್ನೂ ಓದಿ: Ibrahim Ali Khan: ಬಾಲಿವುಡ್ ಪ್ರವೇಶಿಸಲು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಸಿದ್ಧ; ಆದರೆ ನಟನಾಗಿ ಅಲ್ಲ

ಸೈಫ್ ಅಲಿ ಖಾನ್ ಅವರು ಇತ್ತೀಚೆಗೆ ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದಾರೆ. ಅವರು ನಟಿಸಿರುವ ‘ಆದಿಪುರಷ್’ ಚಿತ್ರದ ಟ್ರೇಲರ್ ಟ್ರೋಲ್ ಆಗಿತ್ತು. ಈ ಚಿತ್ರದಲ್ಲಿ ಸೈಫ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಅಲ್ಲಾವುದ್ದೀನ್ ಖಿಲ್ಜಿ ರೀತಿಯಲ್ಲಿ ಇದೆ ಎಂದು ಟೀಕಿಸಲಾಗಿತ್ತು. ವಿಎಫ್​ಎಕ್ಸ್ ಮೂಲಕ ಸೈಫ್ ಗಡ್ಡಕ್ಕೆ ಕತ್ತರಿ ಹಾಕಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎಂದು ಇತ್ತೀಚೆಗೆ ವರದಿ ಆಗಿತ್ತು.

ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ