ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಪಂಕಜ್ ತ್ರಿಪಾಟಿ; 2023ಕ್ಕೆ ರಿಲೀಸ್ ಆಗಲಿದೆ ಬಯೋಪಿಕ್

ಈ ಚಿತ್ರದಲ್ಲಿ ಬಿಜೆಪಿಯ ಪ್ರಮುಖ ನಾಯಕ ಹಾಗೂ ದೇಶ ಕಂಡ ಅಪ್ರತಿಮ ನಾಯಕ ಅಟಲ್ ಅವರ ಜೀವನದ ಕಥೆ ಇರಲಿದೆ. ಈ ಚಿತ್ರವನ್ನು ರವಿ ಜಾಧವ್ ಅವರು ನಿರ್ದೇಶನ ಮಾಡಲಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಪಂಕಜ್ ತ್ರಿಪಾಟಿ; 2023ಕ್ಕೆ ರಿಲೀಸ್ ಆಗಲಿದೆ ಬಯೋಪಿಕ್
ಪಂಕಜ್-ಅಟಲ್
Follow us
| Updated By: ರಾಜೇಶ್ ದುಗ್ಗುಮನೆ

Updated on: Nov 18, 2022 | 4:01 PM

ಪಂಕಜ್ ತ್ರಿಪಾಟಿ (Pankaj Tripathi) ಅವರು ಬಾಲಿವುಡ್​ ಅತ್ಯುತ್ತಮ ನಟ. ವೆಬ್ ಸೀರಿಸ್​ಗಳಲ್ಲಿ ನಟಿಸಿಯೂ ಅವರು ಫೇಮಸ್ ಆಗಿದ್ದಾರೆ. ಅವರ ನಟನೆಗೆ ಅನೇಕರು ಫಿದಾ ಆಗಿದ್ದಾರೆ. ಎಂತಹ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ ಪಂಕಜ್. ತುಂಬಾನೇ ಕಷ್ಟದಿಂದ ಬಣ್ಣದ ಲೋಕಕ್ಕೆ ಬಂದ ಅವರು ಈಗ ನೆಲೆ ಕಂಡುಕೊಂಡಿದ್ದಾರೆ. ಈಗ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಬಯೋಪಿಕ್​ನಲ್ಲಿ ನಟಿಸಲಿದ್ದಾರೆ ಎಂಬ ವಿಚಾರ ಖಚಿತವಾಗಿದೆ. ಅಟಲ್​ ಬಿಹಾರಿ ಅವರ ಪಾತ್ರದಲ್ಲಿ ಪಂಕಜ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ಖುಷಿಪಟ್ಟಿದ್ದಾರೆ.

‘ಮೇ ರಹೂ ಯಾ ನಾ ರಹೂ ಯೇ ದೇಶ್ ರೆಹ್ನಾ ಚಾಹಿಯೆ’ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಬಿಜೆಪಿಯ ಪ್ರಮುಖ ನಾಯಕ ಹಾಗೂ ದೇಶ ಕಂಡ ಅಪ್ರತಿಮ ನಾಯಕ ಅಟಲ್ ಅವರ ಜೀವನದ ಕಥೆ ಇರಲಿದೆ. ಈ ಚಿತ್ರವನ್ನು ರವಿ ಜಾಧವ್ ಅವರು ನಿರ್ದೇಶನ ಮಾಡಲಿದ್ದಾರೆ. ಅವರಿಗೆ ಈ ಮೊದಲು ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಬಂದಿದೆ. ಮರಾಠಿ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ

ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರ ಮಾಡುವುದಕ್ಕೆ ಪಂಕಜ್ ತ್ರಿಪಾಟಿಗೆ ಹೆಮ್ಮೆ ಇದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಇಂತಹ ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಗೌರವ. ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಬರಹಗಾರ ಮತ್ತು ಹೆಸರಾಂತ ಕವಿ ಕೂಡ ಆಗಿದ್ದರು. ಅವರ ಪಾತ್ರದಲ್ಲಿ ನಟಿಸುವುದು ನನ್ನಂತಹ ನಟನಿಗೆ ಸಿಕ್ಕಿರುವ ಭಾಗ್ಯವಲ್ಲದೆ ಮತ್ತೇನೂ ಅಲ್ಲ’ ಎಂದಿದ್ದಾರೆ ಪಂಕಜ್.

ಇದನ್ನೂ ಓದಿ: Atal: ಬಯೋಪಿಕ್​ನಲ್ಲಿ ಅಟಲ್​ ಬಿಹಾರಿ ವಾಜಪೇಯಿ ಪಾತ್ರ ಮಾಡಲಿರುವ ಪಂಕಜ್​ ತ್ರಿಪಾಠಿ? ಹೆಚ್ಚಿತು ನಿರೀಕ್ಷೆ

ಚಿತ್ರದ ಶೂಟಿಂಗ್ ಶೀಘ್ರವೇ ಆರಂಭಗೊಳ್ಳಲಿದೆ. ಕ್ರಿಸ್​ಮಸ್ 2023ರ ವೇಳೆಗೆ ಈ ಚಿತ್ರ ರಿಲೀಸ್ ಆಗಲಿದೆ. ವಾಜಪೇಯಿ ಅವರ 99ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ಈ ಸಿನಿಮಾ ರಿಲೀಸ್ ಆಗಲಿದೆ. ಪಂಕಜ್ ತ್ರಿಪಾಟಿ ಅವರು ‘ಮಿರ್ಜಾಪುರ್’ ಸರಣಿಯಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದರು. ಈ ಸರಣಿಯ ಮೂರನೇ ಸೀಸನ್ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.