AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಅನೈತಿಕ ಸಂಬಂಧ; ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ

ತಡರಾತ್ರಿಯಾದರೂ ಅವಳ ಪೋನ್ ಸದ್ದು ಮಾಡುತ್ತಿತ್ತು. ನೋಡಿದ್ರೆ ಮತ್ತೊಬ್ಬನ ಜೊತೆಗೆ ಕನೆಕ್ಟ್ ಆಗಿದ್ದಳು. ಈ ವಿಚಾರ ತಿಳಿದು ಒಂದು ದಿನ ರಾತ್ರಿ ಅವಳ ಬಟ್ಟೆಯನ್ನೆಲ್ಲಾ ಸುಟ್ಟು ಹಾಕಿದ್ದ ಪತಿ. ಜೊತೆಗೆ ತಾನು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆಗ ಬಚಾವ್ ಆದ ಪತಿ ಮುಂದೆ ಪತ್ನಿಯ ಮಾಸ್ಟರ್ ಪ್ಲಾನ್​ಗೆ ಸಿಕ್ಕು ಕೊಲೆಯಾದ. ಇಲ್ಲಿದೆ ನೋಡಿ ಕಿಲಾಡಿ ಪತ್ನಿ ಸ್ಟೋರಿ.

ದಾವಣಗೆರೆ: ಅನೈತಿಕ ಸಂಬಂಧ; ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ
ಅನೈತಿಕ ಸಂಬಂಧ ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ
ಕಿರಣ್ ಹನುಮಂತ್​ ಮಾದಾರ್
|

Updated on: Mar 12, 2023 | 10:27 PM

Share

ದಾವಣಗೆರೆ: ಹೀಗೆ ಕಣ್ಣೀರು ಹಾಕುತ್ತಿರುವ ತಾಯಿ. ಹತ್ತಾರು ದೇವರಿಗೆ ಹರಕೆ ಹೊತ್ತ ಮಗನನ್ನ ಕಳೆದುಕೊಂಡು ಮರುಗುತ್ತಿದ್ದಾಳೆ. ಮೇಲಾಗಿ ಒಮ್ಮೆ ರಸ್ತೆ ಅಪಘಾತ ಇನ್ನೊಮ್ಮೆ ಆತ್ಮಹತ್ಯೆಗೆ ಯತ್ನ. ಎರಡು ಪ್ರಕರಣದಲ್ಲಿ ಸಾವಿನ ಹತ್ತಿರಕ್ಕೆ ಹೋಗಿ ಬಂದಿದ್ದ ಮಗ ಮೂರನೇ ಬಾರಿ ಪ್ರಾಣ ಬಿಟ್ಟಿದ್ದ. ಕೋಳಿ ತೋರಿಸುವುದಾಗಿ ಕರೆದುಕೊಂಡು ಹೋದ ಸ್ನೇಹಿತರು ಇತನನ್ನೆ ಕೋಳಿ ರೀತಿ ಕಟ್ ಮಾಡಿ ಬಿಟ್ಟಿದ್ದರು. ಹೌದು ಕಳೆದ ಫೆಬ್ರುವರಿ 28 ರಂದು ದಾವಣಗೆರೆ ನಗರದ ಕಬ್ಬೂರು ಬಸಪ್ಪ ನಗರದಲ್ಲಿ ಪ್ರಶಾಂತ ಎಂಬ ವ್ಯಕ್ತಿಯನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಬಗ್ಗೆ ಸತತ ತನಿಖೆ ನಡೆಸಿದ ಇಲ್ಲಿನ ಆರ್​ಎಂಸಿ ಠಾಣೆ ಪೊಲೀಸರು ಕೊಲೆ ರಹಸ್ಯ ಭೇದಿಸಿದ್ದಾರೆ. ಕೊಲೆಯ ರೂವಾರಿ ಬೇರೆ ಯಾರು ಅಲ್ಲ ಸ್ವತಃ ಅಗ್ನಿ ಸಾಕ್ಷಿಯಾಗಿ ಮದುವೆಯಾದ ಪತ್ನಿ ಎಂಬ ಸತ್ಯ ಕೊಲೆಯಾದ ಒಂಬತ್ತು ದಿನಗಳ ಬಳಿಕ ಗೊತ್ತಾಗಿದೆ.

ಪತ್ನಿ ರೇಣುಕಾ ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದು ಪತಿಗೆ ಗೊತ್ತಾಗಿತ್ತು. ಈ ವಿಷಯಕ್ಕೆ ಮನೆಯಲ್ಲಿ ಜಗಳ ನಡೆದು ಒಂದು ದಿನ ಪತ್ನಿಯ ಬಟ್ಟೆಗಳಿಗೆ ಬೆಂಕಿ ಇಟ್ಟು ತಾನು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಸ್ಥಳೀಯರು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿದ್ದರಿಂದ ಬಚಾವ್ ಆಗಿದ್ದ. ಹೀಗೆ ಬಜಾವ್ ಆದ ಪ್ರಶಾಂತ್​ ಫೆಬ್ರುವರಿ 28 ರಂದು ಆತನ ಸ್ನೇಹಿತ ರಾಕೇಶ್ ಎಂಬಾತ ಬಂದು ಒಂದು ಕಡೆ ಕೋಳಿ ಚೆನ್ನಾಗಿವೆ ಎಂದು ಹೇಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದ.

ಇದನ್ನೂ ಓದಿ:15 ಕೋಟಿ ಆಸೆಗೆ ನಟ ಸತೀಶ್ ಕೌಶಿಕ್ ಕೊಲೆ, ಉದ್ಯಮಿ ಪತ್ನಿ ಆರೋಪ, ದೆಹಲಿ ಪೊಲೀಸರಿಂದ ತನಿಖೆ

ಮನೆಯಲ್ಲಿನ ಪ್ರಶಾಂತ್​ ತಾಯಿಗೂ ಸಂಶಯ ಬಂದಿತ್ತು. ರಾತ್ರಿ ಒಂದು ಎರಡು ಗಂಟೆಗೆ ಮೊಬೈಲ್ ಸದ್ದು ಮಾಡುತ್ತಿತ್ತು. ಆದ್ರೆ ಎನು ಹೇಳಿರಲಿಲ್ಲ. ಈ ವಿಚಾರ ಪತಿ ಪ್ರಶಾಂತ್​ಗೆ ಗೊತ್ತಿತ್ತು. ಹೀಗೆ ಹಲವಾರು ಸಲ ಅವಳಿಗೆ ಬುದ್ದಿ ಮಾತು ಹೇಳಿದ್ದ. ಮೇಲಾಗಿ ಪ್ರಶಾಂತ್​ ತಾಯಿ ಸಂಬಂಧದಲ್ಲಿ ಬರುವ ಪತ್ನಿ ರೇಣುಕಾ ದಾವಣಗೆರೆ ತಾಲೂಕಿನ ಹದಡಿ ನಿವಾಸಿ. ಜೊತೆಗೆ ಮೂರು ವರ್ಷದ ಗಂಡು ಮಗ ಕೂಡ ಇದ್ದಾನೆ. ಮದುವೆಯಾಗಿ ನಾಲ್ಕು ವರ್ಷವಾಗಿದೆ. ಪ್ರಶಾಂತ್​ನದ್ದು ಟೈಲ್ಸ್ ಕೆಲ್ಸ. ಕೈ ತುಂಬ ದುಡ್ಡು, ಆದ್ರೆ ಮನೆಯಲ್ಲಿ ನೆಮ್ಮದಿಯಿಲ್ಲ. ಪತ್ನಿ ಪರ ಪರುಷನ ಸಂಘ ಮಾಡಿದ್ದಳು. ವಿಚಿತ್ರ ಎಂದರೆ ಕೊಲೆಯಾದ ದಿನ ತನಗೆ ಎನು ಗೊತ್ತಿಲ್ಲ ಎಂದು ನಾಟಕವಾಡಿದ್ದಳು. ಇದೀಗ ಇದನ್ನ ಪತ್ತೆ ಹಚ್ಚಿದ ಪೊಲೀಸರು ಪ್ರಶಾಂತ್​ ಪತ್ನಿ ರೇಣುಕಾ ಹಾಗೂ ಅವಳ ಪ್ರೀಯಕರ ರಾಕೇಶ್​ನನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಮನೆಯಲ್ಲಿ ಮಗು ಅತ್ತೆ ಮಾವ ಬಾವ ನಾದನಿ ಹೀಗೆ ತುಂಬು ಸಂಸಾರ. ಇದು ಬೇಡ ಎಂದು ಕೆಲ ದಿನ ಪ್ರತ್ಯೇಕ ಮನೆ ಕೂಡ ಮಾಡಿದ್ದಳು ಆರೋಪಿ ರೇಣುಕಾ. ಇಂತಹವಳನ್ನ ನಂಬಿ, ಮತ್ತೆ ತನ್ನ ಮನೆ ಸೇರಿದ್ದ ಪತಿ ಪ್ರಶಾಂತ್​. ಆದ್ರೆ ಅವಳು ತನ್ನ ಪ್ರಿಯಕರನ ಜೊತೆ ಸೇರಿ ತನ್ನನ್ನೆ ಮುಗಿಸುತ್ತಾಳೆ ಎಂದು ಪ್ರಶಾಂತ್​ ಅಂದು ಕೊಂಡಿರಲಿಲ್ಲ. ಪುತ್ರನನ್ನ ಕಳೆದುಕೊಂಡ ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಜೊತೆಗೆ ಮೂರು ವರ್ಷದ ಮೊಮ್ಮಗೂ ಅನಾಥವಾಗಿದೆ. ಪತಿ ಸ್ಮಶಾನಕ್ಕೆ ಹೋದರೆ ಪತ್ನಿ ಕೃಷ್ಣ ಜನ್ಮ ಸ್ಥಳಕ್ಕೆ ಹೋಗಿದ್ದು ವಿಧಿಯಾಟ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​