AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ಕೋಟಿ ಆಸೆಗೆ ನಟ ಸತೀಶ್ ಕೌಶಿಕ್ ಕೊಲೆ, ಉದ್ಯಮಿ ಪತ್ನಿ ಆರೋಪ, ದೆಹಲಿ ಪೊಲೀಸರಿಂದ ತನಿಖೆ

ಮೂರು ದಿನಗಳ ಹಿಂದೆ ನಿಧನ ಹೊಂದಿದ ಬಾಲಿವುಡ್ ಹಿರಿಯ ನಟ ಸತೀಶ್ ಕೌಶಿಕ್​ರ ನಿಧನದ ಬಗ್ಗೆ ಅನುಮಾನಗಳೆದ್ದಿದೆ. ದೆಹಲಿಯ ಉದ್ಯಮಿಯೊಬ್ಬರ ಪತ್ನಿ, ನನ್ನ ಪತಿಯೇ ಸತೀಶ್ ಕೌಶಿಕ್ ಅವರನ್ನು ಕೊಂದಿದ್ದಾರೆಂದು ದೂರು ನೀಡಿದ್ದಾರೆ.

15 ಕೋಟಿ ಆಸೆಗೆ ನಟ ಸತೀಶ್ ಕೌಶಿಕ್ ಕೊಲೆ, ಉದ್ಯಮಿ ಪತ್ನಿ ಆರೋಪ, ದೆಹಲಿ ಪೊಲೀಸರಿಂದ ತನಿಖೆ
ಸತೀಶ್ ಕೌಶಿಕ್-ಸಾನ್ವಿ ಮಾಲು-ವಿಕಾಸ್ ಮಾಲು
ಮಂಜುನಾಥ ಸಿ.
|

Updated on: Mar 12, 2023 | 3:35 PM

Share

ಮೂರು ದಿನಗಳ ಹಿಂದಷ್ಟೆ (ಮಾರ್ಚ್ 09) ಬಾಲಿವುಡ್​ನ (Bollywood) ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಸತೀಶ್ ಕೌಶಿಕ್ (Satish Kaushik) ನಿಧನ ಹೊಂದಿದ್ದರು. ಹೃದಯಾಘಾತ ಇವರ ನಿಧನಕ್ಕೆ ಕಾರಣ ಎನ್ನಲಾಗಿತ್ತು. ಆದರೆ ದೆಹಲಿಯ ಉದ್ಯಮಿಯೊಬ್ಬರ ಪತ್ನಿ ಇದೀಗ ಸತೀಶ್ ಕೌಶಿಕ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ನನ್ನ ಪತಿಯೇ ಸತೀಶ್​ಗೆ ವಿಷ ಉಣಿಸಿ ಕೊಂದಿದ್ದಾರೆ ಎಂದಿದ್ದಾರೆ.

ನಿಧನಕ್ಕೂ ಮುನ್ನ ಸತೀಶ್, ದೆಹಲಿಯ ಜನಪ್ರಿಯ ಉದ್ಯಮಿ ವಿಕಾಸ್ ಮಾಲು ಅವರ ಫಾರ್ಮ್ ಹೌಸ್​ನಲ್ಲಿ ನಡೆದ ಹೋಳಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಇದೀಗ ವಿಕಾಸ್ ಮಾಲು ಅವರ ಎರಡನೇ ಪತ್ನಿ ಸಾನ್ವಿ ಮಾಲು ಆರೋಪ ಮಾಡಿದ್ದು, ಹದಿನೈದು ಕೋಟಿ ಹಣದ ಆಸೆಗೆ ಸತೀಶ್ ಕೌಶಿಕ್​ಗೆ ವಿಕಾಸ್ ಮಾಲು ವಿಷ ಉಣಿಸಿದ್ದಾರೆ ಎಂದಿದ್ದಾರೆ. ಮಾತ್ರವಲ್ಲ ಈ ಕುರಿತು ದೆಹಲಿ ಪೊಲೀಸರಿಗೆ ಲಿಖಿತ ದೂರು ಸಹ ಸಲ್ಲಿಸಿದ್ದಾರೆ.

ದೂರಿನ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ವಿಕಾಸ್ ಮಾಲು ಪತ್ನಿ ಸಾನ್ವಿ, ”ಸತೀಶ್ ಕೌಶಿಕ್, ಫಾರ್ಮ್​ಹೌಸ್​ಗೆ ಬಂದ ಕೆಲ ಹೊತ್ತಿನಲ್ಲಿಯೇ ಅವರ ಆರೋಗ್ಯದಲ್ಲಿ ವ್ಯತ್ಯ ಕಂಡು ಬಂದಿತು. ಅಲ್ಲದೆ ಫಾರ್ಮ್ ಹೌಸ್​ನಲ್ಲಿ ಕೆಲವು ಔಷಧಿಗಳು ಸಹ ನನ್ನ ಕಣ್ಣಿಗೆ ಬಿದ್ದವು ಆಗಲೇ ನನಗೆ ಅನುಮಾನ ಬಂತು. ತಮ್ಮ ಪತಿ ವಿಕಾಸ್ ಹಾಗೂ ಸತೀಶ್ ಕೌಶಿಕ್​ ನಡುವೆ ಹಣದ ವ್ಯವಹಾರವಿತ್ತು ಇದೇ ಕಾರಣಕ್ಕೆ ನನ್ನ ಪತಿಯೇ ಸತೀಶ್ ಅವರನ್ನು ಕೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಹಿಂದೆ ಉದ್ಯಮಿ ವಿಕಾಸ್ ಮಾಲು, ಸತೀಶ್ ಕೌಶಿಕ್ ಬಳಿ 15 ಕೋಟಿ ಸಾಲ ಪಡೆದುಕೊಂಡಿದ್ದರು. ಆದರೆ ಕೋವಿಡ್ ಸಮಯದಲ್ಲಾದ ನಷ್ಟದಿಂದಾಗಿ ಆ ಹಣ ಮುಳುಗಿ ಹೋಯಿತು. ಹಣ ಮರಳಿಸುವಂತೆ ನಾನೂ ಸಹ ವಿಕಾಸ್​ಗೆ ಪದೇ-ಪದೇ ಹೇಳುತ್ತಿದ್ದೆ ಈ ಬಗ್ಗೆ ಜಗಳ ಸಹ ಮಾಡಿದ್ದೆ ಆದರೆ ವಿಕಾಸ್ ಹಣ ಮರಳಿ ನೀಡಬೇಕಾಗುತ್ತದೆ ಎಂದು ಸತೀಶ್ ಕೌಶಿಕ್ ಅನ್ನು ಕೊಂದಿದ್ದಾರೆ ಎಂದಿದ್ದಾರೆ ಸಾನ್ವಿ ಮಾಲು.

ಎರಡನೇ ಪತ್ನಿ ಸಾನ್ವಿ ಹೇಳಿಕೆ ಹೊರ ಬೀಳುತ್ತಲೇ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಸಮೇತ ಪೋಸ್ಟ್ ಒಂದನ್ನು ಉದ್ಯಮಿ ವಿಕಾಸ್ ಹಂಚಿಕೊಂಡಿದ್ದು, ಸತೀಶ್ ಅವರು ಕಳೆದ 30 ವರ್ಷದಿಂದಲೂ ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ. ಆದರೆ ಅವರು ಹೋದ ಕೆಲವೇ ಗಂಟೆಗಳಲ್ಲಿ ನನ್ನ ಹೆಸರನ್ನು ಕೆಟ್ಟ ರೀತಿಯಲ್ಲಿ ಕೆಲವರು ಬಳಸುತ್ತಿದ್ದಾರೆ ಎಂದಿದ್ದಾರೆ.

”ಘಟನೆ ಬಗ್ಗೆ ನಾನು ಮೌನ ಮುರಿಯಬೇಕಾಗಿದೆ. ಯಾವುದೇ ದುರಂತ ಅನಿರೀಕ್ಷಿತವಾಗಿ ಆಗುತ್ತದೆ ದುರಂತವನ್ನು ಯಾರು ನಿಯಂತ್ರಿಸಲು ಆಗುವುದಿಲ್ಲ. ಇಂಥಹಾ ಸಮಯದಲ್ಲಿ ಮಾಧ್ಯಮಗಳು ಎಲ್ಲರ ಭಾವನೆಗಳಿಗೂ ಗೌರವ ನೀಡುವ ಕಾರ್ಯ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ” ಎಂದು ವಿಕಾಸ್ ಬರೆದುಕೊಂಡಿದ್ದಾರೆ. ವಿಕಾಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಸತೀಶ್ ಕೌಶಿಕ್ ಬಿಂದಾಸ್ ಆಗಿ ಡ್ಯಾನ್ಸ್ ಮಾಡುತ್ತಿದ್ದಾರೆ. ಅವರು ಸಾಯುವ ಕೆಲವೇ ಗಂಟೆಗಳ ಮುಂಚಿನ ವಿಡಿಯೋ ಇದಾಗಿತ್ತು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್