AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ವರ್ಷ ಹಿಂದಿನ ಬಾಲಿವುಡ್ ಸಿನಿಮಾ ಜಪಾನ್​ನಲ್ಲಿ ಈಗ ಹೌಸ್​ಫುಲ್

ಒಂಬತ್ತು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಬಾಲಿವುಡ್ ಸಿನಿಮಾ ಈಗ ಜಪಾನ್​ನಲ್ಲಿ ಮರು ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

9 ವರ್ಷ ಹಿಂದಿನ ಬಾಲಿವುಡ್ ಸಿನಿಮಾ ಜಪಾನ್​ನಲ್ಲಿ ಈಗ ಹೌಸ್​ಫುಲ್
ಬ್ಯಾಂಗ್-ಬ್ಯಾಂಗ್
ಮಂಜುನಾಥ ಸಿ.
|

Updated on: Mar 10, 2023 | 10:40 PM

Share

ಮೊದಲ ಬಿಡುಗಡೆಯಲ್ಲಿ ಫ್ಲಾಪ್ ಆಗಿ ಮರು ಬಿಡುಗಡೆಯಲ್ಲಿ ಹಿಟ್ ಆದ ಸಿನಿಮಾಗಳು ಹಲವಿವೆ. ಈಗ ತೆಲುಗಿನಲ್ಲಂತೂ ಒಂದರ ಹಿಂದೆ ಒಂದು ಹಳೆಯ ಹಿಟ್ ಸಿನಿಮಾಗಳು ಮರು ಬಿಡುಗಡೆ ಆಗುತ್ತಿವೆ. ಮತ್ತೆ ಹಣ ಬಾಚುತ್ತಿವೆ. ಆದರೆ ಬಾಲಿವುಡ್​ನಲ್ಲಿ (Bollywood) ಒಂಬತ್ತು ವರ್ಷಗಳ ಹಿಂದೆ ಬಿಡುಗಡೆ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿದ್ದ ಸಿನಿಮಾವೊಂದು ಜಪಾನ್​ನಲ್ಲಿ (Japan) ಮರು ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಗಳಿಸಿಕೊಳ್ಳುತ್ತಿದೆ.

ಹೃತಿಕ್ ರೋಷನ್ ನಟಿಸಿ, ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದ ಒಂಬತ್ತು ವರ್ಷ ಹಳೆಯ ಸಿನಿಮಾ ಬ್ಯಾಂಗ್ ಬ್ಯಾಂಗ್ ಇದೀಗ ಜಪಾನ್​ನಲ್ಲಿ ಮರು ಬಿಡುಗಡೆ ಆಗಿದ್ದು, ಜಪಾನಿ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾದ ಹಾಡು, ಡ್ಯಾನ್ಸ್ ಫೈಟ್​ಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಹೃತಿಕ್ ಹಾಗೂ ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿದ್ದ ಬ್ಯಾಂಗ್ ಬ್ಯಾಂಗ್ ಸಿನಿಮಾ 2014 ರ ಗಾಂಧಿ ಜಯಂತಿಯಂತು ಬಿಡುಗಡೆ ಆಗಿತ್ತು. ಸುಮಾರು 150 ಕೋಟಿ ಬಜೆಟ್​ನ ಈ ಸಿನಿಮಾ ಆಗ ವಿಶ್ವದಾದ್ಯಂತ 330 ಕೋಟಿ ಗಳಿಸಿತ್ತು. ಹಾಕಿದ್ದ ಬಜೆಟ್​ಗೆ ದುಪ್ಪಟ್ಟು ಲಾಭ ಗಳಿಸಿಕೊಂಡಿತ್ತು. ಇದೀಗ ಈ ಸಿನಿಮಾವು ಜಪಾನ್​ನಲ್ಲಿ ಬಿಡುಗಡೆ ಆಗಿದ್ದು ಅಲ್ಲಿನ ಪ್ರೇಕ್ಷಕರಿಗೆ ಸಿನಿಮಾ ಬಹುವಾಗಿ ಇಷ್ಟವಾಗಿದೆ. ಜಪಾನ್​ನಲ್ಲಿ ಸಿನಿಮಾ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳು ತುಂಬಿದ್ದು, ಪ್ರೇಕ್ಷಕರು ಹೃತಿಕ್ ರೋಷನ್ ರ ಮಾಸ್ಕ್​ಗಳನ್ನು ಧರಿಸಿ ಚಿತ್ರಮಂದಿರಕ್ಕೆ ಧಾವಿಸಿ ತಮ್ಮ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಹೃತಿಕ್ ಚಿತ್ರವುಳ್ಳ ಮುಖವಾಡಗಳನ್ನು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಜಪಾನ್​ನಲ್ಲಿ ಭಾರತೀಯ ಸಿನಿಮಾಕ್ಕೆ ಬಹಳ ಒಳ್ಳೆಯ ಮಾರುಕಟ್ಟೆ ಇದೆ. ಆರಂಭದಿಂದಲೂ ಭಾರತದ ಸಿನಿಮಾಗಳು ಇಲ್ಲಿ ಉತ್ತಮ ಪ್ರದರ್ಶನ ಕಾಣುತ್ತಾ ಬಂದಿವೆ. ಆವಾರ, ಮೇರಾ ನಾಮ್ ಜೋಕರ್ ಸಿನಿಮಾಗಳು ಸಹ ಇಲ್ಲಿ ದೊಡ್ಡ ಹಿಟ್ ಆಗಿದ್ದವು. ಸುದೀಪ್ ನಟನೆಯ ಈಗ ಸೂಪರ್ ಹಿಟ್ ಆಗಿತ್ತು. ರಜನೀಕಾಂತ್​ರ ಮುತ್ತು ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಇತ್ತೀಚೆಗೆ ಆರ್​ಆರ್​ಆರ್​ ಸಿನಿಮಾ ಸಹ ಜಪಾನ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು.

ಹೃತಿಕ್ ನಟನೆಯ ಬ್ಯಾಂಗ್ ಬ್ಯಾಂಗ್ ಸಿನಿಮಾವು ಹಾಲಿವುಡ್​ನ ನೈಟ್ ಆಂಡ್ ಡೇ ಸಿನಿಮಾದ ರೀಮೇಕ್. ಮೂಲ ಸಿನಿಮಾದಲ್ಲಿ ಮಿಷನ್ ಇಂಪಾಸಿಬಲ್ ಖ್ಯಾತಿಯ ಟಾಮ್ ಕ್ರೂಸ್ ನಾಯಕ ಹಾಗೂ ಚಾರ್ಲ್ಸ್ ಏಂಜಲ್ಸ್ ಖ್ಯಾತಿಯ ಕ್ಯಾಮೆರಾನ್ ಡೈಜ್ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್