ಕಲಬುರಗಿ: ಕಂಠಪೂರ್ತಿ ಕುಡಿದು ರಾತ್ರಿ ಮನೆಗೆ ಹೊರಟವನು ಬೀದಿಯಲ್ಲಿ ಶವವಾಗಿ ಬಿದ್ದಿದ್ದ, ಕೊಲೆ ಎಂದು ಆರೋಪಿಸಿದ ತಾಯಿ

ಆ ವ್ಯಕ್ತಿ ಕಟಿಂಗ್ ಶಾಪ್ ಹೊಂದಿದ್ದ. ಉತ್ತಮ ದುಡಿಮೆ ಇತ್ತು. ಪತ್ನಿ, ಮಕ್ಕಳು ಕೂಡ ಇದ್ದರು. ಆದರೆ ಆತನಿಗೆ ಕುಡಿಯೋ ಚಟ ಕಾಡುತ್ತಿತ್ತು. ಹೀಗಾಗಿ ದಿನವೂ ಕಂಠಪೂರ್ತಿ ಕುಡಿಯದೇ ಮನೆಗೆ ಹೋಗುತ್ತಿರಲಿಲ್ಲ. ಹೀಗೆ ಪ್ರತಿನಿತ್ಯ ಕುಡಿಯೋದನ್ನೇ ತನ್ನ ಕೆಲಸವಾಗಿ ಮಾಡಿಕೊಂಡಿದ್ದ ವ್ಯಕ್ತಿ ಇದೀಗ ಶವವಾಗಿ ಪತ್ತೆಯಾಗಿದ್ದಾನೆ.

ಕಲಬುರಗಿ: ಕಂಠಪೂರ್ತಿ ಕುಡಿದು ರಾತ್ರಿ ಮನೆಗೆ ಹೊರಟವನು ಬೀದಿಯಲ್ಲಿ ಶವವಾಗಿ ಬಿದ್ದಿದ್ದ, ಕೊಲೆ ಎಂದು ಆರೋಪಿಸಿದ ತಾಯಿ
ಎಸ್.​ಪಿ, ಮೃತ ಚನ್ನಬಸಪ್ಪನ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 13, 2023 | 9:16 AM

ಕಲಬುರಗಿ: ಮಾರ್ಚ್ 3 ರಂದು ಮುಂಜಾನೆ ನಗರದ ಡಬಾರಾಬಾದ್​ನಲ್ಲಿ ಶಿವಲಿಂಗಪ್ಪ ಎನ್ನುವವರ ಮನೆ ಮುಂದೆ ವ್ಯಕ್ತಿಯೋರ್ವನ ಶವ ಪತ್ತೆಯಾಗಿತ್ತು. ವ್ಯಕ್ತಿಯ ಮೈಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ, ಮಾರಣಾಂತಿಕ ಗಾಯಗಳು ಇರಲಿಲ್ಲ. ಆದರೆ ಮನೆ ಮುಂದಿನ ಜಾಗದಲ್ಲಿ ವ್ಯಕ್ತಿ ಪ್ರಾಣ ಬಿಟ್ಟಿದ್ದ. ಈ ಬಗ್ಗೆ ಸ್ಥಳೀಯರು ಕಲಬುರಗಿ ಗ್ರಾಮೀಣ ಠಾಣೆಯ ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಆಗ ಮೃತ ವ್ಯಕ್ತಿ ಯಾರು, ಇದು ಕೊಲೆಯಾ ಅಥವಾ ಸಹಜ ಸಾವಾ ಅನ್ನೋ ಅನುಮಾನಗಳು ಕೂಡಾ ಮೂಡಿದ್ದವು. ಹೀಗಾಗಿ ಮೊದಲು ಮೃತ ವ್ಯಕ್ತಿಯ ಗುರುತು ಪತ್ತೆ ಮಾಡುವ ಕೆಲಸವನ್ನು ಪೊಲೀಸರು ಆರಂಭಿಸಿದ್ದರು. ಆಗ ಪೊಲೀಸರಿಗೆ ಗೊತ್ತಾಗಿದ್ದು ಮೃತ ವ್ಯಕ್ತಿ ಮೂವತ್ತೊಂದು ವರ್ಷದ ಚನ್ನಬಸಪ್ಪ ಎಂದು. ಹೌದು ನಗರದ ಬಿದ್ದಾಪುರ ಕಾಲೋನಿ ನಿವಾಸಿಯಾಗಿದ್ದ ಚನ್ನಬಸಪ್ಪ ಶವವಾಗಿ ಪತ್ತೆಯಾಗಿದ್ದ.

ಚನ್ನಬಸಪ್ಪ ಕಳೆದ ಕೆಲ ವರ್ಷಗಳಿಂದ ಪತ್ನಿ ಮನೆಯಲ್ಲಿಯೇ ಇದ್ದ. ಕಟಿಂಗ್ ಮಾಡುವ ಕೆಲಸ ಮಾಡುತ್ತಿದ್ದ ಇತ ಈ ಮೊದಲು ಬೇರೆಯವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನಂತೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಉಪಜೀವನಕ್ಕಾಗಿ ಡಬರಬಾದ್ ಪ್ರದೇಶದಲ್ಲಿ ಸ್ವಂತ ಕಟಿಂಗ್ ಶಾಪ್ ಹಾಕಿಕೊಂಡಿದ್ದ. ಆದರೆ ಅಂಗಡಿಯಲ್ಲಿ ಸರಿಯಾಗಿ ಕೆಲಸ ಮಾಡದೇ ನಿತ್ಯವೂ ಕಂಠಪೂರ್ತಿ ಕುಡಿದು ಮನೆಗೆ ಹೋಗುತ್ತಿದ್ದನಂತೆ. ಪ್ರತಿ ದಿನ ಕುಡಿಯುವ ಮೂಲಕ ಚನ್ನಬಸಪ್ಪ ದುಶ್ಚಟದ ದಾಸನಾಗಿದ್ದ. ನಿನ್ನೆ ರಾತ್ರಿ ಎಂದಿನಂತೆ ಕುಡಿದು ಮನೆಗೆ ಹೋಗಿದ್ದ ಆದರೆ ಮುಂಜಾನೆ ಅನ್ನುವಷ್ಟರಲ್ಲಿ ಡಬರಬಾದ್ ಜನವಸತಿ ಪ್ರದೇಶದ ಮನೆಯೊಂದರ ಮುಂಬಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ:ಶಿವಮೊಗ್ಗ: ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಯುವಕ ಅನುಮಾನಸ್ಪದ ರೀತಿಯಲ್ಲಿ ಸಾವು

ಮುಂಜಾನೆ ವಿಷಯ ತಿಳಿದು ಸ್ಥಳಕ್ಕೆ ಚನ್ನಬಸಪ್ಪ ತಾಯಿ ಬಂದು ನೋಡಿದಾಗ ತೊಡೆಯ ಬಾಗದಲ್ಲಿ ಕಬ್ಬಿಣದ ರಾಡ್​ನಿಂದ ಹೊಡೆದಿರುವ ಗಾಯಗಳು ಪತ್ತೆಯಾಗಿವೆ. ಈ ಕಾರಣಕ್ಕೆ ತನ್ನ ಮಗನದ್ದು ಸಹಜ ಸಾವಲ್ಲ. ಕೊಲೆಯಾಗಿದೆ ಎಂದು ಆರೋಪಿಸುತ್ತಿದ್ದಾಳೆ. ಆತನ ತಾಯಿ ಹೇಳೋ ಪ್ರಕಾರ ಮಗನಿಗೆ ಕುಡಿಯೋ ಚಟವಿತ್ತು‌. ಕುಡಿದು ಹಣವನ್ನೆಲ್ಲಾ ಹಾಳು ಮಾಡ್ತಿದಿಯಾ ಎಂದು ಚನ್ನಬಸಪ್ಪನ ಪತ್ನಿಯ ಸಹೋದರ ಅನೀಲ್ ಮತ್ತು ಈ ಹಿಂದೆ ಚನ್ನಬಸಪ್ಪ ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕನಾಗಿದ್ದ ಸುಭಾಷ್ ಅಂಗಡಿಗೆ ಬೀಗ ಹಾಕಿ ಚನ್ನಬಸಪ್ಪನನ್ನು ಹೊರಹಾಕಿದ್ದರಂತೆ. ಇದೀಗ ಅವರೇ ಇಬ್ಬರು ಸೇರಿಕೊಂಡು ಮಗನನ್ನ ಕೊಲೆ ಮಾಡಿದ್ದಾರೆಂದು ತಾಯಿ ಶಿವಮ್ಮ ಆರೋಪಿಸುತ್ತಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಸಬ್ ಅರ್ಬನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕವೇ ಸತ್ಯಾಂಶ ಹೊರಬರಬೇಕಿದೆ.

ಸದ್ಯ ಚನ್ನಬಸಪ್ಪನ ಸಾವಿನ ಬಗ್ಗೆ ಅನೇಕ ಅನುಮಾನಗಳು ಇರೋದರಿಂದ ಪೊಲೀಸರು ಮರಣೋತ್ತರ ವರದಿಗಾಗಿ ಕಾಯುತಿದ್ದಾರೆ. ಮರಣೋತ್ತರ ವರದಿಯಲ್ಲಿ ಹಲ್ಲೆಯಿಂದಲೇ ಸಾವು ಆಗಿದೆ ಅನ್ನೋದು ಸಾಭಿತಾದ್ರೆ, ಆರೋಪಿಗಳನ್ನು ಬಂಧಿಸೋದಾಗಿ ಹೇಳುತ್ತಿದ್ದಾರೆ. ಆದರೆ ದುಡಿಯಲಿಕ್ಕೆ ಕೆಲಸವಿದ್ರು ಕೂಡ ಅದನ್ನು ಸರಿಯಾಗಿ ಮಾಡೋದು ಬಿಟ್ಟು, ಕುಡಿಯೋದೆ ವೃತ್ತಿಯನ್ನಾಗಿ ಮಾಡಿಕೊಂಡು ವ್ಯಕ್ತಿ ಇದೀಗ ಕೊಲೆಯಾಗಿದ್ದು ದುರಂತವೇ ಸರಿ.

ವರದಿ: ಸಂಜಯ್ ಟಿವಿ9 ಕಲಬುರಗಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:15 am, Mon, 13 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ