ಬೆಂಗಳೂರು: ಅನುಕೂಲ ಎಲ್ಲಿರುತ್ತೋ ಅಲ್ಲಿ ಅನಾನುಕೂಲ ಸಹ ಇದ್ದೇ ಇರುತ್ತೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಎಲ್ಲೇ ಮೀರಿ ಹೋಗುತ್ತಿವೆ. ಇನ್‌ಸ್ಟಾಗ್ರಾಂನಲ್ಲಿ ಬಾಲಕಿಗೆ ಅಶ್ಲೀಲ ಆಡಿಯೋ ಕಳಿಸ್ತಿದ್ದ ವ್ಯಕ್ತಿ ವಿರುದ್ಧ ಬಾಲಕಿಯ ಪೋಷಕರು ಇ-ಮೇಲ್ ಮೂಲಕ ದೂರು ಸಲ್ಲಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಘಟನೆ ವಿವರ:
ಆನ್‌ಲೈನ್ ಕ್ಲಾಸ್ ವೇಳೆ ಇನ್‌ಸ್ಟಾಗ್ರಾಂನಲ್ಲಿ ಖಾತೆ ಓಪನ್ ಮಾಡಿದ್ದ 13 ವರ್ಷದ ಸಂತ್ರಸ್ತೆಗೆ ಅಪರಿಚಿತ ವ್ಯಕ್ತಿಯ ಪರಿಚಯವಾಗುತ್ತೆ. ಇನ್‌ಸ್ಟಾಗ್ರಾಂನಲ್ಲಿ ಬಾಲಕಿಗೆ ಪ್ರತಿ ದಿನ ಚಾಟಿಂಗ್ ಮಾಡುತ್ತ ಆ ಅಪರಿಚಿತ ವ್ಯಕ್ತಿ ಆಪ್ತನಾಗಿದ್ದ. ಹೀಗೆ ಪರಿಚಯ ಮಾಡಿಕೊಂಡು ತನ್ನ ಅಶ್ಲೀಲ ಫೋಟೋ ಹಾಗೂ ವಿಡಿಯೋ ಕಳಿಸಿ ವಿಕೃತಿ ಮೆರೆಯಲು ಶುರು ಮಾಡಿದ್ದ.
ಅಷ್ಟಕ್ಕೆ ಸುಮ್ಮನಾಗದೆ ಬಾಲಕಿಗೂ ಅಶ್ಲೀಲ ಫೋಟೋ ಕಳಿಸುವಂತೆ ಒತ್ತಡ ಹಾಕಿದ್ದಾನೆ. ಇದರಿಂದ ಹೆದರಿದ ಬಾಲಕಿ ವ್ಯಕ್ತಿ ಕಳಿಸಿದ್ದ ಅಶ್ಲೀಲ ಫೋಟೋ ಡಿಲೀಟ್ ಮಾಡಿದ್ದಳು. ಇದಾದ ಬಳಿಕವೂ ನಿರಂತರವಾಗಿ ಆ ಅಪರಿಚಿತ ವ್ಯಕ್ತಿ ಸಂದೇಶ ಕಳುಹಿಸಿ ನಗ್ನ ಫೋಟೋ ಕಳಿಸುವಂತೆ ಬೆದರಿಕೆ ಹಾಕಿದ್ದಾನೆ.
ಬಳಿಕ ಬಾಲಕಿ ಆರೋಪಿಯ ಇನ್‌ಸ್ಟಾಗ್ರಾಂ ಖಾತೆ ಬಗ್ಗೆ ರಿಪೋರ್ಟ್ ಮಾಡಿ ಸುಮ್ಮನಾಗಿದ್ದಳು. ಇಷ್ಟೆಲ್ಲಾ ಆದ ಬಳಿಕವೂ ಅಪರಿಚಿತ ವ್ಯಕ್ತಿ ನಕಲಿ ಖಾತೆ ಸೃಷ್ಟಿಸಿ ಮತ್ತೆ ಮೆಸೇಜ್ ಮಾಡಲು ಶುರು ಮಾಡಿದ್ದ. ಲೈಂಗಿಕವಾಗಿ ಸಹಕರಿಸುವಂತೆ ಬಾಲಕಿಗೆ ಆಡಿಯೋ ಸಂದೇಶಗಳನ್ನು ಕಳುಹಿಸಿದ್ದ.
ಹೀಗಾಗಿ ಇ-ಮೇಲ್ ಮೂಲಕ ಬಾಲಕಿ ಪೋಷಕರು ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ (Cyber Crime, Economic Offences & Narcotics –
Dating Appನಲ್ಲಿ ಟೈಂ ಪಾಸ್ ಮಾಡೊ ಯುವಕರೇ ಹುಷಾರ್! ಇಲ್ಲ ಅಂದ್ರೆ ಮಾನ ಮರ್ಯಾದೆ ಹರಾಜ್..
Published On - 11:32 am, Mon, 21 December 20