ಸೂಟ್​ಕೇಸ್​ನಲ್ಲಿ ಮಗುವಿನ ಶವ ಸಾಗಾಟ ಕೇಸ್: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಹತ್ಯೆಯ ಭೀಕರತೆ

| Updated By: Rakesh Nayak Manchi

Updated on: Jan 09, 2024 | 10:01 PM

ಸ್ಟಾರ್ಟ್ ಅಪ್ ಕಂಪನಿಯ ಸಿಇಓ ಸುಚನಾ ಸೇಠ್ ತನ್ನ ಮಗುವನ್ನು ಕೊಲೆ ಮಾಡಿದ್ದರ ಹಿಂದಿನ ಕಾರಣ ತಿಳಿದು ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಪತಿ ತನ್ನ ಮಗನನ್ನು ಭೇಟಿಯಾಗಬಾರದು ಎಂದು ತನ್ನ ಮಗುವನ್ನೇ ಸುಚನಾ ಹತ್ಯೆ ಮಾಡಿ ಸೂಟ್​ಕೇಸ್​ನಲ್ಲಿ ಹಾಕಿ ಗೋವಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಚಿತ್ರದುರ್ಗದಲ್ಲಿ ಸಿಕ್ಕಿಬಿದ್ದಿದ್ದಳು. ಇದೀಗ ಮಗುವಿನ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಹತ್ಯೆಯ ಭೀಕರತೆಯನ್ನು ವೈದ್ಯಾಧಿಕಾರಿ ಬಹಿರಂಗಪಡಿಸಿದ್ದಾರೆ.

ಸೂಟ್​ಕೇಸ್​ನಲ್ಲಿ ಮಗುವಿನ ಶವ ಸಾಗಾಟ ಕೇಸ್: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಹತ್ಯೆಯ ಭೀಕರತೆ
ಸೂಟ್​ಕೇಸ್​ನಲ್ಲಿ ಮಗುವಿನ ಶವ ಸಾಗಾಟ ಕೇಸ್: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಹತ್ಯೆಯ ಭೀಕರತೆ
Follow us on

ಚಿತ್ರದುರ್ಗ, ಜ.9: ಪತಿ ವೆಂಕಟರಮಣ ತನ್ನ ನಾಲ್ಕು ವರ್ಷದ ಮಗನನ್ನು ಭೇಟಿಯಾಗಬಾರದು ಎಂದು ಮಗನನ್ನೇ ಹತ್ಯೆ (Child Murder) ಮಾಡಿ ಶವವನ್ನು ಸೂಟ್​ಕೇಸ್​ನಲ್ಲಿ ಗೋವಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಆರೋಪಿ ಮಹಿಳೆ ಸುಚನಾ ಸೇಠ್ ಚಿತ್ರದುರ್ಗದಲ್ಲಿ (Chitradurga) ಸಿಕ್ಕಿಬಿದ್ದಿದ್ದಳು. ಪ್ರಕರಣ ಸಂಬಂಧ ಮಗುವಿನ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಹತ್ಯೆಯ ಭೀಕರತೆಯನ್ನು ವೈದ್ಯಾಧಿಕಾರಿ ಹೇಳಿಕೊಂಡಿದ್ದಾರೆ.

ಹಿರಿಯೂರು ತಾಲೂಕು ಆಸ್ಪತ್ರೆ ಶವಾಗಾರದಲ್ಲಿ ವೈದ್ಯಾಧಿಕಾರಿ ಡಾ.ಕುಮಾರ ನಾಯ್ಕ್, ಡಾ.ರಂಗೇಗೌಡ ಅವರು ಮೃತ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಕುಮಾರ ನಾಯ್ಕ್, 36 ಗಂಟೆಗಳ ಹಿಂದೆಯೇ ಮಗುವಿನ ಹತ್ಯೆಯಾಗಿದೆ. ಕೈಯಿಂದ ಕತ್ತು ಹಿಸುಕಿ ಹತ್ಯೆ ಮಾಡಿಲ್ಲ. ತಲೆ ದಿಂಬು ಅಥವಾ ಬೇರೆ ವಸ್ತು ಬಳಸಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಉಸಿರುಗಟ್ಟಿಸಿದ ಕಾರಣ ಮಗುವಿನ ಮುಖ, ಎದೆಭಾಗ ಊದಿಕೊಂಡಿದೆ. ಹೀಗಾಗಿ ಮಗುವಿನ ಮೂಗಿನಿಂದ ರಕ್ತಸ್ರಾವವಾಗಿದೆ ಎಂದರು.

ಇದನ್ನೂ ಓದಿ: ಪತಿ ಮೇಲಿನ ಕೋಪಕ್ಕೆ ತನ್ನ ಮಗನನ್ನು ಕೊಂದ ಉದ್ಯಮಿ ಸುಚನಾ ಸೇಠ್ ಯಾರು?

ಪ್ರಕರಣದ ಬಗ್ಗೆ ನಮಗೇನೂ ಗೊತ್ತಿಲ್ಲ: ಮೃತ ಬಾಲಕನ ಸಂಬಂಧಿ

ಪ್ರಕರಣ ಸಂಬಂಧ ಮಾತನಾಡಿದ ಕೊಲೆಗೀಡಾಗಿರುವ ಬಾಲಕನ ತಂದೆ ವೆಂಕಟರಮಣ ಸಂಬಂಧಿ, ವೆಂಕಟರಮಣ ತುಂಬಾ ನೋವಿನಲ್ಲಿದ್ದಾರೆ, ಒಂಟಿಯಾಗಿರಲು ಬಿಟ್ಟುಬಿಡಿ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ನಮಗೇನು ಗೊತ್ತಿಲ್ಲ ಎಂದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ