ಬೆಂಗಳೂರು: ಬ್ಯಾಟರಾಯನಪುರದ ಮೈಸೂರು ರಸ್ತೆಯಲ್ಲಿರುವ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 15 ರಂದು ದೇಗುಲದ ಕೌಂಟರ್‌ನ ಲಾಕರ್‌ನಲ್ಲಿದ್ದ 48 ಸಾವಿರ ಕಳುವಾಗಿದೆ ಎಂದು ಪೊಲೀಸ್ ಠಾಣೆಗೆ ದೇಗುಲದ ಟ್ರಸ್ಟಿ ದೂರು ನೀಡಿದ್ದಾರೆ.
ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಗೋಡೆಯ ಮೇಲಿಂದ ಒಳ ನುಗ್ಗಿದ ಖತರ್ನಾಕ್ ಕಳ್ಳರು ಕೌಂಟರ್‌ನ ಲಾಕರ್‌ನಲ್ಲಿದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಆ ಹಣವು ಧನುರ್ಮಾಸದ ಪ್ರಯುಕ್ತ ಭಕ್ತರ ಇರುಮುಡಿಯಿಂದ ಬಂದಿದೆ ಎಂದು ದೇವಸ್ಥಾನದ ಟ್ರಸ್ಟಿ ಮಂಜುನಾಥ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.