AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈವ್ ಕಾಲ್ ಅನುಸರಿಸಿ ಅಂಗಡಿ ದೋಚ್ತಿದ್ದ, ಲೈವ್ ಬ್ಯಾಂಡ್ ಶೋಕಿ ಗ್ಯಾಂಗ್ ಅಂದರ್!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿವೇಳೆ ವಿಡಿಯೋ ಕಾಲ್ ಮುಖಾಂತರ  ಅಂಗಡಿ ಟಾರ್ಗೆಟ್ ಮಾಡುತ್ತಿದ್ದ ಹೈಟೆಕ್ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಲೈವ್ ಬ್ಯಾಂಡ್ ಶೋಕಿ ಹಿಂದೆ ಬಿದ್ದಿದ್ದ ಐನಾತಿ ಗ್ಯಾಂಗ್​ನ ಸದಸ್ಯ ಸೈಯದ್ ಮಹಮದ್ ಫೈಸಲ್ ಬಂಧಿತ ಆರೋಪಿ. ನಾಗವಾರದ ನಿವಾಸಿ ಸೈಯದ್ ಮೇಲೆ ನಗರದಲ್ಲಿ 9 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಅಶೋಕ ನಗರ, ಶಾಂತಿನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವು ಕಡೆ ಕಳ್ಳತನ ಮಾಡುತ್ತಿದ್ದ. ಮಧ್ಯರಾತ್ರಿ ಒಂಟಿಯಾಗಿ […]

ಲೈವ್ ಕಾಲ್ ಅನುಸರಿಸಿ ಅಂಗಡಿ ದೋಚ್ತಿದ್ದ, ಲೈವ್ ಬ್ಯಾಂಡ್ ಶೋಕಿ ಗ್ಯಾಂಗ್ ಅಂದರ್!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 28, 2020 | 4:20 PM

Share

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿವೇಳೆ ವಿಡಿಯೋ ಕಾಲ್ ಮುಖಾಂತರ  ಅಂಗಡಿ ಟಾರ್ಗೆಟ್ ಮಾಡುತ್ತಿದ್ದ ಹೈಟೆಕ್ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಲೈವ್ ಬ್ಯಾಂಡ್ ಶೋಕಿ ಹಿಂದೆ ಬಿದ್ದಿದ್ದ ಐನಾತಿ ಗ್ಯಾಂಗ್​ನ ಸದಸ್ಯ ಸೈಯದ್ ಮಹಮದ್ ಫೈಸಲ್ ಬಂಧಿತ ಆರೋಪಿ.

ನಾಗವಾರದ ನಿವಾಸಿ ಸೈಯದ್ ಮೇಲೆ ನಗರದಲ್ಲಿ 9 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಅಶೋಕ ನಗರ, ಶಾಂತಿನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವು ಕಡೆ ಕಳ್ಳತನ ಮಾಡುತ್ತಿದ್ದ. ಮಧ್ಯರಾತ್ರಿ ಒಂಟಿಯಾಗಿ ಬಂದು ಅಂಗಡಿಗಳ ಬೀಗ ಮುರಿದು ವಸ್ತುಗಳನ್ನು ಕದಿಯುತ್ತಿದ್ದ. ಬಳಿಕ ಕದ್ದ ಮಾಲು ಮಾರಿ ಲೈವ್ ಬ್ಯಾಂಡ್​ನಲ್ಲಿ ನೋಟು ಪಡೆಯುತ್ತಿದ್ದ. ಆರೋಪಿ ಕೃತ್ಯಕ್ಕೆ ಹೆಚ್ಚಾಗಿ ವಾಟ್ಸಪ್ ವಿಡಿಯೋ ಕಾಲ್ ಬಳಸುತ್ತಿದ್ದ ಎಂದು ತಿಳಿದು ಬಂದಿದೆ.

ಮನೆಯಲ್ಲೇ ಕೂತು ನಿರ್ದೇಶನ: ವಾಟ್ಸಪ್ ವಿಡಿಯೋ ಕಾಲ್ ಮುಖಾಂತರ ಮತ್ತೊಬ್ಬ ಆರೋಪಿ ಬರುತ್ತಿದ್ದ. ಮನೆಯಲ್ಲೇ ಕೂತು ಅಂಗಡಿಯನ್ನು ದೋಚಲು ವಿಡಿಯೋ ಕಾಲ್ ಮುಖಾಂತರ ಆರೋಪಿ ವಿಕ್ರಮ್ ಬಂಧಿತ ಫೈಸಲ್​ಗೆ ಸೂಚನೆ ನೀಡುತ್ತಿದ್ದ. ಅಂಗಡಿಯಲ್ಲಿ ಕದಿಯೋದನ್ನು ಮೊಬೈಲ್​ನಲ್ಲೇ ವಿಕ್ರಮ್ ನೋಡುತ್ತಿದ್ದ. ಆರೋಪಿಗಳ ಮಾಸ್ಟರ್ ಮೈಂಡ್ ಗೇಮ್​ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯ ಆಧರಿಸಿ ಅಶೋಕ ನಗರ ಪೊಲೀಸರು ಆರೋಪಿಯನ್ನು ಖೆಡ್ಡಾಕ್ಕೆ ಬೀಳಿಸಿದೆ.

ಬಂಧಿತ ಫೈಸಲ್ ಬಳಿ ಲಕ್ಷಾಂತರ ಮೌಲ್ಯದ ಬ್ರ್ಯಾಂಡೆಡ್ ವಾಚ್​ಗಳು, ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಾರಿಯಾದ ಮತ್ತೊಬ್ಬ ಆರೋಪಿ ವಿಕ್ರಮ್​ಗಾಗಿ ಅಶೋಕನಗರ ಪೊಲೀಸರು ಬಲೆ ಬೀಸಿದ್ದಾರೆ.

Published On - 9:21 am, Tue, 28 January 20

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ