ಚಾಮರಾಜಪೇಟೆಯಲ್ಲಿ 10 ವರ್ಷ ಹಿಂದೆ ಮೆಕಾನಿಕ್ ಆಗಿದ್ದ ಶೇಕ್, ಹೇಗೆ ಬೆಳೆದ ನೋಡಿ..

[lazy-load-videos-and-sticky-control id=”ynO7VzHjx2Q”] ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ ಬೇರೆಯದ್ದೇ ರಂಗೀಲಾ ಲೋಕಕ್ಕೆ ಕರೆದೊಯ್ಯುತ್ತಿದೆ. ಶೇಖ್​ ಫಾಝಿಲ್ ಎಂಬ ಶ್ರೀಲಂಕಾ ಕ್ಯಾಸಿನೋ ಕಿಂಗ್ ಬಗ್ಗೆ ಬಗೆದಷ್ಟೂ ಮಾದಕ ಕತೆಗಳು ಹುಟ್ಟಿಕೊಳ್ಳುತ್ತಿವೆ. ಚಾಮರಾಜಪೇಟೆಯಲ್ಲಿ 10 ವರ್ಷಗಳ ಹಿಂದೆ ಮೆಕಾನಿಕ್ ಆಗಿದ್ದ ಶೇಖ್​ ಫಾಝಿಲ್ ಡ್ರಗ್ಸ್ ದಂಧೆಯಲ್ಲಿ ಕೋಟಿ ಕೋಟಿ ಹಣ ಗಳಿಸಿದನಾ ಎಂಬ ಅನುಮಾನಗಳು ಸಿಸಿಬಿ ಪೊಲೀಸರಲ್ಲಿ ಮೂಡುತ್ತಿವೆ. ಶ್ರೀಲಂಕಾದ ಕ್ಯಾಸಿನೋಗೆ ಎಂಟ್ರಿ ಕೊಟ್ಟ ಬಳಿಕ, ಕ್ಯಾಸಿನೋ ಶೇಖ್​ ರಾಜಕಾರಣಿಗಳ ಸ್ನೇಹ, ನಟ-ನಟಿಯರ ಸಂಪರ್ಕ ಬೆಳೆಸಿದ್ದ ಎಂಬುದು […]

ಚಾಮರಾಜಪೇಟೆಯಲ್ಲಿ 10 ವರ್ಷ ಹಿಂದೆ ಮೆಕಾನಿಕ್ ಆಗಿದ್ದ ಶೇಕ್, ಹೇಗೆ ಬೆಳೆದ ನೋಡಿ..
ಸಾಧು ಶ್ರೀನಾಥ್​

Updated on: Sep 12, 2020 | 2:18 PM

[lazy-load-videos-and-sticky-control id=”ynO7VzHjx2Q”]

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ ಬೇರೆಯದ್ದೇ ರಂಗೀಲಾ ಲೋಕಕ್ಕೆ ಕರೆದೊಯ್ಯುತ್ತಿದೆ. ಶೇಖ್​ ಫಾಝಿಲ್ ಎಂಬ ಶ್ರೀಲಂಕಾ ಕ್ಯಾಸಿನೋ ಕಿಂಗ್ ಬಗ್ಗೆ ಬಗೆದಷ್ಟೂ ಮಾದಕ ಕತೆಗಳು ಹುಟ್ಟಿಕೊಳ್ಳುತ್ತಿವೆ.

ಚಾಮರಾಜಪೇಟೆಯಲ್ಲಿ 10 ವರ್ಷಗಳ ಹಿಂದೆ ಮೆಕಾನಿಕ್ ಆಗಿದ್ದ ಶೇಖ್​ ಫಾಝಿಲ್ ಡ್ರಗ್ಸ್ ದಂಧೆಯಲ್ಲಿ ಕೋಟಿ ಕೋಟಿ ಹಣ ಗಳಿಸಿದನಾ ಎಂಬ ಅನುಮಾನಗಳು ಸಿಸಿಬಿ ಪೊಲೀಸರಲ್ಲಿ ಮೂಡುತ್ತಿವೆ. ಶ್ರೀಲಂಕಾದ ಕ್ಯಾಸಿನೋಗೆ ಎಂಟ್ರಿ ಕೊಟ್ಟ ಬಳಿಕ, ಕ್ಯಾಸಿನೋ ಶೇಖ್​ ರಾಜಕಾರಣಿಗಳ ಸ್ನೇಹ, ನಟ-ನಟಿಯರ ಸಂಪರ್ಕ ಬೆಳೆಸಿದ್ದ ಎಂಬುದು ಸುಸ್ಪಷ್ಟವಾಗುತ್ತಿದೆ.
ಹಂತ ಹಂತವಾಗಿ ಹಣಗಳಿಸಿದ್ದ ಶೇಖ್​ ಫಾಝಿಲ್, ಡ್ರಗ್ಸ್ ದಂಧೆಯಲ್ಲಿಯೇ ಹಣ ಗಳಿಸಿದ್ದನಾ ಎಂಬ ಬಲವಾದ ಅನುಮಾನ ಮೂಡುತ್ತಿದೆ. ED ಸಂಸ್ಥೆ ದಾಖಲಿಸಿರುವ ಇಸಿಐಆರ್‌ನಲ್ಲಿ (ECIR ) ಫೈಝಲ್ ಪ್ರಮುಖ ಆರೋಪಿ. ಶೇಖ್​ ಫಾಝಿಲ್ ಕೋಟಿ ಕೋಟಿ ವಿದೇಶಿ ವಿನಿಮಯ ಮಾಡಿದ್ದಾನೆ.

ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದಾನೆ. ಶ್ರೀಲಂಕಾದ ಕರೆನ್ಸಿ, ಅಮೆರಿಕನ್ ಡಾಲರ್‌ ವಿನಿಮಯ ಮಾಡಿದ್ದಾನೆ. ಭಾರತೀಯ ರೂಪಾಯಿಗೆ ವಿನಿಮಯ ಮಾಡಿಕೊಂಡಿದ್ದಾನೆ ಎಂಬ ಆರೋಪದೊಂದಿಗೆ ಫಾಝಿಲ್ ವಿರುದ್ಧ ಅಕ್ರಮ ಹವಾಲಾ ದಂಧೆ ಪ್ರಕರಣವೂ ಈಗ ದಾಖಲಾಗಿದೆ.

Read:  ಕ್ಯಾಸಿನೊ ರಾಜ ಫಾಜಿಲ್ ಜೊತೆಗಿನ ಪುರಾತನ ದೋಸ್ತಿ ಬಗ್ಗೆ ಶಾಸಕ ಜಮೀರ್ ಹೇಳಿದ್ದೇನು?

Published On - 11:06 am, Sat, 12 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us