ಯೋಗೀಶ್ ಗೌಡ ಹತ್ಯೆ: ವಿನಯ್ ಕುಲಕರ್ಣಿ ಸಹೋದರನ ವಿಚಾರಣೆ
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳೆದುರು ಇಂದು ವಿಚಾರಣೆಗೆ ಹಾಜರಾದರು ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಸಿಬಿಐ ಕಚೇರಿಯಲ್ಲಿ ನಡೆದ ವಿಚಾರಣೆಯ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ವಿಜಯ್ ಕುಲಕರ್ಣಿ, ‘‘ಸದರಿ ಪ್ರಕರಣ ಸಂಬಂಧ ಸಿಬಿಐ ಇದುವರೆಗೆ 537 ಜನರನ್ನು ವಿಚಾರಣೆ ನಡೆಸಿದೆ, ಅವರಲ್ಲಿ ನಾನೂ ಒಬ್ಬ, ಇಂದು ವಿಚಾರಣೆಗೆ ಕರೆದಿದ್ದರು, ಅದಕ್ಕಾಗಿ ಬಂದಿದ್ದೆ,’’ ಎಂದು […]
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳೆದುರು ಇಂದು ವಿಚಾರಣೆಗೆ ಹಾಜರಾದರು
ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಸಿಬಿಐ ಕಚೇರಿಯಲ್ಲಿ ನಡೆದ ವಿಚಾರಣೆಯ ನಂತರ ಮಾಧ್ಯಮದವರೊಂದಿಗೆ ಮಾತಾಡಿದ ವಿಜಯ್ ಕುಲಕರ್ಣಿ, ‘‘ಸದರಿ ಪ್ರಕರಣ ಸಂಬಂಧ ಸಿಬಿಐ ಇದುವರೆಗೆ 537 ಜನರನ್ನು ವಿಚಾರಣೆ ನಡೆಸಿದೆ, ಅವರಲ್ಲಿ ನಾನೂ ಒಬ್ಬ, ಇಂದು ವಿಚಾರಣೆಗೆ ಕರೆದಿದ್ದರು, ಅದಕ್ಕಾಗಿ ಬಂದಿದ್ದೆ,’’ ಎಂದು ಹೇಳಿದರು.
ತಮಗೆ ಕೇಳಲಾದ ಪ್ರಶ್ನೆಗಳ ಕುರಿತು ವಿವರಣೆ ನೀಡಲು ನಿರಾಕರಿಸಿದ ವಿಜಯ್, ಈ ಹಂತದಲ್ಲಿ ಅದನ್ನೆಲ್ಲ ಹೇಳುವುದು ತಪ್ಪಾಗುತ್ತದೆ, ಅಧಿಕಾರಿಗಳು ಮತ್ತೊಮ್ಮೆ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದರು.
ಸ್ಥಳೀಯ ಬಿಜೆಪಿ ನಾಯಕ ಮತ್ತು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಅವರನ್ನು ಜೂನ್ 15, 2016 ರಂದು ಅವರ ಜಿಮ್ ಮುಂಭಾಗದಲ್ಲೇ ಕಣ್ಣಿನಲ್ಲಿ ಮೆಣಸಿನಕಾಯಿ ಪುಡಿ ಎಸೆದು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು.