[lazy-load-videos-and-sticky-control id=”_7wRa8N6lYM”] ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ವಿರೇನ್ ಖನ್ನಾಗೆ ಸಹಕರಿಸಿದ ಆರೋಪಡಿ CCB ಅಧಿಕಾರಿ ಮುದವಿಯ ಅಮಾನತಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಧಿಕಾರಿ ಜೊತೆ ಸಹಕರಿಸಿದ ಪೇದೆಯೊಬ್ಬನ ಅಮಾನತಿಗೂ ಆದೇಶ ಹೊರಡಿಸಲಾಗಿದೆ. ವೀರೇನ್ ಖನ್ನಾಗೆ ಸಹಕರಿಸಿದ ಸಿಸಿಬಿ ACP ಮುದವಿ ಹಾಗೂ ಪೇದೆ ಮಲ್ಲಿಕಾರ್ಜುನರನ್ನ ಅಮಾನತು ಮಾಡುವಂತೆ ಆದೇಶ ಹೊರಡಿಸಲಾಗಿದೆ. ವೀರೇನ್ ಖನ್ನಾ ಬಳಿ 50 ಲಕ್ಷಕ್ಕೆ ಡೀಲ್ ಕುದುರಿಸಿದ್ದ ACP ಮುದವಿ. ಪೇದೆ ಮಲ್ಲಿಕಾರ್ಜುನ ಮೂಲಕ ಖನ್ನಾಗೆ ಮೊಬೈಲ್ […]
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ವಿರೇನ್ ಖನ್ನಾಗೆ ಸಹಕರಿಸಿದ ಆರೋಪಡಿ CCB ಅಧಿಕಾರಿ ಮುದವಿಯ ಅಮಾನತಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಧಿಕಾರಿ ಜೊತೆ ಸಹಕರಿಸಿದ ಪೇದೆಯೊಬ್ಬನ ಅಮಾನತಿಗೂ ಆದೇಶ ಹೊರಡಿಸಲಾಗಿದೆ.
ವೀರೇನ್ ಖನ್ನಾಗೆ ಸಹಕರಿಸಿದ ಸಿಸಿಬಿ ACP ಮುದವಿ ಹಾಗೂ ಪೇದೆ ಮಲ್ಲಿಕಾರ್ಜುನರನ್ನ ಅಮಾನತು ಮಾಡುವಂತೆ ಆದೇಶ ಹೊರಡಿಸಲಾಗಿದೆ. ವೀರೇನ್ ಖನ್ನಾ ಬಳಿ 50 ಲಕ್ಷಕ್ಕೆ ಡೀಲ್ ಕುದುರಿಸಿದ್ದ ACP ಮುದವಿ. ಪೇದೆ ಮಲ್ಲಿಕಾರ್ಜುನ ಮೂಲಕ ಖನ್ನಾಗೆ ಮೊಬೈಲ್ ನೀಡಿ ಸಹಕರಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ACP ಮುದವಿ ರಾತ್ರಿ 10:30 ರ ನಂತರ ಮೊಬೈಲ್ ಕೊಟ್ಟು ಡೀಲ್ ಕುದುರಿಸಿದ್ದರು ಎಂದು ಹೇಳಲಾಗಿದೆ. ಮುದವಿ CCBಯ ಮಹಿಳಾ ಸಂರಕ್ಷಣಾ ಘಟಕದ ಎಸಿಪಿಯಾಗಿದ್ದು ಖನ್ನಾಗೆ ಮೊಬೈಲ್ ನೀಡಲು 50 ಲಕ್ಷಕ್ಕೆ ಡಿಮ್ಯಾಂಡ್ ಮಾಡಿರುವ ಆರೋಪವಿದೆ. ಜೊತೆಗೆ, ವಿಚಾರಣೆಯ ಸಮಯದಲ್ಲಿ ಕೆಲ ಆರೋಪಿಗಳು ಮತ್ತು ಅವರ ಸಹಚರರೊಂದಿಗೆ ಸಂಪರ್ಕದಲ್ಲಿದ್ದರಂತೆ. ಜೊತೆಗೆ, ತನಿಖೆಯ ಮಾಹಿತಿಯನ್ನು ಸೋರಿಕೆ ಮಾಡುತ್ತಿರುವುದು ಸಹ ಕಂಡುಬಂದಿತ್ತು.