ಜ್ಯುವೆಲ್ಲರಿ ಶಾಪ್‌ ಕಳ್ಳತನ: ನೇಪಾಳಿ ಗ್ಯಾಂಗ್ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Aug 25, 2020 | 10:58 AM

[lazy-load-videos-and-sticky-control id=”UCCliMynqXE”] ಬೆಂಗಳೂರು: ಆಗಸ್ಟ್5ರಂದು ಬೆಂಗಳೂರಿನ ಜ್ಯುವೆಲ್ಲರಿ ಶಾಪ್‌ನಲ್ಲಿ ಕಳವು ಕೇಸ್​ಗೆ ಸಂಬಂಧಿಸಿ ನೇಪಾಳಿ ಗ್ಯಾಂಗ್‌ನ 6 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಮರ್‌ ಸಿಂಗ್, ಗಣೇಶ ಬಹದ್ದೂರ್ ಶಾಹಿ, ಕೃಷ್ಣಾ ರಾಜ್, ಚರಣ್‌ಸಿಂಗ್, ಸಲೀಂ ಪಾಷ, ಶಾಹಿದ್ ಬಂಧಿತ ಆರೋಪಿಗಳು. ಆಗಸ್ಟ್5ರಂದು ಈ ಗ್ಯಾಂಗ್ ವೈಟ್‌ಫೀಲ್ಡ್‌ನ ಮಾತಾಜಿ ಜ್ಯುವೆಲ್ಲರಿಯಲ್ಲಿ ಗ್ಯಾಸ್‌ ಕಟ್ಟರ್ ಬಳಸಿ ಚಿನ್ನದಂಗಡಿಗೆ ಕಿಂಡಿ ಕೊರೆದು ಬೆಳ್ಳಿ ವಸ್ತುಗಳನ್ನು ಕದ್ದಿದ್ದರು. ಚಿನ್ನಾಭರಣ ದೋಚಲು ವಿಫಲರಾಗಿ ಬೆಳ್ಳಿ ವಸ್ತುಗಳನ್ನ ಮಾತ್ರ ಕದ್ದು ಪಾರಾರಿಯಾಗಿದ್ರು. ಬೆಳಗ್ಗೆ ವೇಳೆ […]

ಜ್ಯುವೆಲ್ಲರಿ ಶಾಪ್‌ ಕಳ್ಳತನ: ನೇಪಾಳಿ ಗ್ಯಾಂಗ್ ಅರೆಸ್ಟ್
Follow us on

[lazy-load-videos-and-sticky-control id=”UCCliMynqXE”]

ಬೆಂಗಳೂರು: ಆಗಸ್ಟ್5ರಂದು ಬೆಂಗಳೂರಿನ ಜ್ಯುವೆಲ್ಲರಿ ಶಾಪ್‌ನಲ್ಲಿ ಕಳವು ಕೇಸ್​ಗೆ ಸಂಬಂಧಿಸಿ ನೇಪಾಳಿ ಗ್ಯಾಂಗ್‌ನ 6 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಮರ್‌ ಸಿಂಗ್, ಗಣೇಶ ಬಹದ್ದೂರ್ ಶಾಹಿ, ಕೃಷ್ಣಾ ರಾಜ್, ಚರಣ್‌ಸಿಂಗ್, ಸಲೀಂ ಪಾಷ, ಶಾಹಿದ್ ಬಂಧಿತ ಆರೋಪಿಗಳು.

ಆಗಸ್ಟ್5ರಂದು ಈ ಗ್ಯಾಂಗ್ ವೈಟ್‌ಫೀಲ್ಡ್‌ನ ಮಾತಾಜಿ ಜ್ಯುವೆಲ್ಲರಿಯಲ್ಲಿ ಗ್ಯಾಸ್‌ ಕಟ್ಟರ್ ಬಳಸಿ ಚಿನ್ನದಂಗಡಿಗೆ ಕಿಂಡಿ ಕೊರೆದು ಬೆಳ್ಳಿ ವಸ್ತುಗಳನ್ನು ಕದ್ದಿದ್ದರು. ಚಿನ್ನಾಭರಣ ದೋಚಲು ವಿಫಲರಾಗಿ ಬೆಳ್ಳಿ ವಸ್ತುಗಳನ್ನ ಮಾತ್ರ ಕದ್ದು ಪಾರಾರಿಯಾಗಿದ್ರು. ಬೆಳಗ್ಗೆ ವೇಳೆ ನಗರದಲ್ಲಿ ಸೆಕ್ಯೂರಿಟಿಗಾರ್ಡ್‌ ಕೆಲಸ ಮಾಡ್ತಿದ್ದರು.

ನಂತರ ರಾತ್ರಿ ಕಳ್ಳತನಕ್ಕೆ ಪ್ಲ್ಯಾನ್ ಮಾಡುತ್ತಿದ್ದರು. ಮೂರು ರಿಂದ ಆರು ತಿಂಗಳು ಒಂದೊಂದು ರಾಜ್ಯದಲ್ಲಿ‌ ವಾಸ್ತವ್ಯ ಹೂಡುತ್ತಿದ್ದರು. ದೊಡ್ಡಮಟ್ಟದಲ್ಲಿ ಕನ್ನ ಹಾಕಿ ರಾಜ್ಯವನ್ನೆ ಬಿಟ್ಟು ಎಸ್ಕೇಪ್ ಆಗ್ತಿದ್ರು. ಸದ್ಯ ಈಗ ಅವರನ್ನು ಅರೆಸ್ಟ್ ಮಾಡಲಾಗಿದ್ದು, ಬಂಧಿತರಿಂದ 360 ಗ್ರಾಂ ಚಿನ್ನ, 25 ಕೆಜಿ ಬೆಳ್ಳಿ, ಲ್ಯಾಪ್‌ಟಾಪ್, ಗ್ಯಾಸ್ ಕಟ್ಟರ್, ಆಟೋ ವಶಕ್ಕೆ ಪಡೆಯಲಾಗಿದೆ.

Published On - 7:22 am, Tue, 25 August 20