ಮಂಗಳೂರು, ನ.10: ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು (Mangaluru) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೆ.ಸಿ.ರೋಡ್ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಮುಸ್ತಫಾ ಮತ್ತು ಶಂಶುದ್ದೀನ್ ಬಂಧಿತ ಆರೋಪಿಗಳು.
ಬಂಧಿತ ಮುಸ್ತಾಫಾ ಕೇರಳದ ಗುಡ್ಡೆಕೇರಿ ಹೌಸ್ ನಿವಾಸಿಯಾಗಿದ್ದು, ಶಂಶುದ್ದೀನ್ ಕೇರಳದ ಮಜಲುಗುಡ್ಡ ಹೌಸ್ ನಿವಾಸಿಯಾಗಿದ್ದಾನೆ. ಇವರ ಬಳಿ ಇದ್ದ 75 ಸಾವಿರ ಮೌಲ್ಯದ 15 ಗ್ರಾಂ ಡ್ರಗ್ಸ್ ಮತ್ತು ಡಿಜಿಟಲ್ ತೂಕಮಾಪನವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಉಳ್ಳಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಪೊಲೀಸರ ಕಾರ್ಯಾಚರಣೆ: 15 ಮಾದಕ ವ್ಯಸನಿಗಳ ಬಂಧನ, 12 ಪ್ರಕರಣ ದಾಖಲು
ನೆಲಮಂಗಲ: ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆ ಕಿರಣ್ (24), ಮೋಟಗಾನಹಳ್ಳಿ ಮಹದೇವ್ (23), ಬೆಂಗಳೂರಿನ ಮಾಳಗಾಳ ನಿವಾಸಿ ರಕ್ಷಿತ್ (23) ಬಂಧಿತ ಆರೋಪಿಗಳು.
ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿರುವ ನವೀನ್ ಮತ್ತು ಪರ್ವೇಜ್ ಬಂಧನಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಚ್ಚು, ಚಾಕು, ರಾಡು, ಖಾರದಪುಡಿ ಸೇರಿದಂತೆ ಎರಡು ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ