ಜಾರ್ಖಂಡ್: ಸಹಪಾಠಿಯ ಸ್ನೇಹಿತರಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರ ಬಂಧನ
ಆದಿವಾಸಿ ಸಮುದಾಯಕ್ಕೆ ಸೇರಿದ ಬಾಲಕಿ ಮೇಲೆ ಆಕೆಯ ಸಹಪಾಠಿಯ ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ನಾಲ್ವರನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಬಂಧಿಸಲಾಗಿದೆ. ಘಟನೆ ನವೆಂಬರ್ 6 ರಂದು ಸಂಭವಿಸಿದೆ. ಬಾಲಕಿಯು ತನ್ನ ಪುರುಷ ಸಹಪಾಠಿಯೊಂದಿಗೆ ಬೈಕ್‌ನಲ್ಲಿ ಶಾಲೆ ಮುಗಿದ ಬಳಿಕ ವಿಹಾರಕ್ಕೆ ಹೋಗಿದ್ದಳು. ಇಬ್ಬರೂ ಮಾತನಾಡೋಣವೆಂದು ಮಾಡಲು ತೆರೆದ ಮೈದಾನಕ್ಕೆ ಹೋಗಿದ್ದರು.

ಆಗ ಬಾಲಕಿಯ ಸಹಪಾಠಿ ಉಣ್ಣೆಯ ಶಾಲು ತರುವುದಾಗಿ ಹೇಳಿ ಆಕೆಯನ್ನು ಬಿಟ್ಟು ಹೋಗಿದ್ದಾನೆ. ನಂತರ ಆಕೆಯ ಸಹಪಾಠಿಗೆ ಸ್ನೇಹಿತರಾಗಿದ್ದ ಐವರು ಆರೋಪಿಗಳು ಬಾಲಕಿಯ ಬಳಿಗೆ ಬಂದಿದ್ದಾರೆ. ಆಕೆಯ ಸ್ನೇಹಿತ ನದಿಯ ದಡಕ್ಕೆ ನಿನ್ನನ್ನು ಕರೆತರಲು ಹೇಳಿದ್ದಾನೆ ಎಂದು ನಂಬಿಸಿ ಕರೆದೊಯ್ದಿದ್ದಾರೆ. ಬಳಿಕ ಆಕೆಯನ್ನು ಕರೆದೊಯ್ದು, ಹಲ್ಲೆ ನಡೆಸಿ, ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಬಾಲಕಿ ಮರುದಿನ ಮನೆಗೆ ಮರಳಿದ್ದಾಳೆ, ಆಗ ಪೋಷಕರಿಗೆ ನಡೆದಿರುವ ಘಟನೆ ವಿವರಿಸಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಶೀಘ್ರ ಕ್ರಮ ಕೈಗೊಂಡಿದ್ದು, ಒಂದೇ ದಿನದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಕೋಲಾರದಲ್ಲಿ ಬಾಲಕನ ಕೊಲೆ ಪ್ರಕರಣ: ಆರೋಪಿಗಳ ಕಾಲಿಗೆ ಗುಂಡೇಟು ಕೊಟ್ಟು ಬಂಧಿಸಿದ ಪೊಲೀಸರು!
ಅವರಲ್ಲಿ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಐದನೇ, ಅಪ್ರಾಪ್ತನನ್ನು ಶೆಲ್ಟರ್ ಹೋಮ್‌ನಲ್ಲಿ ಇರಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ, ಎಲ್ಲಾ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ