ಸಿಸಿಬಿ ಮಿಂಚಿನ ಕಾರ್ಯಚರಣೆ: ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದವನ ಬಂಧನ, 10 ಕೋಟಿ ರೂ. ಮೌಲ್ಯದ MDMA ವಶಕ್ಕೆ
ಬೆಂಗಳೂರಿನಲ್ಲಿ ಸಿಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿದ್ದು, ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದ ಓರ್ವ ವಿದೇಶಿ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಬಂಧಿತನಿಂದ ಬರೋಬ್ಬರಿ 10 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಬಂಧಿತ ಆರೋಪಿ ಯಾರು? ಯಾಕಾಗಿ ಬೆಂಗಳೂರಿಗೆ ಬಂದಿದ್ದ? ಎನ್ನುವ ಮಾಹಿತಿಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬೆಂಗಳೂರು, (ನವೆಂಬರ್ 10): ಬೆಂಗಳೂರಿನಲ್ಲಿ ಸಿಸಿಬಿಯ (Bengaluru CCB) ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿದ್ದು, ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದ ನೈಜೀರಿಯಾ ಮೂಲದ ಪ್ರಜೆ ಬೆಂಜಮಿನ್ ಎನ್ನುವಾತನನ್ನು ಬಂಧಿಸಿದ್ದಾರೆ. ಅಲ್ಲದೇ ಆತನಿಂದ ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ನೈಜೀರಿಯಾ ಪ್ರಜೆ ಬೆಂಜಮಿನ್ ರಾಮಮೂರ್ತಿ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ವಿಚಾರಣೆ ವೇಳೆ ಮೊದಲಿಗೆ ಅರೋಪಿ ಬಳಿ 100 ಗ್ರಾಂ MDMA ಪತ್ತೆಯಾಗಿದೆ. ನಂತರ ಆರೋಪಿ ವಿಚಾರಣೆಯನ್ನು ತೀವ್ರಗೊಳಿಸಿದ ಬಳಿಕ ಎಂಡಿಎಂಎ ಕ್ರಿಸ್ಟಲ್ ತಯಾರಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಎಸಿಪಿ ಕುಮಾರ್, ಇನ್ಸ್ಪೆಕ್ಟರ್ ಭರತ್ಗೌಡ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಿಸಿಬಿ ಅಧಿಕಾರಿಗಳು ಡ್ರಗ್ಸ್ ವಿರುದ್ದ ಸಮರ ಮುಂದುವರೆಸಿದ್ದಾರೆ. ಇಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತು ಕೋಟಿ ಮೌಲ್ಯದ ಎಂಡಿಎಂಎಯನ್ನು ವಶಕ್ಕೆ ಪಡೆದಿದ್ದಾರೆ. ಒರ್ವ ವಿದೇಶಿ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಮಾದಕ ವಸ್ತುಗಳನ್ನು ತಯಾರಿಸಲು ಬಳಸುತಿದ್ದ ಕೆಮಿಗಳು. ಮತ್ತು ಸಾದಕ ಸಲಕರಣೆಗಳು ವಶ ಪಡೆಯಲಾಗಿದ್ದು, ಇದೊಂದು ಬಹುದೊಡ್ಡ ಕಾರ್ಯಚರಣೆಯಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮಂಗಳೂರು: ಉಳ್ಳಾಲದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಸಿಸಿಬಿ
ಎಂಡಿಎಂಎ ತಯಾರು ಮಾಡುತ್ತಿದ್ದ ಅರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಬಿಜಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಬಂಧಿತ ಆರೋಪಿ, ರಾಮಮೂರ್ತಿ ನಗರ ಮತ್ತು ಅವಲಹಳ್ಳಿಯಲ್ಲಿ ವಾಸವಿದ್ದ. 2021 ರಿಂದ ನಗರದಲ್ಲಿ ವಾಸ ಇದ್ದು, 2022ರಲ್ಲಿ ಆರೋಪಿಯ ವೀಸಾ ಅವಧಿ ಮುಗಿದಿದೆ. ಆದ್ರೆ ಯಾವಾಗ ಡ್ರಗ್ಸ್ ಗಳನ್ನು ತಯಾರು ಮಾಡಲು ಶುರುಮಾಡಿದ್ದ ಎನ್ನುವುದು ಗೊತ್ತಾಗಿದೆ. ದೆಹಲಿ ಹಾಗೂ ಬೇರೆ ಬೇರೆ ಕಡೆಯಿಂದ ತರಿಸಿ ಸಬ್ ಪೆಡರ್ಸ್ ಗಳಿಗೆ ಮಾರಾಟ ಮಾಡುತ್ತಿದ್ದ. ಅಲ್ಲದೇ ಈತ ಬಟ್ಟೆ ಮೆಟೀರಿಯಲ್ಸ್ ಮಾರಾಟ ಮಾಡುತ್ತೇನೆ ಎಂದು ಮನೆ ಬಾಡಿಕೆ ಪಡೆದಿದ್ದ. ಈ ಹಿಂದೆ ಈತ ಹೈದ್ರಾಬಾದ್ ನಲ್ಲಿ ಅರೆಸ್ಟ್ ಆಗಿದ್ದ ಎನ್ನುವ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
Published On - 11:13 am, Fri, 10 November 23