ರಾಗಿಣಿ ಆಪ್ತನ ಮಾಜಿ ಪತ್ನಿಗೆ CCB ಅಧಿಕಾರಿಗಳಿಂದ ನೋಟಿಸ್

| Updated By: ಸಾಧು ಶ್ರೀನಾಥ್​

Updated on: Sep 23, 2020 | 10:34 AM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ರವಿಶಂಕರನ ಮಾಜಿ ಪತ್ನಿಗೆ CCB ಅಧಿಕಾರಿಗಳಿಂದ ನೋಟಿಸ್ ಹೊರಡಿಸಲಾಗಿದೆ. WhatsApp ಮೂಲಕ ರವಿಶಂಕರ್ ಮಾಜಿ ಪತ್ನಿ ಅರ್ಚನಾ ನಾಯ್ಕ್‌ಗೆ ನೋಟಿಸ್ ನೀಡಲಾಗಿದೆ. ರವಿಶಂಕರ್ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಅರ್ಚನಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ರವಿಶಂಕರ್ 2010ರಲ್ಲಿ ಅರ್ಚನಾ ನಾಯ್ಕ್ ಜೊತೆ ಮದ್ವೆಯಾಗಿದ್ದ. ಬಳಿಕ 2018 ರ ನವೆಂಬರ್​ನಲ್ಲಿ ಇಬ್ಬರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದರು ಎಂದು ತಿಳಿದುಬಂದಿದೆ. ರವಿಶಂಕರ್ ಹಾಗೂ […]

ರಾಗಿಣಿ ಆಪ್ತನ ಮಾಜಿ ಪತ್ನಿಗೆ CCB ಅಧಿಕಾರಿಗಳಿಂದ ನೋಟಿಸ್
Follow us on

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ರವಿಶಂಕರನ ಮಾಜಿ ಪತ್ನಿಗೆ CCB ಅಧಿಕಾರಿಗಳಿಂದ ನೋಟಿಸ್ ಹೊರಡಿಸಲಾಗಿದೆ.

WhatsApp ಮೂಲಕ ರವಿಶಂಕರ್ ಮಾಜಿ ಪತ್ನಿ ಅರ್ಚನಾ ನಾಯ್ಕ್‌ಗೆ ನೋಟಿಸ್ ನೀಡಲಾಗಿದೆ. ರವಿಶಂಕರ್ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಅರ್ಚನಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ರವಿಶಂಕರ್ 2010ರಲ್ಲಿ ಅರ್ಚನಾ ನಾಯ್ಕ್ ಜೊತೆ ಮದ್ವೆಯಾಗಿದ್ದ. ಬಳಿಕ 2018 ರ ನವೆಂಬರ್​ನಲ್ಲಿ ಇಬ್ಬರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದರು ಎಂದು ತಿಳಿದುಬಂದಿದೆ. ರವಿಶಂಕರ್ ಹಾಗೂ ಅರ್ಚನಾ ನಾಯ್ಕ್​ಗೆ ಎಂಟು ವರ್ಷದ ಮಗು ಸಹ ಇದೆ.

ರವಿಶಂಕರ್ ಇಡೀ ಡ್ರಗ್ಸ್ ಪ್ರಕರಣ ಬಯಲಾಗುವುದಕ್ಕೆ ಪ್ರಮುಖ ಕಾರಣ. ರವಿಶಂಕರ್ ಕೊಟ್ಟ ಮಾಹಿತಿ ಮೇಲೆ ಕಾಟನ್​ಪೇಟೆಯಲ್ಲಿ ಕೇಸ್ ದಾಖಲಾಗಿದ್ದು ನಟಿ ರಾಗಿಣಿ, ಸಂಜನಾ, ರಾಹುಲ್ , ಶಿವಪ್ರಕಾಶ್ ಸೇರಿ 16 ಮಂದಿ ಮೇಲೆ‌ ಕೇಸ್ ದಾಖಲಾಗಿದೆ.

ಬಾಣಸವಾಡಿಯಲ್ಲಿ 2018 ರಲ್ಲಿ ಕೊಕೇನ್‌ ಮಾರಾಟ ಮಾಡ್ತಿದ್ದ ಪ್ರತೀಕ್ ಶೆಟ್ಟಿ ಬಂಧನವಾಗಿತ್ತು. ಈ‌ ವೇಳೆ ಪ್ರತೀಕ್ ಶೆಟ್ಟಿ, ರವಿಶಂಕರ್ ಹೆಸರು ಬಾಯಿಬಿಟ್ಟಿದ್ದ. ಸದ್ಯ ಇದೇ ಪ್ರಕರಣದಲ್ಲಿ ರವಿಶಂಕರ್​ನ ಕಸ್ಟಡಿಗೆ ಪಡೆದು CCB ಅಧಿಕಾರಿಳಗು ವಿಚಾರಣೆ ಮಾಡುತ್ತಿದ್ದಾರೆ. 2018 ರಲ್ಲಿ ಬಾಣಸವಾಡಿ ಕೇಸ್ ಆದಾಗ ಆರೋಪಿ ಅರ್ಚನಾ ನಾಯ್ಕ್ ಜೊತೆಯಲ್ಲಿಯೇ ಇದ್ರು. ಹಾಗಾಗಿ, ಆ ಕೇಸ್​ಗೆ ಸಂಬಂಧಿಸಿ ರವಿಶಂಕರ್ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಲು ನೋಟಿಸ್ ನೀಡಲಾಗಿದೆ.