ಅಪರಾಧ ಸುದ್ದಿ: ಬೆಂಗಳೂರಿನ ಗ್ಯಾಂಬ್ಲಿಂಗ್ ಪಬ್​ಗಳ ಮೇಲೆ ಸಿಸಿಬಿ ದಾಳಿ; 104 ಜನರ ಬಂಧನ

| Updated By: guruganesh bhat

Updated on: Sep 04, 2021 | 9:27 PM

ಸಿಸಿಬಿ ಪೊಲೀಸರ ದಾಳಿಯಲ್ಲಿ ಬೆಟ್ಟಿಂಗ್ ಕಾಯಿನ್ ಸಹ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಪರಾಧ ಸುದ್ದಿ: ಬೆಂಗಳೂರಿನ ಗ್ಯಾಂಬ್ಲಿಂಗ್ ಪಬ್​ಗಳ ಮೇಲೆ ಸಿಸಿಬಿ ದಾಳಿ; 104 ಜನರ ಬಂಧನ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಗ್ಯಾಂಬ್ಲಿಂಗ್ ಪಬ್​ಗಳ ಮೇಲೆ ಸಿಸಿಬಿ ದಾಳಿ ನಡೆಸಿದ್ದು 104 ಜನರನ್ನು ಬಂಧಿಸಿ 4 ಲಕ್ಷ ಹಣವನ್ನು ಜಪ್ತಿ ಮಾಡಿಕೊಂಡಿದೆ. ಸಂಪಿಗೆಹಳ್ಳಿ, ಇಂದಿರಾನಗರ, ಹಲಸೂರು, ಬಾಣಸವಾಡಿಯ ಗ್ಯಾಂಬ್ಲಿಂಗ್ ಪಬ್​ಗಳ ಮೇಲೆ ಸಿಸಿಬಿ ಪೊಲೀಸರ ದಾಳಿಯಲ್ಲಿ ಬೆಟ್ಟಿಂಗ್ ಕಾಯಿನ್ ಸಹ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಕಿಂಗ್ಸ್ ವಿನ್ನರ್ ಕ್ಲಬ್, ಹಲಸೂರು ಠಾಣಾ ವ್ಯಾಪ್ತಿಯ ಸ್ಟಾರ್ ಲಯನ್ಸ್ ಕ್ಲಬ್, ಗೌರಿಸ್ಪೋರ್ಟ್ಸ್ ಮತ್ತು ರಿಕ್ರಿಯೇಷನಲ್ ಅಸೋಸಿಯೇಷನ್, ಬಾಣಸವಾಡಿಯ ಗೌರಿ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನಲ್, ಕೇಂಬ್ರಿಡ್ಜ್ ರಿಕ್ರಿಯೇಷನಲ್ ಕ್ಲಬ್, ಇಂದಿರಾನಗರದಲ್ಲಿರುವ ಕೇಂಬ್ರಿಡ್ಜ್ ರಿಕ್ರಿಯೇಷನಲ್ ಕ್ಲಬ್​ಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ.

ಕುಡಿದ ಅಮಲಿನಲ್ಲಿ ಹತ್ಯೆ
ಅಮಲಿನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರಿನ ಶ್ರೀರಾಂಪುರದ ಸನ್ ರೈಸ್ ವೃತ್ತದಲ್ಲಿ ನಡೆದಿದೆ. ಚಾಕುವಿನಿಂದ ಇರಿದು ಆನಂದ್ ಎಂಬ ವ್ಯಕ್ತಿಯ ಬರ್ಬರ ಹತ್ಯೆಗೈಯಲಾಗಿದೆ. ಲೋಹಿತ್ ಅಲಿಯಾಸ್ ಮೀನು ಎಂಬಾತ ಕೊಲೆ ಮಾಡಿದ ಆರೋಪಿ ಎಂದು ಹೇಳಲಾಗಿದ್ದು, ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

ಅಪರಾಧ ಸುದ್ದಿ: ಹುಡುಗಾಟಿಕೆಗೆ ವಿದ್ಯುತ್ ಕಂಬ ಹತ್ತಿದ ಯುವಕ ಕರೆಂಟ್ ಹೊಡೆದು ಅಲ್ಲೆ ನೇತಾಡಿದ

ಬೆಂಗಳೂರು ಅಪರಾಧ ಜಗತ್ತಿನ ನಾಲ್ಕು ಮುಖ್ಯ ಪ್ರಕರಣಗಳನ್ನು ತೆರೆದಿಡಲಿದೆ ನೆಟ್​ಫ್ಲಿಕ್ಸ್​ನ ಈ ಡಾಕ್ಯುಮೆಂಟರಿ

(CCB Police arrest 104 persons on gambling club raid)