ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜೀರಿಯಾ ಪ್ರಜೆಗಳನ್ನ ಬಂಧಿಸಿದ ಬಾಣಸವಾಡಿ ಪೊಲೀಸರು

Nigerian: ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟವೇರ್ ಉದ್ಯೋಗಿಯಾಗಿರುವ ಸಂತ್ರಸ್ತ ಯುವತಿಗೆ ಆರೋಪಿ ಆ್ಯಂಟೋನಿ ಹಲವು ವರ್ಷಗಳಿಂದ ಪರಿಚಯವಿದ್ದ. ಕಳೆದ ಭಾನುವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜೀರಿಯಾ ಪ್ರಜೆಗಳನ್ನ ಬಂಧಿಸಿದ ಬಾಣಸವಾಡಿ ಪೊಲೀಸರು
ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜೀರಿಯಾ ಪ್ರಜೆಗಳನ್ನ ಬಂಧಿಸಿದ ಬಾಣಸವಾಡಿ ಪೊಲೀಸರು

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ವಿದೇಶಿಗರ ಆಟಾಟೋಪ ಮಿತಿಮೀರಿದೆ. ಅಪರಾಧಗಳ ಮೇಲೆ ಅಪರಾಧಗಳನ್ನು ಮಾಡುತ್ತಿದ್ದಾರೆ. ಇಬ್ಬರು ನೈಜೀರಿಯಾ ಪ್ರಜೆಗಳು ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಇಬ್ಬರು ನೈಜೀರಿಯಾ ಪ್ರಜೆಗಳನ್ನ ಪೊಲೀಸರು ಬಂಧಿಸಿದ್ದಾರೆ.

ಬಾಣಸವಾಡಿ ಪೊಲೀಸರು ಇಬ್ಬರು ಅತ್ಯಾಚಾರ ಆರೋಪಿಗಳಾದ ಆ್ಯಂಟೋನಿ (35) ಮತ್ತು ಒಬಾಕಾನನ್ನು (36) ಸೆರೆ ಹಿಡಿದಿದ್ದಾರೆ. ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟವೇರ್ ಉದ್ಯೋಗಿಯಾಗಿರುವ 29 ವರ್ಷದ ಸಂತ್ರಸ್ತ ಯುವತಿಗೆ ಆರೋಪಿ ಆ್ಯಂಟೋನಿ ಹಲವು ವರ್ಷಗಳಿಂದ ಪರಿಚಯವಿದ್ದ. ಕಳೆದ ಭಾನುವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಯುವತಿಗೆ ಪರಿಚಯವಿದ್ದ ಆರೋಪಿ ಆ್ಯಂಟೋನಿ ಆಗಸ್ಟ್​ 29ರಂದು ಯುವತಿಯನ್ನು ಸ್ನೇಹಿತರ ಮನೆಗೆಂದು ಕರೆದೊಯ್ದಿದ್ದ. ಬಳಿಕ ಮೂವರೂ ಜೊತೆಗೆ ಕುಳಿತು ಮದ್ಯ ಸೇವಿಸಿದ್ದರು. ಕುಡಿದ ಮತ್ತಿನಲ್ಲಿದ್ದಾಗ ಅತ್ಯಾಚಾರ ಮಾಡಿದ್ದಾಗಿ ಯುವತಿ ಆರೋಪ ಮಾಡಿದ್ದಾಳೆ. ಈ ಸಂಬಂಧ ಬಾಣಸವಾಡಿ ಪೊಲೀಸ್​ ಠಾಣೆಗೆ ಯುವತಿ ದೂರು ನೀಡಿದ್ದರು. ಯುವತಿಯ ದೂರಿನ ಮೇರೆಗೆ ಇಬ್ಬರನ್ನೂ ಬಂಧಿಸಲಾಗಿದೆ. ಯುವತಿಯನ್ನು ಬಾಣಸವಾಡಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ಬೆಂಗಳೂರಿನಲ್ಲಿ ರಸ್ತೆ ಅಪಘಾತ: ಇಂಟರ್​ವ್ಯೂಗೆ ತೆರಳುತ್ತಿದ್ದ ಯುವತಿ ಸಾವು

ಬೆಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ಯುವತಿಯೊಬ್ಬರು ಬಲಿಯಾಗಿದ್ದಾರೆ.  ನಿನ್ನೆ ಮಧ್ಯಾಹ್ನ ಭದ್ರಪ್ಪ ಲೇ ಔಟಿನಲ್ಲಿ ಹಿಂಬದಿಯಿಂದ ಬರುತ್ತಿದ್ದ ಕ್ಯಾಂಟರ್ ಸ್ಕೂಟರ್ ಗೆ ಢಿಕ್ಕಿಯಾಗಿ ಘಟನೆ ನಡೆದಿದೆ. ಕೆಂಗೇರಿ ನಿವಾಸಿ ಗಂಗಾ (22) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.  ಯುವತಿ ಕೆಲಸಕ್ಕಾಗಿ ಇಂಟರ್​ವ್ಯೂಗೆ ತೆರಳುತ್ತಿದ್ದರು. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read:

ಗೋಕುಲಾಷ್ಟಮಿಯ ಪೂರ್ಣ ಫಲ ಪ್ರಾಪ್ತಿಯಾಗಲು ರಾಧಾ ಜನ್ಮಾಷ್ಟಮಿ ಆಚರಿಸಬೇಕು; ರಾಧಾ ಅಷ್ಟಮಿ ಸಿದ್ಧತೆ, ಆಚರಣೆ ಹೇಗೆ?

ಬೆಳಗಾವಿಯಲ್ಲಿ 15 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; 20 ದಿನಗಳ ಹಿಂದೆ ನಡೆದ ಘಟನೆ, ನಾಲ್ವರ ಬಂಧನ

(two Nigerians allegedly rape woman techie in banasawadi bangalore)

Read Full Article

Click on your DTH Provider to Add TV9 Kannada