ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಕಿರಿಕ್, ಶ್ರೀರಾಂಪುರದ ಬಾರ್ ಬಳಿ ಮರ್ಡರ್
ಶ್ರೀರಾಂಪುರದಲ್ಲಿ ನೆತ್ತರು ಹರಿದಿದೆ. ಕತ್ತಲಾಯ್ತು.. ನೈಟ್‌ಕರ್ಫ್ಯೂ ಶುರುವಾಗೋ ಸಮಯ ಹತ್ತಿರ ಬರ್ತಿದೆ ಅನ್ನೋ ಸಮಯದಲ್ಲೇ ಬಾರ್ ಒಂದರ ಬಳಿ ಬರ್ಬರ ಹತ್ಯೆಯಾಗಿದೆ. ಏರಿಯಾದ ಜನರಲ್ಲಿ ಮತ್ತೆ ಭಯ ಆವರಿಸಿದೆ. ಶ್ರೀರಾಂಪುರದಲ್ಲಿ ಗಲ್ಲಿ ಗಲ್ಲಿಯಲ್ಲಿ ಮತ್ತೆ ಖಾಕಿ ಬೂಟಿನ ಸದ್ದು ಶುರುವಾಗಿದೆ.
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಕೊನೆಗೆ ಆ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ನಡೆದಿದೆ. ಶ್ರೀರಾಂಪುರ ನಿವಾಸಿಯಾದ ಆನಂದ್ ಅದೇ ಏರಿಯಾದಲ್ಲಿ ಟೈಲರಿಂಗ್ ಮಾಡ್ಕೊಂಡು ಜೀವನ ಸಾಗಿಸ್ತಿದ್ದ. ಆದ್ರೆ ಕೆಲ ತಿಂಗಳಿಂದ ಆನಂದ್ ಮನೆಗೆ ಹೋಗದೆ ಬೆಳಗಾದ್ರೆ ಬಾರ್, ಕತ್ತಲಾದ್ರೆ ಸ್ನೇಹಿತರ ರೂಮ್‌ನಲ್ಲಿ ಠಿಕಾಣಿ ಹಾಕ್ತಿದ್ದನಂತೆ. ನಿನ್ನೆಯೂ ಕೂಡ ಎಂದಿನಂತೆ ಶ್ರೀರಾಂಪುರದಲ್ಲಿನ ಅನಿಲ್ ಬಾರ್‌ಗೆ ತೆರಳಿದ್ದಾನೆ. ಇದೇ ವೇಳೆ ಮೀನು ವ್ಯಾಪಾರಿ ಲೋಹಿತ್ ಅನ್ನೋನು ಕೂಡ ಬಾರ್‌ಗೆ ಬಂದಿದ್ದಾನೆ.
ಲೋಹಿತ್ ಹಾಗೂ ಆನಂದ್ ನಡುವೆ ಒಂದು ವಾರದ ಹಿಂದೆಯಷ್ಟೇ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತಂತೆ. ಇದೇ ವಿಚಾರ ಮುಂದಿಟ್ಟುಕೊಂಡು ನಿನ್ನೆ ಇಬ್ಬರು ಮತ್ತೆ ಜಗಳಕ್ಕೆ ಮುಂದಾಗಿದ್ದಾರೆ. ಕೊನೆಗೆ ಕೈ ಕೈ ಮಿಲಾಯಿಸಿದ್ದಾರೆ. ಆಗ ಲೋಹಿತ್ ಬಾರ್‌ನಲ್ಲಿದ್ದ ಚಾಕು ತೆಗೆದುಕೊಂಡು ಅಟ್ಯಾಕ್ ಮಾಡಿದ್ದಾನೆ. ಆನಂದ್ ಗುಪ್ತಾಂಗಕ್ಕೆ ಚುಚ್ಚಿ ಗಾಯಗೊಳಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದ ಆನಂದ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಆನಂದ್ ಸಾವಿನ ಸುದ್ದಿ ಕೇಳಿ ಮನೆಯವ್ರು ಶಾಕ್ ಆಗಿದ್ದಾರೆ.
ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಅರೆಸ್ಟ್ ಬಾರ್ ಬಳಿ ನಡೆದ ಹತ್ಯೆ ಸುದ್ದಿ ಗೊತ್ತಾಗ್ತಿದ್ದಂತೆ ಪೊಲೀಸರು ದೌಡಾಯಿಸಿ ಬಂದಿದ್ದಾರೆ. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಸ್ಥಳೀಯರ ಮಾಹಿತಿ ಆಧರಿಸಿ ಆರೋಪಿ ಲೋಹಿತ್ ಬಂಧನಕ್ಕೆ ಬಲೆ ಬೀಸಿದ್ದಾರೆ. ಅದೇ ಏರಿಯಾದಲ್ಲಿದ್ದುಕೊಂಡೆ ಕಣ್ಣಾಮುಚ್ಚಾಲೆ ಆಡ್ತಿದ್ದ ಆರೋಪಿ ಲೋಹಿತ್‌ನನ್ನ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಭೂಕಂಪನ; 3.9ರಷ್ಟು ತೀವ್ರತೆ ದಾಖಲು, ಭಯದಲ್ಲಿ ಜನ
ಮಾನವೀಯತೆಯ ಕಗ್ಗೊಲೆ: ನಾಯಿಗಳ ಬಾಯಿಗೆ ಆ್ಯಸಿಡ್ ಹಾಕಿ ಕೊಲೆಗೈದ ಪಾಪಿಗಳು..!