Schools Reopen: ನಾಳೆಯಿಂದ 6 ರಿಂದ 8ನೇ ತರಗತಿ ಆರಂಭ, ಟಫ್ ರೂಲ್ಸ್ ಜೊತೆ 18 ತಿಂಗಳಿಂದ ಮುಚ್ಚಿದ್ದ ಸ್ಕೂಲ್ ಓಪನ್‌ಗೆ ಸಿದ್ಧತೆ
ಮಹಾಮಾರಿ ಕೊರೊನಾದಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 18 ತಿಂಗಳು ಮಕ್ಕಳಿಗೆ ಮನೆಯೇ ಪಾಠ ಶಾಲೆಯಾಗಿತ್ತು. ಮಕ್ಕಳು ಶಾಲೆಗೆ ಹೋಗದೆೇ, ಎಕ್ಸಾಂ ಬರೆಯದೇ ಪಾಸ್ ಕೂಡ ಆಗಿದ್ರು. ಸ್ಕೂಲ್‌ನಲ್ಲಿ ಪಾಠ ಕೇಳುತ್ತಿದ್ದ ಮಕ್ಕಳು ಆನ್‌ಲೈನ್ ಕ್ಲಾಸ್‌ನಲ್ಲೇ ಪಾಠ ಕೇಳಬೇಕಾಗಿತ್ತು. ಗೆಳೆಯರ ಜೊತೆ ಆಟ ಆಡದೇ ಸಾಕಷ್ಟು ದಿನಗಳೇ ಕಳೆದು ಹೋಗಿತ್ತು. ಈಗ ಎಲ್ಲದ್ದಕ್ಕೂ ಸಮಯ ಬಂದಿದೆ. ಬ್ಯಾಗ್ ಏರಿಸ್ಕೊಂಡು, ಸ್ಕೂಲ್ಗೆ ಹೋಗೋಕೆ ಟೈಂ ಫಿಕ್ಸ್ ಆಗಿದೆ.
ಬೆಂಗಳೂರು: ಕಳೆದ ತಿಂಗಳ 23 ರಿಂದ 9, 10ನೇ ಮತ್ತು ಪಿಯು ತರಗತಿಗಳನ್ನ ಆರಂಭಿಸಿದ್ದ ಶಿಕ್ಷಣ ಇಲಾಖೆ(Education Department) ಇನ್ನೊಂದು ಹೆಜ್ಜೆ ಮುಂದೆ ಹೋಗಿ 6ರಿಂದ 8ನೇ ತರಗತಿ ಆರಂಭಿಸಲು ನಿರ್ಧರಿಸಿದೆ. ಕಳೆದ ವಾರ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಸೆಪ್ಟೆಂಬರ್ 6 ಅಂದ್ರೆ ನಾಳೆಯಿಂದ 6, 7, 8 ನೇ ತರಗತಿ ಆರಂಭ ಆಗಲಿದೆ. ದಿನದಲ್ಲಿ ಅರ್ಧ ದಿನ ಮಾತ್ರ ಶಾಲೆ ಇರಲಿದ್ದು, ಬೆಳಗ್ಗೆ 10 ರಿಂದ 1.30 ರವರೆಗೆ ಮಾತ್ರ ತರಗತಿ ನಡೆಯಲಿದೆ. ಶಾಲೆಗಳ ಆರಂಭಕ್ಕೆ ಸರ್ಕಾರ ಗೈಡ್ಲೈನ್ಸ್ ಬಿಡುಗಡೆ ಮಾಡಿದ್ದು, ಆ ಗೈಡ್‌ಲೈನ್ಸ್‌ನಲ್ಲಿ ಏನೇನಿದೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.
ಸ್ಕೂಲ್ ಗೈಡ್‌ಲೈನ್ಸ್ 6, 7, 8ನೇ ತರಗತಿ ಆರಂಭಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದು, ಕೊವಿಡ್ ಮಾರ್ಗಸೂಚಿ ಅನ್ವಯ ಶಾಲೆಗಳ ಆರಂಭಕ್ಕೆ ಸೂಚಿಸಲಾಗಿದೆ. ಎರಡಕ್ಕಿಂತ ಪಾಸಿಟಿವಿಟಿ ರೇಟ್ ಕಡಿಮೆ ಇರುವಲ್ಲಿ ಮಾತ್ರ ಶಾಲೆ ಓಪನ್ ಮಾಡಲು ಅನುಮತಿ ನೀಡಿದ್ದಾರೆ. ಸೋಮವಾರದಿಂದ ಶುಕ್ರವಾರ, ಅಂದರೆ ಒಟ್ಟು 5 ದಿನ ಶಾಲೆ ತೆರೆಯಬೇಕು. ಉಳಿದ 2 ದಿನ ಶಾಲೆ ಸ್ವಚ್ಛಗೊಳಿಸಬೇಕು ಅಂತ ಸರ್ಕಾರ ಸೂಚಿಸಿದೆ. ಶೇಕಡಾ 50ರಷ್ಟು ಮಕ್ಕಳು ಮಾತ್ರ ಶಾಲೆಗೆ ಹಾಜರಾಗಬೇಕು. ದಿನ ಬಿಟ್ಟು ದಿನ 50ರಷ್ಟು ಮಕ್ಕಳಿಗೆ ಕ್ಲಾಸ್ ನಡೆಯಲಿದೆ. ಶಾಲೆಗೆ ಬರೋದಕ್ಕೆ ವಿದ್ಯಾರ್ಥಿಗಳಿಗೆ ಭೌತಿಕ ಹಾಜರಾತಿ ಕಡ್ಡಾಯವಾಗಿರೋದಿಲ್ಲ. ಆನ್ಲೈನ್ ಅಥವಾ ಪರ್ಯಾಯ ವಿಧಾನದಲ್ಲೂ ಹಾಜರಾಗಬಹುದು ಅಂತಾ ಸರ್ಕಾರ ಸ್ಪಷ್ಟಪಡಿಸಿದೆ. ಶಾಲೆಗಳಲ್ಲಿ ಅಂತರ ಕಾಪಾಡಲು ಮಕ್ಕಳ ತಂಡ ರಚನೆಗೆ ಸೂಚಿಸಲಾಗಿದೆ. 15 ರಿಂದ 20 ವಿದ್ಯಾರ್ಥಿಗಳ ತಂಡವನ್ನ ರಚಿಸಬೇಕು. ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳಿಗೆ ರೂಲ್ಸ್ ಪಾಲನೆ ಕಡ್ಡಾಯ. ಹಾಗೂ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದಿರಬೇಕು. ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ಸೂಚಿಸಿದೆ.
ಸದ್ಯಕ್ಕಿಲ್ಲ 1ರಿಂದ 5ನೇ ತರಗತಿ ಓಪನ್ 6 ರಿಂದ 8ನೇ ತರಗತಿ ಆರಂಭದ ಬೆನ್ನಲೆ ಶಿಕ್ಷಣ ಸಚಿವರು ಪ್ರಾಥಮಿಕ ಶಾಲೆಗಳ ಆರಂಭದ ಉತ್ಸಾಹದಲ್ಲಿದ್ರು. ಶೀಘ್ರದಲ್ಲಿಯೇ ಶಾಲೆ ಆರಂಭ ಮಾಡೋದಾಗಿ ಹೇಳಿದ್ರು. ಆದ್ರೆ ಶಿಕ್ಷಣ ಸಚಿವರ ಉತ್ಸಾಹಕ್ಕೆ ಆರೋಗ್ಯ ಇಲಾಖೆ ಶಾಕ್ ನೀಡಿದೆ. ಸದ್ಯ 1ರಿಂದ 5ರವರೆಗೆ ಪ್ರಾಥಮಿಕ ಶಾಲೆಗಳ ಆರಂಭದ ಚಿಂತನೆ ಇಲ್ಲ ಅಂತ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಕೇರಳ ಸೇರಿದಂತೆ ಪಕ್ಕದ ರಾಜ್ಯಗಳಲ್ಲಿ ಕೊರೊನಾ ಏರಿಕೆಯಾಗುತ್ತಿದೆ. ಅಲ್ದೆ ಸಾಲು ಸಾಲು ಹಬ್ಬಗಳು ಮುಂದೆ ಇವೆ. ಹೀಗಾಗಿ ಸದ್ಯ ಒಂದರಿಂದ ಐದರವೆಗಿನ ಪ್ರಾಥಮಿಕ ಶಾಲೆಗಳ ಆರಂಭದ ಚಿಂತನೆ ಸರ್ಕಾರದ ಮುಂದೆ ಇಲ್ಲ. ನಾಳೆಯಿಂದ ಆರಂಭ ಆಗೋ 6ರಿಂದ 8ನೇ ತರಗತಿಗಳ ಸ್ಥಿತಿ ನೋಡಿ ಮುಂದೆ ಪ್ರಾಥಮಿಕ ಶಾಲೆ ಓಪನ್ ಸರ್ಕಾರ ಪ್ಲ್ಯಾನ್ ಮಾಡಲಿದೆ.
ಒಟ್ನಲ್ಲಿ ಕೊರೊನಾ ಮೂರನೇ ಅಲೆ ಆತಂಕ ಇನ್ನು ಮುಗಿದಿಲ್ಲ. ಇತಂಹ ಸ್ಥಿತಿಯಲ್ಲಿಯೇ ಶಿಕ್ಷಣ ಇಲಾಖೆ ಶಾಲೆ ಆರಂಭಕ್ಕೆ ಮುಂದಾಗಿದೆ. ಈಗಾಗಾಲೇ ಶಾಲೆಗಳಲ್ಲಿ ಮಕ್ಕಳಿಗೆ ಬೇಕಾದ ಸಿದ್ಧತೆಗಳನ್ನ ಶಿಕ್ಷಣ ಇಲಾಖೆ ಮಾಡಿಕೊಂಡಿದೆ. ಮಕ್ಕಳು ಕೂಡ ಹೊಸ ಭರವಸೆಯೊಂದಿಗೆ ನಾಳೆಯಿಂದ ಶಾಲೆಗಳತ್ತ ಹೆಜ್ಜೆ ಹಾಕೋಕೆ ರೆಡಿಯಾಗುತ್ತಿದ್ದಾರೆ.
ಇದನ್ನೂ ಓದಿ: Money Heist 5: ‘ಮನಿ ಹೈಸ್ಟ್ 5’ ಮೋಡಿಗೆ ಸಿಲುಕಿದ ನಟಿ ಕೀರ್ತಿ ಸುರೇಶ್: ನಾಯಿ ಜೊತೆಗಿನ ವಿಡಿಯೋ ವೈರಲ್